ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

CM Siddaramaiah: KSRTC ಯ ಪುರುಷ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ !!

CM Siddaramaiah: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದ ರಾಜ್ಯ ಸರಕಾರ ಈ ಬೆನ್ನಲ್ಲೇ ಅವರು ಪುರುಷ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
08:46 AM Jun 21, 2024 IST | ಸುದರ್ಶನ್
UpdateAt: 08:46 AM Jun 21, 2024 IST
Advertisement

C M Siddaramaiah: ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ 'ಶಕ್ತಿ ಯೋಜನೆ'(Shakti Yojane) ಜಾರಿಯಾಗಿ ಇದೀಗ ಒಂದು ವರ್ಷಗಳು ಸಂದಿವೆ. ಜೊತೆಗೆ ಲೋಕಸಭಾ ಚುನಾವಣೆಯೂ ಮುಗಿದಿದೆ. ಹೀಗಾಗಿ ಈ ಯೋಜನೆ ರದ್ದಾಗುವುದು ಪಕ್ಕಾ ಎಂಬ ಮಾತು ಕೇಳಿಬಂದಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು(CM Siddaramaiah)ಯಾವುದೇ ಕಾರಣಕ್ಕೂ ಇದು ರದ್ದಾಗುವುದಿಲ್ಲ, ನಮ್ಮ ಸರ್ಕಾರ ಇರುವವರೆಗೂ ಇರುತ್ತದೆ ಎಂದು ಹೇಳಿ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಈ ಬೆನ್ನಲ್ಲೇ ಅವರು ಪುರುಷ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Advertisement

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ1ಆರೋಪಿ ಪವಿತ್ರಾಗೌಡ ಜೈಲುಪಾಲು; ಎ2 ಆರೋಪಿ ನಟ ದರ್ಶನ್ ಪೊಲೀಸ್ ಕಸ್ಟಡಿಗೆ

ಹೌದು, ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಹೀಗೆ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ KSRTC ಕೂಡ ಟಿಕೆಟ್ ಬೆಲೆ ಏರಿಸಲು(Ticket Price Hike)ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ತನ್ನ ಹೆಚ್ಚಿನ ಬಸ್ಸುಗಳು ಡೀಸೆಲ್(Diesel) ನಲ್ಲಿ ಚಲಿಸುವುದರಿಂದ, ಒಂದು ಲೀಟರ್ ಡೀಸೆಲ್ ಬೆಲೆಯನ್ನು 3 ರೂ.ಗಳಷ್ಟು ಹೆಚ್ಚಿಸಿರುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರವು ಸಾರಿಗೆ ಸಂಸ್ಥೆಗೂ ಮುಳವಾಗಿದ್ದು, ಟಿಕೆಟ್ ದರ ಏರಿಕೆ ಅನಿವಾರ್ಯ ಎನ್ನಲಾಗಿತ್ತು.

Advertisement

ಇದು ಪುರುಷ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿತ್ತು. ಸಾಮಾನ್ಯವಾಗಿ ಪುರುಷರು ದುಡ್ಡು ಕೊಟ್ಟೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಉಚಿತವಾಗಿ ಓಡಾಡುವ ಕಾರಣ ಮನೆಯ ಪುರುಷರೂ ಅವರೊಂದಿಗೆ ಹೋಗುವುದು ಅನಿವಾರ್ಯ. ಹೀಗಾಗಿ ಟಿಕೆಟ್ ದರ ಏರಿಕೆ ಅವರ ಜೇಬಿಗೆ ಕತ್ತರಿ ಹಾಕುವುದು ಪಕ್ಕವಾಗಿತ್ತು. ಆದರೀಗ ಸಿದ್ದರಾಮಯ್ಯ ಇದನ್ನು ಅಲ್ಲಗಳೆದಿದ್ದಾರೆ. ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಸುವುದಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಿದ್ದರಾಮಯ್ಯನವರು KSRTC ಬಸ್ ಗ್ ಟಿಕೆಟ್ ದರವನ್ನು ಏರಿಕೆ ಮಾಡುವಂತಹ ಯಾವುದೇ ರೀತಿಯ ಪ್ರಸ್ತಾಪ ನಮ್ಮ ಸರ್ಕಾರದ ಮುಂದಿಲ್ಲ. ಜನರು ಗೊಂದಲಕ್ಕೊಳಗಾಗಬೇಡಿ. ಎಂದಿನಂತೆ ಟಿಕೆಟ್ ದರ ಸ್ಥಿರವಾಗಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಇದರಿಂದ ಪ್ರಯಾಣಿಕರು ನೆಮ್ಮದಿಯಿಂದ ಇರುವಂತಾಗಿದೆ.

ಅಂದಹಾಗೆ KSRTC ಪ್ರತಿದಿನ 6.2 ಲಕ್ಷ ಲೀಟರ್ ಡೀಸೆಲ್ ಅನ್ನು ಉಪಯೋಗಿಸುತ್ತದೆ. ಮತ್ತು ಇಂಧನ ಬೆಲೆ ಏರಿಕೆಯ ನಂತರ, ನಿಗಮವು ಇಂಧನಕ್ಕಾಗಿ ದಿನಕ್ಕೆ ಹೆಚ್ಚುವರಿಯಾಗಿ 18.2 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಾಗಿದೆ. 2023ರಲ್ಲಿ ಕೆಎಸ್‌ಆರ್ಟಿಸಿ 1,828 ಕೋಟಿ ರೂ.ಗಳ ಡೀಸೆಲ್ ಖರೀದಿಸಿತ್ತು. ಇದು ತಿಂಗಳಿಗೆ 5.4 ಕೋಟಿ ರೂ ಮತ್ತು ವರ್ಷಕ್ಕೆ 65 ಕೋಟಿ ರೂ.ಗಳವರೆಗೆ ಬರುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ 4 ಜನ ಮಹಿಳೆಯರು ತುಳಸಿ ಪೂಜೆ ಮಾಡಿದರೆ ಆ ಮನೆಗೆ ಮಹಾ ಪಾಪ ಸುತ್ತಿಕೊಳ್ಳುತ್ತೆ!

Advertisement
Advertisement