ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

CET ಫಲಿತಾಂಶ- ಬೆಳ್ತಂಗಡಿ ಮೂಲದ, ಎಕ್ಸ್‌ಪರ್ಟ್ ಕಾಲೇಜಿನ ನಿಹಾರ್ ಎಸ್. ಆರ್ ರಾಜ್ಯಕ್ಕೆ ಪ್ರಥಮ

2024ರ KCET ಫಲಿತಾಂಶವನ್ನು ಕರ್ನಾಟಕದ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಬೆಳ್ತಂಗಡಿ ತಾಲ್ಲೂಕು ಮೂಲದ, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು(Expert PU College) ವಿದ್ಯಾರ್ಥಿ  ನಿಹಾರ್ ಎಸ್. ಆರ್(Nihar S R) ರಾಜ್ಯಕ್ಕೆ ರ್ಯಾಂಕ್ ಪಡೆದಿದ್ದಾರೆ.
10:59 PM Jun 01, 2024 IST | ಸುದರ್ಶನ್ ಬೆಳಾಲು
UpdateAt: 10:13 AM Jun 02, 2024 IST
Advertisement

2024ರ KCET ಫಲಿತಾಂಶವನ್ನು ಕರ್ನಾಟಕದ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಬೆಳ್ತಂಗಡಿ ತಾಲ್ಲೂಕು ಮೂಲದ, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು(Expert PU College) ವಿದ್ಯಾರ್ಥಿ ನಿಹಾರ್ ಎಸ್. ಆರ್(Nihar S R) ರಾಜ್ಯಕ್ಕೆ ರ್ಯಾಂಕ್ ಪಡೆದಿದ್ದಾರೆ.

Advertisement

ಹೌದು, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ  ನಿಹಾರ್ ಎಸ್.ಆರ್ ಸಿಇಟಿ(CET) ಬಿಎನ್‌ವೈಎಸ್‌(BNYS) ಮತ್ತು ಬಿಎಸ್ಸಿ ಕೃಷಿಯಲ್ಲಿ(BSC Agriculture) ಪ್ರಥಮ ರ್ಯಾಂಕ್ ಪಡೆದರೆ, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 3ನೇ ಯಾಂಕ್, ಬಿ ಫಾರ್ಮಾ ಮತ್ತು ಡಿಫಾರ್ಮಾದಲ್ಲಿ 5ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್‌ನಲ್ಲಿ 12ನೇ ಬ್ಯಾಂಕ್ ಪಡೆದಿದ್ದಾರೆ.

ಕರ್ನಾಟಕ ಪರಿಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2 ಪ್ರಥಮ ರ್ರಂಕ್ ಸೇರಿ ಮೊದಲ 10 ರ್ಯಾಂಕ್ ಗಳಲ್ಲಿ 19 ರ್ಯಾಂಕ್ ಗಳಿಸಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

Advertisement

ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆಂದು ನಡೆದಿದ್ದ ಯುಜಿಸಿಇಟಿ- 2024ರ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಕಲ್ಯಾಣ್ ಡಿಪಾರ್ಮಾ, ಎಂ ಫಾರ್ಮಾ, ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.

ನಿಹಾರ್ ಎಸ್.ಆರ್. ಅವರು ಸಿಇಟಿ ಬಿಎನ್‌ವೈಎಸ್ ಮತ್ತು ಬಿಎಸ್ಸಿ ಕೃಷಿಯಲ್ಲಿ ಪ್ರಥಮ ರಾಂಕ್ ಪಡೆದರೆ, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 3ನೇ ರ್ಯಾಂಕ್, ಬಿ ಫಾರ್ಮಾ ಮತ್ತು ಡಿಫಾರ್ಮಾದಲ್ಲಿ 5ನೇ ಬ್ಯಾಂಕ್ ಹಾಗೂ ಇಂಜಿನಿಯರಿಂಗ್‌ನಲ್ಲಿ 12ನೆ ರಾಂಕ್ ಪಡೆದಿದ್ದಾರೆ.

