For the best experience, open
https://m.hosakannada.com
on your mobile browser.
Advertisement

Channapattana: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆಗೆ ಫ್ಲಾನ್ - ಸಿ ಪಿ ಯೋಗೇಶ್ವರ್ ಹೊಸ ಬಾಂಬ್ !!

Channapattana: ಕುಮಾರಸ್ವಾಮಿ ಅವರಿಂದ ತೆರವಾಗಲಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ(By Election) ಸ್ಪರ್ಧಿಸಲು ಮುಂದಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
02:59 PM Jun 14, 2024 IST | ಸುದರ್ಶನ್
UpdateAt: 03:01 PM Jun 14, 2024 IST
channapattana  ಚನ್ನಪಟ್ಟಣ ಉಪಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆಗೆ ಫ್ಲಾನ್   ಸಿ ಪಿ ಯೋಗೇಶ್ವರ್ ಹೊಸ ಬಾಂಬ್
Advertisement

Channapattana: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್(Actor Darshan) ಅವರು ಕುಮಾರಸ್ವಾಮಿ ಅವರಿಂದ ತೆರವಾಗಲಿರುವ ಚನ್ನಪಟ್ಟಣ(Channapattana) ಉಪ ಚುನಾವಣೆಯಲ್ಲಿ(By Election) ಸ್ಪರ್ಧಿಸಲು ಮುಂದಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Advertisement

Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು - ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್ ಈಶ್ವರನ್ !!

ಹೌದು, ಚನ್ನಪಟ್ಟಣದಿಂದ ಎಚ್ ಡಿ ಕುಮಾರಸ್ವಾಮಿ ಅವರು ಶಾಸಕರಾಗಿದ್ದರು. ಆದರೀಗ ಅವರು ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣಕ್ಕೆ ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದೆ. ಹೀಗಾಗಿ ಡಿ.ಕೆ.ಬ್ರದರ್ಸ್(D K Brothers) ಸೇರಿ ನಟ ದರ್ಶನ್ ಅವರನ್ನು ಚನ್ನಪಟ್ಟಣ ಉಪಚುನಾವಣೆಗೆ ನಿಲ್ಲಿಸಲು ಫ್ಲಾನ್ ಮಾಡಿದ್ದರು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್(CP Yogeshwar) ಸ್ಪೋಟಕ ಹೇಳಿಕೆ ನೀಡಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು 'ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಡಿ.ಕೆ.ಸುರೇಶ್. ಹೇಳಿದ್ದರು. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ರು. ಅವರನ್ನ ಕಾಂಗ್ರೆಸ್ ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ.ಬ್ರದರ್ಸ್ ಫ್ಲಾನ್ ಮಾಡಿದ್ದರು. ಆ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಆ ವ್ಯಕ್ತಿ ಯಾರು ಅಂತ ನೀವೆ ಊಹೆ ಮಾಡಿಕೊಳ್ಳಿ' ಎಂದಿದ್ದಾರೆ. ಈ ಮೂಲಕ ದರ್ಶನ್ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು ಎಂದು ಯೋಗೇಶ್ವರ್ ಬಹಿರಂಗಪಡಿಸಿದ್ದಾರೆ.

Actor Darshan News: ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

Advertisement
Advertisement
Advertisement