ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chanappattana By Election: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?!

Channapattana By Election: ಬಿಜೆಪಿ-ಜೆಡಿಎಸ್ ನಡೆಯಂತೂ ದಿನದಿಂದ ದಿನಕ್ಕೆ ಕುತೂಹಲ ಹುಟ್ಟುಹಾಕುತ್ತಿದ್ದು ಯಾರಾಗುತ್ತಾರೆ ಮೈತ್ರಿ ಅಭ್ಯರ್ಥಿ ಎಂಬ ಪ್ರಶ್ನೆ ಹುಟ್ಟುಹಾಕಿದೆ.
02:39 PM Jun 26, 2024 IST | ಸುದರ್ಶನ್
UpdateAt: 02:41 PM Jun 26, 2024 IST
Advertisement

Channapattana By Election: ಲೋಕಸಭಾ ಚುನಾವಣೆ(Parliament Election) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಉಪಚುನಾವಣೆಯ (Assembly By Election) ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾಗಿದ್ದರೂ ಇನ್ನೂ ಅಭ್ಯರ್ಥಿಗಳ ಆಯ್ಕೆ ಕುತೂಹಲವಾಗಿಯೇ ಉಳಿದಿದೆ. ಅದರಲ್ಲೂ ಚನ್ನಪಟ್ಟಣ(Channapattana) ಅಭ್ಯರ್ಥಿಯ ಆಯ್ಕೆ ಅಂತೂ ಹೆಚ್ಚೆಂದೇ ಹೇಳಬಹುದು. ಬಿಜೆಪಿ-ಜೆಡಿಎಸ್ ನಡೆಯಂತೂ ದಿನದಿಂದ ದಿನಕ್ಕೆ ಕುತೂಹಲ ಹುಟ್ಟುಹಾಕುತ್ತಿದ್ದು ಯಾರಾಗುತ್ತಾರೆ ಮೈತ್ರಿ ಅಭ್ಯರ್ಥಿ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Advertisement

Renukaswamy: 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ; ಇಮೇಲ್‌ ಶೋಧ

Advertisement

ಹೌದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ(HbD Kumarswamy) ಅವರು ಸ್ಪರ್ಧಿಸಿದ ಕ್ಷೇತ್ರವಾದ ಚನ್ನಪಟ್ಟಣವು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರಮುಖವಾದುದು. ಇದೀಗ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ನಮ್ಮವರೇ ಗೆಲ್ಲಬೇಕೆಂಬುದು ಅವರ ಅಭಿಲಾಷೆ. ಅದು ಬಿಜೆಪಿ ಆಗಲಿ ಅಥವಾ ಜೆಡಿಎಸ್ ಆಗಲಿ, ಒಟ್ಟು ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ಇಂಗಿತ. ಅಲ್ಲದೆ ಕಾಂಗ್ರೆಸ್ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ.

ಜೆಡಿಎಸ್ ನಲ್ಲಿ ಯಾರಿಗೆ ಟಿಕೆಟ್ ?
ನಿಖಿಲ್‌ ಕುಮಾರಸ್ವಾಮಿಗೆ(Nikhil Kumarswamy) ಟಿಕೆಟ್ ನೀಡುವಂತೆ ಜೆಡಿಎಸ್ ಕಾರ್ಯಕರ್ತರಿಂದ ಕ್ಯಾಂಪೇನ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಒತ್ತಾಯ ಕೇಳಿಬರುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್(Nikhil Kumaraswamy) ಕಣಕ್ಕಿಳಿಸುವಂತೆ ಎನ್‌ಡಿಎ ಮೈತ್ರಿಕೂಟಕ್ಕೆ ಆಗ್ರಹ ಮಾಡಲಾಗುತ್ತಿದೆ.

ಬಿಜೆಪಿಯಲ್ಲಿ ಕೊಟ್ಟರೆ ಯಾರಿಗೆ ಟಿಕೆಟ್?
ಸಿ.ಪಿ.ಯೋಗೇಶ್ವರ್ (CP Yogeshwar)ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಸಿಪಿ ಯೋಗೇಶ್ವರ್ ಗೆ ತಾಲೂಕಿನ ನಾಡಿಮಿಡಿತ ಗೊತ್ತಿದೆ. ಕಾಂಗ್ರೆಸ್ ಎದುರಿಸಲು ಸಿಪಿವೈ ಸಮರ್ಥ ಅಭ್ಯರ್ಥಿ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಡಾ.ಮಂಜುನಾಥ್ ಗೆಲುವಿಗೆ ಸಿ.ಪಿ.ಯೋಗೇಶ್ವರ್ ಹೋರಾಟ ನಡೆಸಿದ್ದು, ಉಪಚುನಾವಣೆ ಟಿಕೆಟ್ ನೀಡುವಂತೆ ಚನ್ನಪಟ್ಟಣ ತಾಲೂಕು ಬಿಜೆಪಿ ಘಟಕ ಒತ್ತಾಯ ಮಾಡುತ್ತಿದೆ.

Vitla: ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ; ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ

Advertisement
Advertisement