ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chanakya Niti: ಈ ಅಭ್ಯಾಸಗಳಿದ್ದರೆ ನೀವು ಯಶಸ್ವಿ ವ್ಯಕ್ತಿಗಳಾಗುವುದು ಖಚಿತ ಎಂದಿದ್ದಾರೆ ಚಾಣಕ್ಯ.!

Chanakya Niti: ಆಚಾರ್ಯ ಚಾಣಕ್ಯರು ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಚಾಣಕ್ಯ ನೀತಿಯಲ್ಲಿ (Chanakya Niti) ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ
02:22 PM Jun 24, 2024 IST | ಕಾವ್ಯ ವಾಣಿ
UpdateAt: 02:22 PM Jun 24, 2024 IST
Advertisement

Chanakya Niti: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾನಾ ಪ್ರಯತ್ನ ಮಾಡಿದರೂ ನೀವೂ ಸೋಲು ಅನುಭವಿಸುತ್ತಿದ್ದರೆ, ಅದಕ್ಕೆ ಕಾರಣ ನಿಮ್ಮ ಅಭ್ಯಾಸಗಳು ಆಗಿರಬಹುದು. ಹೌದು, ನಿಮ್ಮಲ್ಲಿರುವ ಕೆಲವು ಅಭ್ಯಾಸ ನಿಮ್ಮನ್ನು ದಿಕ್ಕು ಬದಲಿಸಿರಬಹುದು. ಆದ್ದರಿಂದ ಆಚಾರ್ಯ ಚಾಣಕ್ಯರು ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಚಾಣಕ್ಯ ನೀತಿಯಲ್ಲಿ (Chanakya Niti) ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

Sonakshi Sinha Zaheer Iqbal Wedding: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ವಿರುದ್ಧ ಪ್ರತಿಭಟನೆ

Advertisement

ಅವರ ಮಾತನ್ನು ಅನುಸರಿಸಿದ ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ನೀವೂ ಕೂಡ ಕಡಿಮೆ ಸಮಯದಲ್ಲಿ ಜೀವನದಲ್ಲಿ ಯಶಸ್ಸನ್ನು ಹೊಂದಲು ಬಯಸಿದರೆ, ಅಂತಹ ಯಶಸ್ಸು ಪಡೆಯುವ ಉತ್ತಮ ಅಭ್ಯಾಸಗಳು ಯಾವುವು ಎಂಬುದು ಇಲ್ಲಿ ತಿಳಿಯಿರಿ.

ನೀವು ಜೀವನದಲ್ಲಿ ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯಲು ಬಯಸಿದರೆ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ನಿಮ್ಮಲ್ಲಿ ರೂಢಿಸಿಕೊಳ್ಳಿ. ಜ್ಞಾನವು ನಿಮ್ಮ ನಿಜವಾದ ಮಿತ್ರ ಮತ್ತು ಸಹಾಯಕ ಎಂದು ಚಾಣಕ್ಯ ಹೇಳುತ್ತಾನೆ. ಓದುವ ಮತ್ತು ಬರೆಯುವ ಅಭ್ಯಾಸವನ್ನು ಹೊಂದಿರುವ ವ್ಯಕ್ತಿಯು ಬಹಳ ಕಡಿಮೆ ಸಮಯದಲ್ಲಿ ಯಶಸ್ವಿಯಾಗುತ್ತಾನೆ.

ಚಾಣಕ್ಯರ ಪ್ರಕಾರ, ಯಾರ ಮಾತು ಸಭ್ಯ ಮತ್ತು ಮಧುರವಾಗಿರುತ್ತದೆಯೋ ಅವರು ಎಲ್ಲರಿಗೂ ಬೇಗನೇ ಇಷ್ಟವಾಗುತ್ತಾರೆ. ಕಹಿ ಮಾತುಗಳು ಮಿತ್ರನನ್ನೂ ಶತ್ರುವನ್ನಾಗಿ ಮಾಡುತ್ತವೆ, ಆದರೆ ಸಿಹಿ ಮಾತುಗಳು ಶತ್ರುವನ್ನೂ ಮಿತ್ರನನ್ನಾಗಿ ಮಾಡುತ್ತವೆ. ಸಿಹಿಯಾಗಿ ಮಾತನಾಡುವವನು  ಎಂದಿಗೂ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ ಮತ್ತು ಜನರು ಅವನಿಗೆ ಸಹಾಯ ಮಾಡಲು ಯಾವುದೇ ಸಂದರ್ಭದಲ್ಲೂ ಸಿದ್ಧರಿರುತ್ತಾರೆ.

