Ministry of Rural Development: ಕೇಂದ್ರಕ್ಕೆ ಕರ್ನಾಟಕದ ರಸ್ತೆಗಳ ಮೇಲೆ ಕಾಳಜಿ : ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತೇವೆ ಎಂದ ಕೇಂದ್ರ ಸರ್ಕಾರ
Ministry of Rural Development: ಕರ್ನಾಟಕದ ರಸ್ತೆ ಸೌಲಭ್ಯ ಕಳೆದ ಹತ್ತು ವರ್ಷಗಳಲ್ಲಿ ಬಹುತೇಕ ಅಭಿವೃದ್ಧಿ ಮಾಡಿದೆ. ಆದರೂ ಅದೆಷ್ಟೋ ರಸ್ತೆಗಳು ಇನ್ನೂ ಡಾಂಬರ್, ಕಾಂಕ್ರೀಟ್ ಕಾಣದೆ ಹಾಗೆ ಇವೆ. ಇದರಿಂದ ಜನರ ಓಡಾಟಕ್ಕೆ ಬಹಳ ಸಮಸ್ಯೆಯಾಗುತ್ತಿದೆ. ಊರ ಜನ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೂ ಈ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಕಾಣುತ್ತಿಲ್ಲ.
ಆದರೆ ಇದೀಗ ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ಮುಖಾಂತರ ರಾಜ್ಯಕ್ಕೆ ಬೃಹತ್ ಮೂಲಸೌಕರ್ಯ ಯೋಜನೆಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಗ್ರಾಮೀಣ ಭಾಗದ ಸಂಪರ್ಕವನ್ನು ವೃದ್ದಿಸುವುದು ಹಾಗೂ ಆರ್ಥಿಕವಾಗಿ ಬಲಪಡಿಸಲು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದ ಗ್ರಾಮೀಣ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಹಾಗೂ ಇಲ್ಲಿನ ಆರ್ಥಿಕತೆಯನ್ನು ವೇಗಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಯೋಜನೆಯನ್ನು ಪಿಎಂ-ಜನ್‌ಮಾನ್ (PM-JANMAN) ಯೋಜನೆಯಡಿ ಜಾರಿಗೆ ತರಲಿದೆ. ಇದರಲ್ಲಿ 23.766 ಕಿ.ಮೀ ಉದ್ದವಿರುವ ಹದಿನೆಂಟು ರಸ್ತೆಗಳು ಮತ್ತು 2 ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು 25.1796 ಕೋಟಿ ಅಂದಾಜು ವೆಚ್ಚದಲ್ಲಿ ನಡೆಸಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
• ಹಳ್ಳಿಗಳಲ್ಲಿ ರಸ್ತೆ ಸಂಪರ್ಕವನ್ನು ಮೇಲ್ದರ್ಜೆಗೇರಿಸುವ ಮುಖಾಂತರ ಕೆಳಸ್ತರದ ಬುಡಕಟ್ಟು ತಾಂಡಾಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದು, ಊರು-ಕೇರಿಗಳ ಹಾಗೂ ಪಟ್ಟಣ, ನಗರ ಕೇಂದ್ರಗಳ ಮಧ್ಯವಿರುವ ಅಂತರವನ್ನು ಕಡಿಮೆಗೊಳಿಸುವುದು. ದುರ್ಬಲ ಬುಡಕಟ್ಟು ಕುಟುಂಬಗಳು ಮತ್ತು ಸ್ವಾವಲಂಬನೆಯ ಬದುಕನ್ನು ಉತ್ತೇಜನಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶ.
• ಆಯಾ ಹಳ್ಳಿ, ಊರು, ನಗರ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶ.
• ಸ್ಥಳೀಯವಾಗಿ ಹಳ್ಳಿ, ಗ್ರಾಮಗಳಲ್ಲಿ ಉದ್ಯೋಗಗಳನ್ನು ಉತ್ತೇಜಿಸಿ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಗುರಿ
• ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಹಳ್ಳಿಗಳ ಮುಖಾಂತರ ವಿಕಸಿತ ಭಾರತದ ಕನಸನ್ನು ನನಸಾಗಿಸುವಿದೇ ಈ ಯೋಜನೆಯ ಮುಖ್ಯ ಗುರಿ.
Marriage: ಪತ್ನಿಗೆ ಬಾಲ್ಯದ ಪ್ರೇಮಿ ಜೊತೆ ಮದುವೆ ಮಾಡಿಸಿದ ತ್ಯಾಗಮಯಿ ಪತಿ! ಕೊನೆಗೆ ಪತ್ನಿಗೆ ಟ್ವಿಸ್ಟ್ ಇಟ್ಟ ಪತಿ!