For the best experience, open
https://m.hosakannada.com
on your mobile browser.
Advertisement

Cleaning Home: ಮನೆಯೊಳಗೆ ಇರುವೆ ಕಾಟ ತಪ್ಪಿಸಲು ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು!

Cleaning Home: ಇರುವೆಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಆರೋಗ್ಯಕ್ಕೆ ಅಪಾಯವಿದೆ. ಅದಕ್ಕಾಗಿ ನೀವು ನೈಸರ್ಗಿಕ ಮನೆಮದ್ದನ್ನು ಬಳಸಬಹುದು.
02:38 PM May 26, 2024 IST | ಸುದರ್ಶನ್
UpdateAt: 02:38 PM May 26, 2024 IST
cleaning home  ಮನೆಯೊಳಗೆ ಇರುವೆ ಕಾಟ ತಪ್ಪಿಸಲು ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು
Advertisement

Cleaning Home: ಇರುವೆಗಳು ಯಾವಾಗಲೂ ಗುಂಪು ಗುಂಪಾಗಿ ಮನೆ ಒಳಗಡೆ ನುಸುಳುತ್ತಾ, ಅವುಗಳು ಎಲ್ಲೆಂದರಲ್ಲಿ ಚಲಿಸುತ್ತ ಸಿಕ್ಕ ಸಿಕ್ಕ ಆಹಾರ ಪಾತ್ರೆಗೆ ನುಗ್ಗುತ್ತವೆ. ಅಂತಹ ವೇಳೆ ಇರುವೆಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಆರೋಗ್ಯಕ್ಕೆ ಅಪಾಯವಿದೆ. ಅದಕ್ಕಾಗಿ ನೀವು ನೈಸರ್ಗಿಕ ಮನೆಮದ್ದನ್ನು (Cleaning Home) ಬಳಸಬಹುದು. ಇದರಿಂದ ಹಣವು ಉಳಿತಾಯ, ಆರೋಗ್ಯವು ಸೇಫ್ ಆಗಿರುತ್ತೆ.

Advertisement

ದಾಲ್ಚಿನ್ನಿ:
ದಾಲ್ಚಿನ್ನಿ ಎಣ್ಣೆಯ ಬಾಟಲಿಯನ್ನು ಖರೀದಿಸಿ, ಅದರ ಕೆಲವು ಹನಿಗಳನ್ನು ನೀರಿಗೆ ಮಿಕ್ಸ್ ಮಾಡಿ ಇರುವೆಗಳು ಬರುವ ಜಾಗದಲ್ಲಿ ಚಿಮುಕಿಸಿ. ಹಾಗೆಯೇ ಕಿಟಕಿ, ಬಾಗಿಲುಗಳ ಮೂಲೆಗಳಲ್ಲಿ ದಾಲ್ಚಿನ್ನಿ ಇಟ್ಟರೆ, ಇರುವೆ, ಕೀಟಗಳು ಬರುವುದಿಲ್ಲ.

ಮೆಣಸು:
ಮೆಣಸಿನಕಾಯಿಯಂತಹ ಪದಾರ್ಥಗಳು ಇರುವೆಗಳನ್ನು ಹಿಮ್ಮೆಟ್ಟಿಸುತ್ತವೆ. ಹಾಗಾಗಿ ಇರುವೆಗಳು ಓಡಾಡುವ ಜಾಗದಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸು ಹಾಕಿ. ಇವುಗಳಿಂದ ಇರುವೆಗಳು ಹೋಗುತ್ತವೆ.

Advertisement

ನಿಂಬೆ ಸಿಪ್ಪೆ:
ನಿಂಬೆ ಸಿಪ್ಪೆಯನ್ನು ತೆಳುವಾಗಿ ಕತ್ತರಿಸಿ ಕಾಲು ಕಪ್ ಬೆಚ್ಚಗಿನ ನೀರನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಇದನ್ನು ಸೋಸಿಕೊಂಡು ಇರುವೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ. ಸಿಟ್ರಸ್ ಆಧಾರಿತ ಹಣ್ಣುಗಳು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಇದಕ್ಕಾಗಿ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳ ಸಿಪ್ಪೆಯನ್ನು ತೆಳುವಾಗಿ ಕತ್ತರಿಸಿ ಇರುವೆಗಳು ಓಡಾಡುವ ಜಾಗದಲ್ಲಿ ಇಡಿ. ಇದು ಇರುವೆಗಳನ್ನು ದೂರ ಇಡುತ್ತದೆ.

ಬೇವಿನ ಎಣ್ಣೆ:
ಸ್ವಲ್ಪ ಕ್ಯಾಸ್ಟೈಲ್ ಸೋಪ್, ಸ್ಪ್ರೇ ಬಾಟಲಿಗೆ 1 1/4 ಕಪ್ ನೀರು ತುಂಬಿಸಿ ಇದಕ್ಕೆ 1 ಚಮಚ ಬೇವಿನ ಎಣ್ಣೆಯನ್ನು ಸೇರಿಸಿ. ಬಾಟಲಿಯನ್ನು ಅಲ್ಲಾಡಿಸಿ ಇರುವೆಗಳು ಓಡಾಡುವ ಜಾಗದಲ್ಲಿ ಈ ಸ್ಪ್ರೇ ಸಿಂಪಡಿಸಿ.

ಕಾಫಿ ಬೀನ್ಸ್:
ಕಾಫಿಯ ವಾಸನೆ ಇರುವೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇರುವೆಗಳು ಓಡಾಡುವ ಜಾಗದಲ್ಲಿ ಕಾಫಿ ಪುಡಿಯನ್ನು ಉದುರಿಸಿ. ಇದು ಇರುವೆಗಳನ್ನು ದೂರವಿಡುತ್ತದೆ.

ವಿನೆಗರ್:
ವಿನೆಗರ್ ಅಸಿಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಇರುವೆಗಳು ಓಡಾಡುವ ಜಾಗದಲ್ಲಿ ವಿನೆಗರ್ ಸಿಂಪಡಿಸಿ.

ಅಡಿಗೆ ಸೋಡಾ:
ಬೇಕಿಂಗ್ ಸೋಡಾ ಇರುವೆಗಳನ್ನು ಓಡಿಸುತ್ತದೆ. ಅಡಿಗೆ ಸೋಡಾಕ್ಕೆ ಸಮಾನ ಪ್ರಮಾಣದ ಸಕ್ಕರೆ ಸೇರಿಸಿ ಇಟ್ಟ ಜಾಗದಲ್ಲಿ ಇರುವೆಗಳು ಸಾಮಾನ್ಯವಾಗಿ ಇರುವುದಿಲ್ಲ.

ಇದನ್ನೂ ಓದಿ: How To Clean Bathroom: ಈ ಆಹಾರ ಪದಾರ್ಥಗಳು ಬಾತ್ರೂಮ್ ಅನ್ನು ಫಳಫಳ ಬೆಳಗಿಸುವಲ್ಲಿ ಸಹಾಯಕಾರಿ; ನೀವು ಆಶ್ಚರ್ಯಗೊಳ್ಳುವುದು ಖಂಡಿತ

Advertisement
Advertisement
Advertisement