For the best experience, open
https://m.hosakannada.com
on your mobile browser.
Advertisement

Canara Bank: ಈ ಬ್ಯಾಂಕ್ ನಿಮ್ಮ ಠೇವಣಿಗೆ ಒಂದೇ ವರ್ಷದಲ್ಲಿ ಬಂಪರ್ ಬಡ್ಡಿ ನೀಡುತ್ತೆ! ಇಲ್ಲಿದೆ ಫುಲ್ ಡಿಟೇಲ್ಸ್!

Canara Bank: ಕೆನರಾ ಬ್ಯಾಂಕ್‌ ತನ್ನ ಗ್ರಾಹಕರ ಹಣವನ್ನು ಸುರಕ್ಷವಾಗಿ ಇಡುವ ಮತ್ತು ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದೆ.
10:46 AM Jun 07, 2024 IST | ಕಾವ್ಯ ವಾಣಿ
UpdateAt: 10:56 AM Jun 07, 2024 IST
canara bank  ಈ ಬ್ಯಾಂಕ್ ನಿಮ್ಮ ಠೇವಣಿಗೆ ಒಂದೇ ವರ್ಷದಲ್ಲಿ ಬಂಪರ್ ಬಡ್ಡಿ ನೀಡುತ್ತೆ  ಇಲ್ಲಿದೆ ಫುಲ್ ಡಿಟೇಲ್ಸ್

Canara Bank: ಗ್ರಾಹಕರಿಗೆ ಲಾಭ ತಂದು ಕೊಡುವ ಸಲುವಾಗಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ (Canara Bank) ತನ್ನ ಗ್ರಾಹಕರ ಹಣವನ್ನು ಸುರಕ್ಷವಾಗಿ ಇಡುವ ಮತ್ತು ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದೆ.

Advertisement

ಮುಖ್ಯವಾಗಿ ಸಾಮಾನ್ಯ ಜನರು ಹಣದ ಉಳಿತಾಯದ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರುವುದಿಲ್ಲ. ಅದಕ್ಕಾಗಿ ಹಣದ ಸೇಫ್ಟಿ ಗಾಗಿ ಅವರು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ ಮತ್ತು ಹಣವು ಸುರಕ್ಷವಾಗಿ ಇದ್ದು ನಿರಂತರ ಲಾಭವನ್ನು ತಂದು ಕೊಡುವ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದಕ್ಕಾಗಿ ಕೆನರಾ ಬ್ಯಾಂಕ್ ಸಹ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಸೇವೆಯನ್ನು ಒದಗಿಸಿದ್ದು ಅದರ ಮೇಲೆ ಉತ್ತಮ ಬಡ್ಡಿದರವನ್ನು ನೀಡುತ್ತಿದೆ.

ಕ್ರೀಡಾಪಟುಗಳಿಗೆ ಎಲ್ಲಾ ಇಲಾಖಾ ನೇಕಾತಿಯಲ್ಲಿ ಶೇ.2 ಮೀಸಲು- ಸಚಿವ ಪರಮೇಶ್ವರ್‌

Advertisement

ಕೆನರಾ ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿದರ (fixed deposit interest rate) ಇಂತಿವೆ:
ಕೆನರಾ ಬ್ಯಾಂಕ್ ಸಹ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಸೇವೆಯನ್ನು ಒದಗಿಸಿದ್ದು ಅದರ ಮೇಲೆ ಒಂದು ವರ್ಷದ ಮೇಲೆ ಇರುವ ಸ್ಥಿರ ಠೇವಣಿಗೆ 6.85 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

ಈ ಕೆಳಗೆ ನಿಗದಿತ ವರ್ಷಗಳಿಗಳಿಗೆ ರೂ 20,000 ಸ್ಥಿರ ಠೇವಣಿ( ಎಫ್‌ಡಿ ) ಮಾಡಿಸಿದರೆ ನಿಮಗೆ ಸಿಗುವ ಲಾಭ ಎಷ್ಟು ಎಂದು ತಿಳಿಸಲಾಗಿದೆ.
• 20 ಸಾವಿರ ರೂ ಒಂದು ವರ್ಷದ ಎಫ್‌ಡಿ ಮಾಡಿಸಿದರೆ 21,406 ರೂ ಸಿಗುತ್ತದೆ.
• 20 ಸಾವಿರ ರೂ ಎರಡು ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 22,910 ರೂ ಸಿಗುತ್ತದೆ.
• 20 ಸಾವಿರ ರೂ ಮೂರು ವರ್ಷದ ಎಫ್‌ಡಿ ಮಾಡಿಸಿದರೆ 24,520 ರೂ ಸಿಗುತ್ತದೆ.
• 20 ಸಾವಿರ ರೂ ನಾಲ್ಕು ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 26,243 ರೂ ಸಿಗುತ್ತದೆ.
• 20 ಸಾವಿರ ರೂ 5 ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 28,088 ಸಿಗುತ್ತದೆ.

ಇನ್ನು ನಿಮ್ಮ ಮನೆಯಲ್ಲಿ ವಯಸ್ಕರಿದ್ದರೆ ಅವರ ಹೆಸರಲ್ಲಿ ಎಫ್‌ಡಿ ಮಾಡಿಸಿದರೆ ಕೆನರಾ ಬ್ಯಾಂಕ್ ಇನ್ನೂ ಹೆಚ್ಚಿನ ಬಡ್ಡಿದರವನ್ನು ಹಾಕಿ ಉತ್ತಮ ಲಾಭವನ್ನು ಕೊಡುತ್ತದೆ.
• 20 ಸಾವಿರ ರೂ ಒಂದು ವರ್ಷದ ಎಫ್‌ಡಿ ಮಾಡಿಸಿದರೆ 21,511 ರೂ ಸಿಗುತ್ತದೆ.
• 20 ಸಾವಿರ ರೂ ಎರಡು ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 23,136 ರೂ ಸಿಗುತ್ತದೆ.
• 20 ಸಾವಿರ ರೂ ಮೂರರಿಂದ ನಾಲ್ಕು ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 24,848 ಸಿಗುತ್ತದೆ.
• 20 ಸಾವಿರ ರೂ 5 ವರ್ಷದ ಎಫ್‌ಡಿ ಮಾಡಿಸಿದರೆ ನಿಮಗೆ 28,575 ಸಿಗುತ್ತದೆ.

 ಕೊನೆಗೂ ಬಿಜೆಪಿಗೆ ಶಾಕ್ ಕೊಟ್ಟ ನಿತೀಶ್ ಕುಮಾರ್ !!

Advertisement
Advertisement
Advertisement