ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

CET Exam: ವಿದ್ಯಾರ್ಥಿಗಳ ಇಚ್ಛಾನುಸಾರವೇ ಸಿಇಟಿ ಕೇಂದ್ರ ಹಂಚಿಕೆ- ಕೆಇಎ

CET Exam: ವಿದ್ಯಾರ್ಥಿಗಳ ಆಯ್ಕೆ ಪ್ರಕಾರವೇ ಪರೀಕ್ಷಾ ಕೇಂದ್ರ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
08:18 AM Apr 13, 2024 IST | ಸುದರ್ಶನ್
UpdateAt: 08:28 AM Apr 13, 2024 IST
Advertisement

CET Exam: ಸಿಇಟಿ ಬರೆಯಲಿರುವ ವಿದ್ಯಾರ್ಥಿಗಳಿಗೆ ಉದ್ದೇಶ ಪೂರ್ವಕವಾಗಿ ದೂರದ ಪರೀಕ್ಷಾ ಕೇಂದ್ರ ನಿಗದಿಪಡಿಸಲಾಗಿದೆ ಎಂದು ಶಾಸಕ ಸುರೇಶ್ ಕುಮಾರ್ ಹೇಳಿರುವುದು ತಪ್ಪು ಗ್ರಹಿಕೆಯಿಂದ ಕೂಡಿದೆ. ವಿದ್ಯಾರ್ಥಿಗಳ ಆಯ್ಕೆ ಪ್ರಕಾರವೇ ಪರೀಕ್ಷಾ ಕೇಂದ್ರ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

Advertisement

ಇದನ್ನೂ ಓದಿ: Crime: ಕಳ್ಳತನದಲ್ಲೂ ದೇವರಿಗೂ ಪಾಲು ಕೊಡುತ್ತಿದ್ದ ಕಳ್ಳರು

''ಪರೀಕ್ಷಾ ಕೇಂದ್ರದ ಜಿಲ್ಲೆ/ತಾಲೂಕಿನ ಆಯ್ಕೆಯ ಸ್ವಾತಂತ್ರ್ಯ ವನ್ನು ಪ್ರಾಧಿಕಾರವು ವಿದ್ಯಾರ್ಥಿಗಳ ಕೈಗೆ ಕೊಟ್ಟಿದೆ. ಇದರಲ್ಲಿ ಪ್ರಾಧಿಕಾರದ ಪಾತ್ರವೇನೂ ಇಲ್ಲ" ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Splendor Bike: ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ RTO ಕಡೆಯಿಂದ ಗುಡ್ ನ್ಯೂಸ್ !!

“ಅರ್ಜಿ ಸಲ್ಲಿಸುವಾಗಲೇ ಜಿಲ್ಲೆ/ತಾಲೂಕು ಆಯ್ಕೆ ಮಾಡಿಕೊಳ್ಳ ಬೇಕು. ಆದರೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಆಯ್ಕೆ ಸೇರಿದಂತೆ ಸಣ್ಣಪುಟ್ಟ ತಪ್ಪುಗಳ ತಿದ್ದುಪಡಿಗೆ ಹಲವು ಬಾರಿ ಅವಕಾಶ ನೀಡಿತ್ತು. ಇಷ್ಟಾದ ಮೇಲೂ ಕೆಲವರು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಲವು ಬಾರಿ ಕೋರಿಕೆ ಸಲ್ಲಿಸಿದ್ದರು. ಅಂತಹವರಿಗೆ ಮಾನವೀಯ ನೆಲೆಯಲ್ಲಿ ಅವಕಾಶ ನೀಡಲಾಗಿತ್ತು. ಹಾಗೆ ಮಾಡುವಾಗ ಪರೀಕ್ಷಾ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇರುತ್ತದೆ ಎಂದು ಷರತ್ತು ವಿಧಿಸಲಾಗಿತ್ತು. ಇದೆಲ್ಲ ಕೆಇಎ ವಿದ್ಯಾರ್ಥಿಗಳ ಸ್ನೇಹಿಯಾಗಿ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ,'' ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Advertisement
Advertisement