For the best experience, open
https://m.hosakannada.com
on your mobile browser.
Advertisement

DA Hike Updates: ಕೇಂದ್ರದಿಂದ ನೌಕರರ ತುಟ್ಟಿಭತ್ಯೆ ಶೀಘ್ರದಲ್ಲೇ ಹೆಚ್ಚಳ: ವೇತನದಲ್ಲಿ ಭಾರೀ ಹೆಚ್ಚಳ ನಿರೀಕ್ಷೆ!?

03:32 PM Jan 19, 2024 IST | ಅಶ್ವಿನಿ ಹೆಬ್ಬಾರ್
UpdateAt: 03:32 PM Jan 19, 2024 IST
da hike updates  ಕೇಂದ್ರದಿಂದ ನೌಕರರ ತುಟ್ಟಿಭತ್ಯೆ ಶೀಘ್ರದಲ್ಲೇ ಹೆಚ್ಚಳ  ವೇತನದಲ್ಲಿ ಭಾರೀ ಹೆಚ್ಚಳ ನಿರೀಕ್ಷೆ

DA Hike Updates : ಕೇಂದ್ರ ನೌಕರರು (7th pay commission)ಮತ್ತು ಪಿಂಚಣಿದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ(DA Hike Updates) ಶೇ.3ರಿಂದ 4ರಷ್ಟು ಏರಿಕೆಯಾಗಲಿದೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಡಿಸೆಂಬರ್ AICPI ಸೂಚ್ಯಂಕದ ಆಧಾರದ ಮೇರೆಗೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ.

Advertisement

ಪ್ರಸ್ತುತ ಕೇಂದ್ರ ನೌಕರರು 46% ಡಿಎ ಪ್ರಯೋಜನವನ್ನು ಪಡೆಯುತ್ತಿದ್ದು, ಇದೀಗ 4% ಹೆಚ್ಚಳವಾದರೆ ತುಟ್ಟಿಭತ್ಯೆ (Dearness Allowance)50% ಕ್ಕೆ ಹೆಚ್ಚಳವಾಗಲಿದೆ. ಮುಂದಿನ ಡಿಎ ಜನವರಿ 2024 ರಿಂದ ಏರಿಕೆ ಮಾಡಲಾಗುತ್ತದೆ. ಇದು ಮುಂದಿನ ಜೂನ್ ವರೆಗೆ ಅನ್ವಯವಾಗುತ್ತದೆ. ಇದನ್ನು ಆದಷ್ಟು ಶೀಘ್ರವಾಗಿ ಏರಿಕೆ ಮಾಡಲಾಗುತ್ತದೆ. ಲೋಕ ಸಭಾ ಚುನಾವಣೆ ಹಿನ್ನೆಲೆ ಹೋಳಿ ಹಬ್ಬದ ಮೊದಲೇ ಇಲ್ಲವೇ ಚುನಾವಣಾ ನೀತಿ ಸಂಹಿತೆ ಜಾರಿ ಮೊದಲು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನೂ ಶೇ.3ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಎಚ್ಆರ್ಎ ಶೇ.27ರಿಂದ 30ಕ್ಕೆ ಹೆಚ್ಚಳವಾಗಲಿದೆ. ಇದರೊಂದಿಗೆ ಗ್ರೇಡ್ ಗೆ ಅನುಸಾರವಾಗಿ ಪ್ರಯಾಣ ಭತ್ಯೆಯಲ್ಲಿ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement
Advertisement