CET 2024 ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳೇ ಈ ಲಿಂಕ್ ಕ್ಲಿಕ್ ಮಾಡಿ, ಫಲಿತಾಂಶ ವೀಕ್ಷಿಸಿ
CET 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರು 2024 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET-2024) ಯ ಫಲಿತಾಂಶ ಶನಿವಾರ ಪ್ರಕಟವಾಗಿದೆ.
ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ https://karresults.nic.in ನಲ್ಲಿ ಲಭ್ಯವಿದ್ದು, ವಿವಿರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದುವರೆಗೂ ವಿದ್ಯಾರ್ಥಿಗಳು ಕಾತರದಿಂದ ನೋಡುತ್ತಿದ್ದ ದಿನ ಬಂದೇಬಿಟ್ಟಿದೆ. ಹೌದು ಸಿಇಟಿ 2024 ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ರ್ಯಾಕಿಂಗ್ ಬಿಡುಗಡೆ ಮಾಡಿದೆ. ಫಲಿತಾಂಶಗಳ ಜೊತೆಗೆ, ಪರೀಕ್ಷಾ ಪ್ರಾಧಿಕಾರವು ಕಟ್-ಆಫ್ 2024 ಮತ್ತು ಮೆರಿಟ್ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಿದೆ.
ಏಪ್ರಿಲ್ ನಲ್ಲಿ CET ಪರೀಕ್ಷೆ ನಡೆದಿತ್ತು. ಆಗ ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ 3,10,314 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿದ್ರು. ಸಿಇಟಿ ಪರೀಕ್ಷೆ ಬರೆದು ಒಂದೂವರೆ ತಿಂಗಳಾದರೂ ಫಲಿತಾಂಶ ಪ್ರಕಟಿಸದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿತ್ತು.
ಫಲಿತಾಂಶ ಚೆಕ್ ಮಾಡುವ ಲಿಂಕ್:
ಫಲಿತಾಂಶ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಬೇಕು. http://kea.kar.nic.in ನಲ್ಲಿ ಫಲಿತಾಂಶ ಪ್ರಕಟವಾಗಿದ್ದು. ಅಂಕಗಳು ಇಲ್ಲಿ ಲಭ್ಯವಿದೆ.
ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು:
2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಫಲಿತಾಂಶ ಪ್ರಕಟವಾಗಲಿದೆ ಎಂದು KEA ತಿಳಿಸಿತ್ತು. ಆದರೀಗ ಫಲಿತಾಂಶ ಕಂಡು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.