For the best experience, open
https://m.hosakannada.com
on your mobile browser.
Advertisement

Chandrababu Naidu: ಕೇಂದ್ರದ ಬಜೆಟ್ ಮಂಡನೆ - ಚಂದ್ರಬಾಬು ನಾಯ್ಡು ಇಟ್ಟ ಈ ಪ್ರಮುಖ ಬೇಡಿಕೆಗಳ ಮೇಲೆಯೇ ಎಲ್ಲರ ಕಣ್ಣು !!

Chandrababu Naidu: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ತಮ್ಮ ರಾಜ್ಯಕ್ಕೆ ಹಲವು ಬೇಡಿಕೆಗಳನ್ನಟ್ಟಿದ್ದಾರೆ.
08:13 AM Jul 23, 2024 IST | ಸುದರ್ಶನ್
UpdateAt: 08:13 AM Jul 23, 2024 IST
chandrababu naidu  ಕೇಂದ್ರದ ಬಜೆಟ್ ಮಂಡನೆ   ಚಂದ್ರಬಾಬು ನಾಯ್ಡು ಇಟ್ಟ ಈ ಪ್ರಮುಖ ಬೇಡಿಕೆಗಳ ಮೇಲೆಯೇ ಎಲ್ಲರ ಕಣ್ಣು
Advertisement

Chandrababu Naidu: ಪ್ರಧಾನಿ ಮೋದಿ 3 ನೇ ಅವಧಿಗೆ ಪ್ರಧಾನಿ ಆಗುವ ಮೂಲಕ NDA ಸರ್ಕಾರದ ರಚನೆಗೆ ಪ್ರಮುಖ ಕಾರಣ ಆಗಿರೋ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ತಮ್ಮ ರಾಜ್ಯಕ್ಕೆ ಹಲವು ಬೇಡಿಕೆಗಳನ್ನಟ್ಟಿದ್ದಾರೆ.

Advertisement

ಹೌದು, NDA ಸರ್ಕಾರ ರಚನೆಯಾಗುವಾಗ ಬೆಂಬಲ ಘೋಷಿಸಿದ್ದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು(Chandrababu Naidu) ಅವರು ಯಾವುದೇ ಷರತ್ತುಗಳಿಲ್ಲದೆ, ನಗುನಗುತ್ತಾ ಬಂದು ಮೋದಿ ಕೈ ಕುಲುಕಿ ನಮ್ಮ ಬೆಂಬಲ ನಿಮಗೆ, ಯಾವತ್ತೂ ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದರು. ಅಂತೆಯೇ ಇದೀಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಆದರೆ ಮುಂದೇನು ಎಂಬುದು ಬಲ್ಲವರು ಯಾರು ಅಲ್ಲವೇ? ಆದರೀಗ ಇಂದು NDA ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಮೋದಿ ಎದುರು ಈ ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇವುಗಳಿಗೆ ನಿರ್ಮಲಾ ಸೀತಾರಾಮನ್ ಅವರು ಹೇಗೆ ಸ್ಪಂದಿಸಿದ್ದಾರೆ ಎಂದು ನೋಡಬೇಕಿದೆ.

ನಾಯ್ಡು ಇಟ್ಟ ಬೇಡಿಕೆಗಳು:
* ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವ್ಯಾಪಿಸಿರುವ ಬುಂಧೇಲ್ ಖಂಡ್ ರೀತಿಯಲ್ಲಿ ವಿಶೇಷ ಪ್ಯಾಕೇಜ್
* ಕೈಗಾರಿಕಾ ಪ್ರೋತ್ಸಾಹಧನ, ರಾಜಧಾನಿಯಾಗಿ ಅಮರಾವತಿ ನಗರವನ್ನು ನಿರ್ಮಿಸಲು ಪ್ಯಾಕೇಜ್
* ಪೋಲಾವರಂ ವಿವಿಧೋದ್ದೇಶ ಯೋಜನೆಗೆ ಹಣ ಬಿಡುಗಡೆ
ರಾಜ್ಯ ಆರ್ಥಿಕ ವ್ಯವಹಾರಗಳ ಮೇಲೆ ತಾತ್ಕಾಲಿಕ ಹಿಡಿತ ಸಾಧಿಸಲು ಅಲ್ಪಾವಧಿಯ ಸಹಾಯ
* ವಿಶೇಷ ನೆರವಿನ ಯೋಜನೆಯಡಿಯಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚುವರಿ ಆರ್ಥಿಕ ಸಹಾಯ
* ರಸ್ತೆ, ಸೇತುವೆ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಂತಹ ಅಗತ್ಯ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್
* ಬಿಪಿಸಿಎಲ್ ( Bharat Petroleum Corporation Limited) ರಿಫೈನರಿ ಹೊಸ ಘಟಕ ಆಂಧ್ರ ಪ್ರದೇಶದಲ್ಲಿ ಸ್ಥಾಪನೆ

Advertisement

Indhira Gandhi: ಸರ್ಕಾರಿ ನೌಕರರು RSS ಸೇರಬಾರದೆಂದು ಇಂದಿರಾ ಗಾಂಧಿ ನಿಷೇಧ ಹೇರಿದ್ದು ಯಾಕೆ? 58 ವರ್ಷಗಳ ಹಿಂದೆ ನಡೆದದ್ದೇನು?

Advertisement
Advertisement
Advertisement