India Post Recruitment 2023: ಪೋಸ್ಟ್ ಆಫೀಸಿನಲ್ಲಿ ಭರ್ಜರಿ 1,899 ಹುದ್ದೆಗಳ ಉದ್ಯೋಗವಕಾಶ !! SSLC ಪಾಸಾಗಿದ್ರೆ ಸಾಕು
India Post Recruitment 2023: ಅಂಚೆ ಇಲಾಖೆಯಲ್ಲಿ ಉದ್ಯೋಗ (India Post Recruitment 2023) ಬಯಸುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಭಾರತದ ಮಾಹಿತಿ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ದೇಶಾದ್ಯಂತ ವಿವಿಧ ಅಂಚೆ ವಲಯಗಳಲ್ಲಿ 1899 ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಇದನ್ನೂ ಓದಿ ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್
ಒಟ್ಟು ಹುದ್ದೆಗಳ ಪೈಕಿ ಪೋಸ್ಟಲ್ ಅಸಿಸ್ಟೆಂಟ್ 598, ವಿಂಗಡಣೆ ಸಹಾಯಕ 143, ಪೋಸ್ಟ್ ಮ್ಯಾನ್ 585, ಮೇಲ್ ಗಾರ್ಡ್ 3 ಹಾಗೂ ಎಂಟಿಎಸ್ 570 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಂದರೆ ಈ ಎಲ್ಲಾ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ಭರ್ತಿ ಮಾಡಲಾಗುವುದು.
ಹುದ್ದೆಗೆ ಅನುಗುಣವಾಗಿ 10, 12ನೇ ತರಗತಿ, ಪದವಿಯಲ್ಲಿ ಉತ್ತೀರ್ಣರಾದ ಮತ್ತು ಸಂಬಂಧಪಟ್ಟ ಕ್ರೀಡಾ ವಿಭಾಗದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಪಟಾಕಿ ನಿಷೇಧದ ಕುರಿತು ಬಂತು ಮತ್ತೊಂದು ಹೊಸ ರೂಲ್ಸ್ - ಸಾರಿಗೆ ಇಲಾಖೆಯಿಂದ ಖಡಕ್ ಆದೇಶ