ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chikkamagaluru: ಚಾರ್ಮಾಡಿ ಘಾಟಿಯಲ್ಲಿ 12 ಚಕ್ರದ ಲಾರಿ ಮತ್ತೆ ಲಾಕ್‌; ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಇದ್ದಾರೆಯೇ?

Chikkamagaluru: ಬಳ್ಳಾರಿಯಿಂದ ಸರಕನ್ನು ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿದ್ದ ಲಾರಿಯೊಂದು ಚಾರ್ಮಾಡಿ ಘಾಟಿಯಲ್ಲಿ ಲಾಕ್‌ ಆಗಿದೆ
11:26 AM Apr 04, 2024 IST | ಸುದರ್ಶನ್
UpdateAt: 11:48 AM Apr 04, 2024 IST

Chikkamagaluru: ಬಳ್ಳಾರಿಯಿಂದ ಸರಕನ್ನು ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿದ್ದ ಲಾರಿಯೊಂದು ಚಾರ್ಮಾಡಿ ಘಾಟಿಯಲ್ಲಿ ಲಾಕ್‌ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. 12 ಚಕ್ರದ ಲಾರಿಯು ಪೊಲೀಸರ ಕಣ್ಣು ತಪ್ಪಿಸಿ ಅದೇಗೆ ಹೋಯಿತು ಎನ್ನುವ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ.

Advertisement

ಇದನ್ನೂ ಓದಿ: South Stars: ʼಮಂಜುಮ್ಮೆಲ್‌ ಬಾಯ್ಸ್‌ʼ ಖ್ಯಾತಿಯ ನಟನ ಜೊತೆ ನಟಿ ಅಪರ್ಣಾ ದಾಸ್‌ ಮದುವೆ

ಸರಕಾರದ ಅಧಿಕೃತ ಆದೇಶದ ಪ್ರಕಾರ ಚಾರ್ಮಾಡಿ ಘಾಟಿಯಲ್ಲಿ ಹತ್ತು ಚಕ್ರದ ಬಸ್ಸು ಹಾಗೂ ಲಾರಿ ಸೇರಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಇದರ ಜೊತೆಗೆ ಇದೀಗ ಲೋಕಸಭೆ ಚುನಾವಣೆ ಬಂದಿರುವ ಕಾರಣ ಮಂಗಳುರು ಹಾಗೂ ಚಿಕ್ಕಮಗಳೂರು ಗಡಿಯಾಗಿರುವ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು, ಇತರೆ ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಹಾಗಾದರೆ ಅವರ ಕಣ್ಣು ತಪ್ಪಿಸಿ ಈ ಗಾಡಿ ಹೇಗೆ ಬಂತು ಎನ್ನುವುದು ಸಾರ್ವಜನಿಕರ ಪ್ರಶ್ನೆ.

Advertisement

ಇದನ್ನೂ ಓದಿ: Papmochani Ekadashi 2024: ಏಪ್ರಿಲ್ 5 ರಂದು ಏಕಾದಶೀಯ ಶುಭ ದಿನ; ಲಕ್ಷ್ಮೀ ನಾರಾಯಣನನ್ನು ಮೆಚ್ಚಿಸಲು ಈ ಕೆಲಸ ಮಾಡಿ

ಕಳೆದ ಮಾರ್ಚ್‌ 18 ರಂದು ಕೂಡಾ ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ 16 ಚಕ್ರದ ಸಿಮೆಂಟ್‌ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಲಾಕ್‌ ಆಗಿ ಜನರಿಗೆ ನಿಜಕ್ಕೂ ಸಂಕಷ್ಟಕ್ಕೀಡು ಮಾಡಿತ್ತು. ಇದೀಗ ಮತ್ತೊಮ್ಮೆ ಇಂತಹುದೇ ಘಟನೆ ನಡೆದಿದ್ದು, ಜನರು ಪರದಾಡುವಂತಾಗಿದೆ.

Advertisement
Advertisement
Next Article