ಚಾಣಕ್ಯರ ಪ್ರಕಾರ, ನಿಮ್ಮ ಗುರಿಯನ್ನು ರಹಸ್ಯವಾಗಿಟ್ಟುಕೊಳ್ಳಬೇಕು ಮತ್ತು ನಿರಂತರವಾಗಿ ಆ ಗುರಿಯ ಆಧಾರದ ಮೇಲೆ ಕೆಲಸ ಮಾಡಿ. ಗುರಿಯನ್ನು ಮರೆಮಾಚಿ ಕೆಲಸ ಮಾಡುವ ಅಭ್ಯಾಸವು ಅಲ್ಪಾವಧಿಯಲ್ಲೇ ನಿಮಗೆ ಯಶಸ್ಸನ್ನು ನೀಡುತ್ತದೆ.

​ಚಾಣಕ್ಯರ ಪ್ರಕಾರ ಮುಂಜಾನೆ ಬೇಗ ಏಳುವ ವ್ಯಕ್ತಿಯ ಮನಸ್ಸು ಮತ್ತು ದೇಹ ಯಾವಾಗಲೂ ತಾಜಾವಾಗಿರುತ್ತದೆ. ಬೇಗ ಏಳುವ ಮತ್ತು ಬೇಗ ಮಲಗುವ ಅಭ್ಯಾಸವನ್ನು ಹೊಂದುವ ಮೂಲಕ, ವ್ಯಕ್ತಿಯು ಕಡಿಮೆ ಸಮಯದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು.

ಕಷ್ಟಪಟ್ಟು ದುಡಿಯುವ ಅಭ್ಯಾಸವಿರುವ ವ್ಯಕ್ತಿ ಮುಂದೊಂದು ದಿನ ಖಂಡಿತವಾಗಿಯೂ ಯಶಸ್ವಿಯಾಗುತ್ತಾನೆ. ತನ್ನ ಪರಿಶ್ರಮದ ಆಧಾರದ ಮೇಲೆ ಮುನ್ನಡೆಯುವವನು ಬಹುಬೇಗ ಯಶಸ್ವಿಯಾಗುತ್ತಾನೆ.

​ಚಾಣಕ್ಯರ ಪ್ರಕಾರ, ಸಂಪತ್ತನ್ನು ಸಂಗ್ರಹಿಸದ ವ್ಯಕ್ತಿಯು ಕಷ್ಟದ ಸಮಯದಲ್ಲಿ ಹೆಚ್ಚು ತೊಂದರೆಗೆ ಸಿಲುಕುತ್ತಾನೆ. ಅದಕ್ಕೆ ತಕ್ಕಂತೆ ಹಣ ಕೂಡಿಡುವ ಮತ್ತು ಖರ್ಚು ಮಾಡುವ ಅಭ್ಯಾಸವು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಯಾವಾಗಲೂ ಕಷ್ಟದ ಸಂದರ್ಭಗಳನ್ನು ಎದುರಿಸಲು ತನಗಾಗಿ ಒಂದಿಷ್ಟು ಹಣವನ್ನು ಕೂಡಿಟ್ಟುಕೊಳ್ಳಬೇಕು.

ಚಾಣಕ್ಯರು ತನ್ನ ಸಂಪರ್ಕಗಳು ಮತ್ತು ಸಂಬಂಧಗಳ ಆಧಾರದ ಮೇಲೆ ಮಗಧ ಸಾಮ್ರಾಜ್ಯವನ್ನು ನಾಶಪಡಿಸಿದನು. ಚಾಣಕ್ಯರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯು ಸಮಾಜಮುಖಿ ಅಭ್ಯಾಸವನ್ನು ಹೊಂದಿರಬೇಕು.

Lord Ganesh: ಮನೆಯ ಮುಖ್ಯದ್ವಾರದ ಮೇಲೆ ಈ ದೇವರ ಚಿತ್ರ ಹಾಕಿದರೆ ಸಕಲ ಭಾಗ್ಯವು ನಿಮ್ಮದಾಗಲಿದೆ!

​​

Advertisement
Advertisement