Vijayapura: ಕೆಲವೇ ಸಮಯದಲ್ಲಿ ಮಗುವಿನ ರಕ್ಷಣಾ ಕಾರ್ಯ ಪೂರ್ಣ; ಬದುಕಿ ಬಾ ಕಂದಾ ಎಂದು ಸರ್ವರ ಪ್ರಾರ್ಥನೆ
Vijayapura: ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿರುವ ಎರಡು ವರ್ಷದ ಪುಟ್ಟ ಕಂಎ ಸಾತ್ವಿಕ್ ರಕ್ಷಣೆಯ ಅಂತಿಮ ಕಾರ್ಯಾಚರಣೆ ಇನ್ನೇನು ಅಂತಿಮ ಹಂತ ತಲುಪಲಿದ್ದು, ಮಗುವನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗುತ್ತದೆ.
ಇದನ್ನೂ ಓದಿ: Telangana: 30 ಮಂಗಗಳ ಶವ ಇದ್ದ ಟ್ಯಾಂಕ್‌ನಿಂದ ಜನರಿಗೆ ನೀರು ಪೂರೈಕೆ
ಆಟವಾಡುತ್ತಿದ್ದ ಮಗು ಸಾತ್ವಿಕ್ ಮನೆ ಪಕ್ಕದಲ್ಲೇ ಇದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ. ನಿನ್ನ ಸಂಜೆಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬಾಲಕ 20 ಅಡಿ ಆಳದಲ್ಲಿ ಸಿಲುಕಿದ್ದಾನೆ ಎಂದು ಹೇಳಲಾಗಿದೆ. ಮಗುವನ್ನು ಸುರಕ್ಷಿತವಾಗಿ ಹೊರ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ.
ಇದನ್ನೂ ಓದಿ: Price Hike: ಬಿಸಿಲ ತಾಪ ಏರಿಕೆ - ತರಕಾರಿ, ಮಾಂಸದ ಬೆಲೆ ಗಗನಕ್ಕೆ !!
ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ ಕೊರೆಯಲಾಗಿದ್ದು, 6 ಅಡಿ ಅಡ್ಡ ರಂಧ್ರ ಮಾದರಿಯಲ್ಲಿ ಸುರಂಗ ಕೊರೆಯಲಾಗಿದೆ. ಸಾತ್ವಿಕ ಇರುವ ಸ್ಥಳ ತಲುಪಲು ಇನ್ನು ಅರ್ಧ ಅಡಿ ಮಾತ್ರ ಬಾಕಿ ಇರುವುದಾಗಿ ವರದಿಯಾಗಿದೆ. ಸಾತ್ವಿಕ್ ರಕ್ಷಣಾ ಕಾರ್ಯದಲ್ಲಿ ಇನ್ನೊಂದು ಕಲ್ಲು ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗೆ ಕೊಂಚ ಅಡ್ಡಿಯಾಗಿದೆ. ಬಾಲಕ ಸುರಕ್ಷಿತ್ ಸುರಕ್ಷಿತವಾಗಿದ್ದು, ಆಕ್ಸಿಜನ್ ಪೂರೈಕೆ ಮಾಡಲಾಗಿದೆ.
ಸಾತ್ವಿಕ್ ಕೆಳಗೆ ಕುಸಿಯದಂತೆ ಮೇಲಿಂದ ಎರಡೂ ಕಾಲಿಗೆ ಹಗ್ಗ ಕಟ್ಟಿದ್ದು, ಒಂದು ಹಗ್ಗ ಸುರಕ್ಷಿತವಾಗಿ ಸಾತ್ವಿಕ್ ಸ್ಥಿರವಾಗಿ ಹಿಡಿದಿದೆ
ಹೈದರಾಬಾದ್‌ನಿದ ಬಂದಿರುವ ಎನ್‌ಡಿಆರ್‌ಎಫ್ ತಂಡ, ರಾಜ್ಯದ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದೆ.
ಕೆಲವೇ ಸಮಯದಲ್ಲಿ ಇನ್ನು ಸುರಂಗ ತೆಗೆಯುವ ಕಾರ್ಯ ಪೂರ್ಣಗೊಳ್ಳಲಿದೆ. ರಕ್ಷಣಾ ಸಿಬ್ಬಂದಿ ಮಗುವನ್ನು ಹೊರತೆಗೆಯಲಿದ್ದಾರೆ. ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸ್ಥಳದಲ್ಲೇ ಮಾಡಲಾಗಿದ್ದು, ವೈದ್ಯರು ಉಪಸ್ಥಿತರಿದ್ದಾರೆ. ಮಗುವನ್ನು ಹೊರಗೆ ತಂದ ನಂತರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮಗು ಸುರಕ್ಷಿತವಾಗಿ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ.