ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Central government : ದೇಶದಲ್ಲಿ ಮತ್ತೆ ನೋಟು ಬದಲಾವಣೆ ?! ಹಣಕಾಸು ಸಚಿವರು ಕೊಟ್ರು ಬಿಗ್ ಅಪ್ಡೇಟ್

11:11 AM Feb 07, 2024 IST | ಹೊಸ ಕನ್ನಡ
UpdateAt: 11:17 AM Feb 07, 2024 IST
Advertisement

Central government : ದೇಶದಲ್ಲಿ ಚಾಲ್ತಿಯಲ್ಲಿರುವ ನೋಟುಗಳನ್ನು ಬದಲಾಯಿಸಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂಬ ಸುದ್ದಿ ಸದ್ದುಮಾಡಿತ್ತು. ಇದೀಗ ಈ ಕುರಿತಂತೆ ಕೇಂದ್ರ ಹಣಕಾಸು ರಾಜ್ಯ ಸಚಿವರು ಲೋಕಸಭೆಯಲ್ಲಿ (Lokasabhe) ಸ್ಪಷ್ಟೀಕರಣ ನೀಡಿದ್ದಾರೆ.

Advertisement

ಇದನ್ನೂ ಓದಿ: SSLC Marks Card: ಎಸ್‌ಎಸ್‌ಎಲ್‌ಸಿ. PUC ವಿದ್ಯಾರ್ಥಿಗಳ ʼMarks Card' ನಲ್ಲಿ ಮಹತ್ವದ ಬದಲಾವಣೆ

Advertisement

ಹೌದು, ಮಂಗಳವಾರ ರಾಜ್ಯಸಭೆಯಲ್ಲಿ(Rajyasabhe) ಎದ್ದ ಷ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ(Pankaj chowdhari) ಅವರು ಸದ್ಯ ದೇಶದಲ್ಲಿ ಪ್ಲ್ಯಾಸ್ಟಿಕ್‌ ನೋಟುಗಳನ್ನು ಚಲಾವಣೆಗೆ ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಹಾಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ ದೇಶದಲ್ಲಿ ಹಾಳೆಯ ನೋಟುಗಳ ಬಾಳಿಕೆ ಹೆಚ್ಚಿಸಲು ಹಾಗೂ ಖೋಟಾ ನೋಟುಗಳ ಚಲಾವಣೆ ನಿಯಂತ್ರಿಸುವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಸದ್ಯಕ್ಕೆ ಪ್ಲ್ಯಾಸ್ಟಿಕ್‌ ನೋಟುಗಳನ್ನು ಮುದ್ರಿಸುವ ಕುರಿತು ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.

Advertisement
Advertisement