Chanakya Niti: ಗಂಡಸರು ಮಹಿಳೆಯರನ್ನು ಇಂತಹ ಸ್ಥಿತಿಯಲ್ಲಿ ನೋಡಬಾರದು!
Chanakya Niti: ಆಚಾರ್ಯ ಚಾಣಕ್ಯರ ನೀತಿ (Chanakya Niti) ಶಾಸ್ತ್ರ ಸುಂದರ ಬದುಕು ಕಟ್ಟಿಕೊಡುವಲ್ಲಿ ದಾರಿ ತೋರುತ್ತದೆ. ಚಾಣಕ್ಯ ದೇಶ ಕಂಡ ಮಹಾನ್ ವಿದ್ವಾಂಸರಾಗಿದ್ದು, ಅವರ ನೀತಿ-ನಿಯಮಗಳು ನಮ್ಮ ಬದುಕಿಗೆ ಬೇಕಾದ ಎಲ್ಲಾ ಮೌಲ್ಯಗಳನ್ನು ಒದಗಿಸುತ್ತವೆ. ಇನ್ನು ಚಾಣಕ್ಯ ನೀತಿಯಲ್ಲಿ ಹೆಂಡತಿ ಇಂತಹ ಸ್ಥಿತಿಯಲ್ಲಿದ್ದಾಗ ಗಂಡಂದಿರು ನೋಡಬಾರದ ಕೆಲವು ಸಂಗತಿಗಳಿವೆ.
ಹೌದು, ಕೆಲವು ಸಂದರ್ಭಗಳಲ್ಲಿ ಪುರುಷರು ಮಹಿಳೆಯರನ್ನು ನೋಡಬಾರದು.
ಮಹಿಳೆ ಹಾಲುಣಿಸುವುದನ್ನು ಪುರುಷರು ನೋಡಬಾರದು. ಇದರಿಂದ ಮಗುವಿಗೆ ತೊಂದರೆ ಆಗಬಹುದು.
ಹೆಂಡತಿ ವೃತ ಆಚರಣೆ ಇದ್ದಾಗ ತಮ್ಮ ಆಹಾರವನ್ನು ಸೇವಿಸುವ ಸಂದರ್ಭ ಗಂಡಸರು ನೋಡಬಾರದು. ಇದರಿಂದಾಗಿ ಆಕೆ ಸರಿಯಾಗಿ ತಿನ್ನಲು ಸಾಧ್ಯವಿಲ್ಲ. ಇದರಿಂದ ನಿಮಗೆ ದೋಷ ಉಂಟಾಗುತ್ತದೆ.
ಇನ್ನು ಮಹಿಳೆಯರು ಸೀನುವಾಗ ಅವಳನ್ನು ನೋಡಬಾರದು. ಸೀನುವಾಗ ನೋಡುವ ವ್ಯಕ್ತಿಯೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಇದು ಅವರಿಗೆ ಮುಜುಗರ ಉಂಟು ಮಾಡುತ್ತದೆ.
ಇನ್ನು ಪತ್ನಿ ಸಹ ಬಟ್ಟೆ ಬದಲಾಯಿಸುವಾಗ ಆಕೆಯನ್ನು ಗಂಡ ನೋಡಬಾರದು. ಇಂಥ ಗಂಡಸರನ್ನು ಮಹಿಳೆಯರು ಎಂದಿಗೂ ಇಷ್ಟ ಪಡೋದಿಲ್ಲ.