For the best experience, open
https://m.hosakannada.com
on your mobile browser.
Advertisement

CM Siddaramaiah: ಫ್ರೀ ಬಸ್ಸಿನಲ್ಲಿ ಓಡಾಡೋ ಮಹಿಳೆಯರಿಗೆ ಬೊಂಬಾಟ್ ಸುದ್ದಿ - ಮತ್ತೊಂದು ಭರ್ಜರಿ ಗುಡ್ ಗಿಫ್ಟ್ ಕೊಟ್ಟ ಸರ್ಕಾರ!!

10:38 PM Feb 05, 2024 IST | ಹೊಸ ಕನ್ನಡ
UpdateAt: 10:40 PM Feb 05, 2024 IST
cm siddaramaiah  ಫ್ರೀ ಬಸ್ಸಿನಲ್ಲಿ ಓಡಾಡೋ ಮಹಿಳೆಯರಿಗೆ ಬೊಂಬಾಟ್ ಸುದ್ದಿ    ಮತ್ತೊಂದು ಭರ್ಜರಿ ಗುಡ್ ಗಿಫ್ಟ್ ಕೊಟ್ಟ ಸರ್ಕಾರ

CM Siddaramaiah: ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಶಕ್ತಿ ಯೋಜನೆ'(Shakthiyojane)ಯಡಿ ಈವರೆಗೂ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ. ಈ ಬೆನ್ನಲ್ಲೇ ಸರ್ಕಾರವು ಫ್ರೀ ಬಸ್ಸಿನಲ್ಲಿ ಓಡಾಡೋ ಮಹಿಳೆಯರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

Advertisement

ಇದನ್ನೂ ಓದಿ: PM Modi: ಲೋಕಸಭೆ ಚುನಾವಣೆಯಲ್ಲಿ BJP ಹಾಗೂ NDA ಕೂಟ ಗೆಲ್ಲೋ ಸ್ಥಾನಗಳೆಷ್ಟು ಗೊತ್ತಾ?! ಮೋದಿ ನುಡಿದ ಭವಿಷ್ಯ ಕೇಳಿ ವಿಪಕ್ಷಗಳೇ ಶಾಕ್

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ವತಿಯಿಂದ ವಿಧಾನಸೌಧದ(Vidhanasoudha) ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ "100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸು( ಅಶ್ವಮೇಧ - ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್)ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ ಸಿದ್ದರಾಮಯ್ಯನವರು ಬಳಿಕ ಮಾತನಾಡಿ ಮುಂದಿನ ವರ್ಷದೊಳಗೆ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲು 1,000 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ತಿಳಿಸಿದ್ದಾರೆ.

Advertisement

ಬಳಿಕ ಮಾತನಾಡಿದ ಅವರು ರಾಜ್ಯದ ಜನರಿಗೆ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ ಒಟ್ಟು 4 ಕಾರ್ಪೋರೇಷನ್‍ಗಳು ಬಸ್ಸುಗಳ ಸೇವೆಯನ್ನು ಒದಗಿಸುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿರಲಿಲ್ಲ. ಈಗ ನಾವು ಹೊಸ ಬಸ್‌ಗಳ ಸೇರ್ಪಡೆಗೆ ಚಾಲನೆ ನೀಡಿದ್ದೇವೆ ಎಂದರು.

ಖುಷಿಯ ವಿಚಾರ ಅಂದ್ರೆ ಈ ಅಶ್ವಮೇಧ ಬಸ್ಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್ಗಳು ಬರಲಿವೆ. ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್ಗಳಿಗೆ ಚಾಲನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

52 ಸೀಟುಗಳಿರುವ ಈ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.

Advertisement
Advertisement