For the best experience, open
https://m.hosakannada.com
on your mobile browser.
Advertisement

CBSE Result 2024: ಸಿಬಿಎಸ್ಸಿ 10ನೇ ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಸಂಭಾವ್ಯ ದಿನಾಂಕ ಪ್ರಕಟ !

CBSE Result 2024: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸಿದ್ದ10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಮೇ 20 ರ ನಂತರ ಪ್ರಕಟಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
09:09 PM May 03, 2024 IST | ಸುದರ್ಶನ್ ಬೆಳಾಲು
UpdateAt: 09:18 PM May 03, 2024 IST
cbse result 2024  ಸಿಬಿಎಸ್ಸಿ 10ನೇ ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಸಂಭಾವ್ಯ ದಿನಾಂಕ ಪ್ರಕಟ
Advertisement

CBSE Result 2024: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸಿದ್ದ10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಮೇ 20 ರ ನಂತರ ಪ್ರಕಟಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರೀಕ್ಷೆಯ (CBSE Result ) ಫಲಿತಾಂಶ ಪ್ರಕಟ ಕುರಿತ ಊಹಾಪೋಹಗಳ ನಡುವೆಯೇ ಇದೀಗ ಈ ಸ್ಪಷ್ಟನೆ ಬಂದಿದೆ. ಈ ಹಿಂದೆ ಮೇ 3ರಂದೇ ಫಲಿತಾಂಶ ಪ್ರಕಟವಾಗಲಿದೆ ಎಂಬ ವದಂತಿ ಹಬ್ಬಿತ್ತು. ಈಗ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಅಧಿಕಾರಿಗಳು ಶುಕ್ರವಾರ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಈಗ ಹಬ್ಬಿರುವ ಈ ಎಲ್ಲಾ ವದಂತಿ ಸುಳ್ಳು ಎಂದು ಮಂಡಳಿಯ ಅಧಿಕಾರಿಗಳು ಸ್ಪಷ್ಪಪಡಿಸಿದ್ದು, ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಮೇ 20 ರ ನಂತರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ಸಿಬಿಎಸ್ಸಿ ಕ್ಲಾಸ್ ಹತ್ತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಫೆಬ್ರವರಿ 15 ರಿಂದ ಏಪ್ರಿಲ್ ತಿಂಗಳ 2 ರವರೆಗೆ 12ನೇ ತರಗತಿಯ ಪರೀಕ್ಷೆಗಳು ನಡೆದಿದ್ದವು.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರ ಸಿಡಿ ತರ್ತಾರಾ ಡಿಕೆ ಶಿವಕುಮಾರ್ ,ಬಿಜೆಪಿ ರಾಜು ಗೌಡ ಆಪಾದನೆ !*

Advertisement

CBSE ತರಗತಿಯ 10, 12 ಫಲಿತಾಂಶಗಳನ್ನು ಮಂಡಳಿಯ ವೆಬ್‌ಸೈಟ್‌ಗಳಾದ cbseresults.nic.in, results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು. ಹೆಚ್ಚುವರಿಯಾಗಿ, ಫಲಿತಾಂಶಗಳನ್ನು digilocker.gov.in ಮತ್ತು results.gov.in ನಲ್ಲಿ ಕೂಡಾ ಪರಿಶೀಲಿಸಬಹುದು. CBSE ಬೋರ್ಡ್ ಪರೀಕ್ಷೆಗಳಿಗೆ 10 ಮತ್ತು 12 ನೇ ತರಗತಿಗಳನ್ನು ಒಳಗೊಂಡು ಒಟ್ಟು ಸರಿಸುಮಾರು 39 ಲಕ್ಷ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು.

Bangalore rain: ಬೆಂಗಳೂರಿನಲ್ಲಿ ಸಿಡಿಲಿನ ಆರ್ಭಟಕ್ಕೆ ಮಹಿಳೆ ಬಲಿ, ಮರದ ಅಡಿ ನಿಂತಿದ್ದ 20 ಕ್ಕೂ ಹೆಚ್ಚು ಮೇಕೆಗಳ ಸಾವು

Advertisement
Advertisement
Advertisement