For the best experience, open
https://m.hosakannada.com
on your mobile browser.
Advertisement

Medical College: ರಾಜ್ಯಕ್ಕೆ 3 ಹೊಸ ಮೆಡಿಕಲ್ ಕಾಲೇಜು ಮಂಜೂರು ಮಾಡಿದ ಕೇಂದ್ರ - ನಿಮ್ಮ ಜಿಲ್ಲೆಗೂ ಹೊಡಿತಾ ಲಾಟ್ರಿ?

Medical Collage: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ.
08:44 AM Jul 10, 2024 IST | ಸುದರ್ಶನ್
UpdateAt: 08:44 AM Jul 10, 2024 IST
medical college   ರಾಜ್ಯಕ್ಕೆ 3 ಹೊಸ ಮೆಡಿಕಲ್ ಕಾಲೇಜು ಮಂಜೂರು ಮಾಡಿದ ಕೇಂದ್ರ   ನಿಮ್ಮ ಜಿಲ್ಲೆಗೂ ಹೊಡಿತಾ ಲಾಟ್ರಿ
Advertisement

Medical Collage: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಅದೇನೆಂದರೆ 2024-25ನೇ ಸಾಲಿನಿಂದಲೇ ರಾಜ್ಯಕ್ಕೆ ಮೂರು ಹೊಸ ವೈದ್ಯಕೀಯ ಕಾಲೇಜು ಮಂಜೂರು ಮಾಡಿದೆ. ಆದರೆ ಈ ಮೂಲಕ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ(D K Shivkumar) ಕೇಂದ್ರವು ಭಾರೀ ಮುಖಭಂಗ ಮಾಡಿದೆ.

Advertisement

ಹೌದು, ಪ್ರಸ್ತಾವಿತ ಐದು ಕಾಲೇಜುಗಳ ಪೈಕಿ ಮೂರಕ್ಕೆ ಮಾತ್ರ ಎನ್‌ಎಂಸಿ ಒಪ್ಪಿಗೆ ಕೊಟ್ಟಿದೆ. ಆದರೆ ಕನಕಪುರ (Kanakpura) ಹಾಗೂ ರಾಮನಗರದಲ್ಲಿ (Ramangara) ಮೆಡಿಕಲ್ ಕಾಲೇಜು (Medical College) ಸ್ಥಾಪಿಸಲು ಮುಂದಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಯತ್ನಕ್ಕೆ ಹಿನ್ನಡೆಯಾಗಿದೆ. ಎರಡು ಕಾಲೇಜುಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ತಿರಸ್ಕರಿಸಿದೆ. ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಬೆಂಗಳೂರು ಉತ್ತರದ ವ್ಯಾಪ್ತಿಯ ಬಿಜಿಎಸ್​​ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಆಂಡ್‌ ರಿಸರ್ಚ್‌ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಈ ಕಾರಣ ರಾಜ್ಯದಲ್ಲಿ ಹೆಚ್ಚುವರಿಯಾಗಿ 350 ಮೆಡಿಕಲ್ ಸೀಟು ಲಭ್ಯವಾಗಲಿದೆ.

Advertisement

Team India Coach: ಟೀಂ ಇಂಡಿಯಾಕ್ಕೆ ಇನ್ನು ಗೌತಮ್ ಗಂಭೀರ್ ಹೊಸ ಕೋಚ್ – ಜಯ್ ಶಾ ಘೋಷಣೆ!!

Advertisement
Advertisement
Advertisement