ಸಂಜನಾ ಎಸ್‌.ಕಟ್ಟಿ ಅವರು ಬಿಎನ್‌ವೈಎಸ್‌ನಲ್ಲಿ 2ನೇ ಬ್ಯಾಂಕ್, ಬಿಎಸ್ಸಿ ಕೃಷಿಯಲ್ಲಿ 4ನೇ ರ್ಯಾಂಕ್, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 6ನೇ ರಾಂಕ್, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ಮಿಹಿರ್ ಗಿರೀಶ್ ಕಾಮತ್ ಅವರು ಬಿಎಸ್ಸಿ ಕೃಷಿಯಲ್ಲಿ ಎರಡನೇ ರ್ಯಾಂಕ್, ಸ್ವಸ್ತಿಕ್ ಎ.ಶರ್ಮ ಬಿಎನ್‌ವೈಎಸ್‌ನಲ್ಲಿ 6ನೇ ರ್ಯಾಂಕ್, ಆಕರ್ಷ್ ಎಸ್ಕಂಕನವಾಡಿ ಅವರು ಬಿಎಸ್ಸಿ ಕೃಷಿಯಲ್ಲಿ 8ನೇ ರ್ಯಾಂಕ್, ಸುಹಾಸ್.ಎಂ ಅವರು ಪಶು ವೈದ್ಯಕೀಯ ಹಾಗೂ ನರ್ಸಿಂಗ್ ನಲ್ಲಿ 9ನೇ ರ್ಬ್ಯಾಂಕ್, ಬಿಎನ್‌ವೈಎಸ್‌ನಲ್ಲಿ 10ನೇ ರ್ಯಾಂಕ್ ಹಾಗೂ ಪ್ರಣವ್ ಟಾಟಾ ಆ‌ರ್ ಅವರು ಬಿಎಸ್ಸಿ ಕೃಷಿಯಲ್ಲಿ 9ನೇ ರಾಂಕ್ ಪಡೆದಿದ್ದಾರೆ. ಏಳು ವಿಭಾಗದ ಮೊದಲ 15 ರ್ಯಾಂಕ್‌ಗಳಲ್ಲಿ ಎರಡು ಪ್ರಥಮ ಸೇರಿದಂತೆ ಒಟ್ಟು 7 ರಾಂಕ್‌ ಗಳನ್ನು ನಿಹಾರ್ ಎಸ್.ಆರ್. ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 20 ವರ್ಷಗಳಲ್ಲಿ ಬೋರ್ಡ್ ಸೇರಿ ನಾನಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 23 ಬಾರಿ ಪ್ರಥಮ ಬ್ಯಾಂಕ್ ಪಡೆದಿರುವ ಕಾಲೇಜು ಈ ವರ್ಷವೂ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು. 'ಶ್ರಮ ಏವ ಜಯತೆ' ಎಂಬ ಸಂಸ್ಥೆಯ ಧೈಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದರು.

ನಿಹಾರ್ ಎಸ್ ಆರ್ ಮೂಲತಃ ಬೆಳ್ತಂಗಡಿ(Belthangady) ತಾಲೂಕಿನ ಬೆಳಾಲು ಗ್ರಾಮದ ಸುದರ್ಶನ್ ಬಿ ಪ್ರವೀಣ್ ಮತ್ತು ರೂಪಾ ಕೆ ಎಸ್ ಗೌಡ ರವರ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ ಪಬ್ಲಿಕ್ ಸ್ಕೂಲ್ ಜಯಲಕ್ಷ್ಮಿಪುರಂ ಮೈಸೂರು ಹಾಗೂ ಬೀದರ್ ನ ಗುರುನಾನಕ್ ಪಬ್ಲಿಕ್ ಸ್ಕೂಲ್ ನಲ್ಲಿ ಮಾಡಿರುತ್ತಾರೆ. ಮತ್ತು ಹೈಸ್ಕೂಲು ಅನ್ನು ಬೆಂಗಳೂರಿನ ಶೇಷಾದ್ರಿಪುರಂ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿರುತ್ತಾರೆ. ಇದೀಗ ಪಿಯುಸಿ ಶಿಕ್ಷಣವನ್ನು ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಮುಗಿಸಿ ರ್ಯಾಂಕ್ ಪಡೆದು ಕಾಲೇಜಿಗೆ ಹಾಗೂ ತಂದೆ-ತಾಯಿಯರಿಗೆ ಹೆಮ್ಮೆ ತಂದಿದ್ದಾರೆ.

Related News

Advertisement
Advertisement