For the best experience, open
https://m.hosakannada.com
on your mobile browser.
Advertisement

Good News For Farmers: ಕೇಂದ್ರದಿಂದ ರೈತರಿಗೆ ಬೊಂಬಾಟ್ ಸುದ್ದಿ; ರೈತರಿಗಾಗಿ ಮೋದಿ ಸರ್ಕಾರದ ಮಹತ್ವದ ತೀರ್ಮಾನ!!

02:17 PM Jan 15, 2024 IST | ಅಶ್ವಿನಿ ಹೆಬ್ಬಾರ್
UpdateAt: 02:18 PM Jan 15, 2024 IST
good news for farmers  ಕೇಂದ್ರದಿಂದ ರೈತರಿಗೆ ಬೊಂಬಾಟ್ ಸುದ್ದಿ  ರೈತರಿಗಾಗಿ ಮೋದಿ ಸರ್ಕಾರದ ಮಹತ್ವದ ತೀರ್ಮಾನ

Good News: ಲೋಕಸಭೆ ಚುನಾವಣೆ (Assembly Elections)ಈ ವರ್ಷವಿರುವ ಹಿನ್ನೆಲೆ ಕೇಂದ್ರ ಸರ್ಕಾರ ಫೆ.1ರಂದು ಮಧ್ಯಂತರ ಬಜೆಟ್‌ (Interim budget)ಮಾತ್ರವೇ ಮಂಡಿಸಬಹುದು. ಇದಾದ ಬಳಿಕ, ಮತ್ತೆ ಅಧಿಕಾರಕ್ಕೆ ಬರುವ ಸರ್ಕಾರಕ್ಕೆ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶವಿರುತ್ತದೆ.

Advertisement

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala seetharaman)ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿದಿದೆ. ನಿರ್ಮಲಾ ಸೀತಾರಾಮನ್ ಅವರು ಸತತ ಆರನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಈ 4 ತಿಂಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ. ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಅಥವಾ ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಲು ಬಯಸುತ್ತಾರೆ.

ಇದನ್ನೂ ಓದಿ: Woman Falls Off Hotel Balcony: ಪತಿಯ ಸ್ನೇಹಿತನ ಜೊತೆ ಚಕ್ಕಂದ; ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡ ಜೋಡಿ!! ಮುಂದೇನಾಯ್ತು??

Advertisement

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ಎಂಜಿಎನ್‌ಆರ್‌ಇಜಿಎ) ಹಣವನ್ನು ಹೆಚ್ಚಿಸಿ ರೈತರಿಗೆ ಹೆಚ್ಚಿನ ಹಣವನ್ನು ಪಾವತಿಸಲು ಅವರು ಇಚ್ಛಿಸುತ್ತಾರೆ. ಮಹಿಳೆಯರು ಮತ್ತು ಬಡವರ ಪರವಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. 2024-25ರ ಆರ್ಥಿಕ ವರ್ಷದ ಮೊದಲ 4 ತಿಂಗಳವರೆಗೆ ಕೇಂದ್ರ ಸರ್ಕಾರವು ಸಂಬಳ, ವೇತನ, ಬಡ್ಡಿ ಪಾವತಿ, ಸಾಲ ಸೇವೆ ಇತ್ಯಾದಿಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ನಿರ್ಮಲಾ ಸೀತಾರಾಮನ್ ಗಣನೆಗೆ ತೆಗೆದುಕೊಂಡಿರುವಂತಿದ್ದು, ಹೀಗಾಗಿ ಮಧ್ಯಂತರ ಬಜೆಟ್ ಮೂಲಕ ಕೇಂದ್ರವು ರೈತರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ.

Advertisement
Advertisement