ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dharamsala: ಕೇಂದ್ರದಿಂದ ಧರ್ಮಸ್ಥಳ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್!!

03:28 PM Jan 07, 2024 IST | ಅಶ್ವಿನಿ ಹೆಬ್ಬಾರ್
UpdateAt: 03:28 PM Jan 07, 2024 IST
Advertisement

Dharmasthala: ಕೇಂದ್ರ ಸರ್ಕಾರ ಧರ್ಮಸ್ಥಳಕ್ಕೆ(Dharmasthala) ಪ್ರಯಾಣಿಸುವ ಭಕ್ತರಿಗೆ ಸಿಹಿ ಸುದ್ದಿಯೊಂದನ್ನು(Good News) ನೀಡಿದೆ. ಕೇಂದ್ರ ಸರ್ಕಾರ ಧರ್ಮಸ್ಥಳದ ಭಕ್ತರ (Dharmasthala Devotees)ಪ್ರಯಾಣಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

 

ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸಿಗುವ ಉಜಿರೆ - ಧರ್ಮಸ್ಥಳ - ಪೆರಿಯಶಾಂತಿವರೆಗಿನ 28.49 ಕಿಮೀ ಉದ್ದದ ರಸ್ತೆಯನ್ನು ಸುಸಜ್ಜಿತ ಎರಡು ಲೇನ್ ಆಗಿ ವಿಸ್ತರಿಸುವ ಕಾಮಗಾರಿಗೆ ಅನುಮೋದನೆ ನೀಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನ, ಮತ್ತು ಬಾಹುಬಲಿ ಪ್ರತಿಮೆ ರೀತಿಯ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸಲು ಈ ರಸ್ತೆಯು ಪ್ರಯಾಣಿಕರಿಗೆ ನೆರವಾಗುತ್ತದೆ.

Advertisement

 

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂ. 613.65 ಕೋಟಿ ಹಣವನ್ನು ಈ ರಸ್ತೆ ವಿಸ್ತರಣೆ ಕಾಮಗಾರಿಗೆ ಬಿಡುಗಡೆ ಮಾಡಿರುವ ಹಾಗೂ ಮಳೆಗಾಲದಲ್ಲಿ ಈ ರಸ್ತೆ ಹೆಚ್ಚು ನೆರವಿಗೆ ಬರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

Related News

Advertisement
Advertisement