Bengaluru Crime News: ಬಾಲಕನ ಅಪಹರಣ ಮಾಡಿದ ಉದ್ಯಮಿ; 14 ಗಂಟೆಯಲ್ಲಿ ಖಾಕಿ ಬಲೆಗೆ ಬಿದ್ದ ಅಪಹರಣಕಾರ
Bengaluru Crime News: ಜಾರ್ಖಂಡ್‌ನ ರಾಂಚಿ ಮೂಲದ ಉದ್ಯಮಿ ಜಸ್ಮಾವುದ್ದೀನ್ ಎಂಬಾತ ಜೀವನೋಪಾಯಕ್ಕೆಂದು ಅಪಾರ್ಟ್‌ಮೆಂಟ್‌ನಲ್ಲಿ ಕ್ಲೌಡ್ ಕಿಚನ್ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದರಿಂದ ಬಾಲಕನೋರ್ವನನ್ನು ಅಪಹರಿಸಿದ್ದಾನೆ. ಹಣಕ್ಕಾಗಿ ಬಾಲಕನ ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ.
ಪೊಲೀಸರಿಗೆ ಮಾಹಿತಿ ತಿಳಿದು 14ಗಂಟೆಯೊಳಗೆ ಪೋಷಕರ ಮಡಿಲಿಗೆ ಬಾಲಕನನ್ನು ಸೇರಿಸಿ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಜಸ್ಮಾವುದ್ದೀನ್ ಶೇಖ್ (23 ವರ್ಷ) 9 ವರ್ಷದ ಬಾಲಕನ್ನು ಅಪಹರಿಸಿದ್ದು, ತನ್ನ ಅಪಾರ್ಟ್‌ಮೆಂಟ್‌ನಲ್ಲಿಟ್ಟಿದ್ದ. ನಂತರ ಬಾಲಕನ ಪೋಷಕರಿಗೆ ಮೊಬೈಲ್ ಕರೆ ಮೂಲಕ 10 ಲಕ್ಷ ರೂ. ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದು, ನಂತರ ಮಗುವನ್ನು ಒಪ್ಪಿಸುತ್ತೇನೆ ಎಂದು ಹೇಳಿದ್ದ.
ಆದರೆ ಬಾಲಕನ ತಂದೆ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಅಪಹರಣಕಾರ ತನ್ನ ಅಪಾರ್ಟ್‌ಮೆಂಟ್‌ನ ಅಂಗಡಿಯೊಂದರ ಬಳಿ ಬ್ಯಾಗ್ ಇಡಲು ಹೇಳಿದ್ದಾನೆ. ಮಫ್ತಿಯಲ್ಲಿದ್ದ ಪೊಲೀಸರು ಅಪಹರಣಕಾರ ಅಂಗಡಿ ಬಳಿ ಬಂದಾಗ, ಮಫ್ತಿಯಲ್ಲಿದ್ದ ಪೊಲೀಸರು ಕೂಡಲೇ ಆತನನ್ನು ಬಂಧನ ಮಾಡುತ್ತಾರೆ.