ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

RD ಖಾತೆ ಮಾಡಿಸೋ ಯೋಚನೆ ಉಂಟಾ ? 'ಪೋಸ್ಟ್ ಆಫೀಸ್'ನಲ್ಲಿ ಸಿಗೋ ಬಡ್ಡಿ ಎಷ್ಟು ಗೊತ್ತಾ?

12:50 PM Nov 18, 2023 IST | ಅಶ್ವಿನಿ ಹೆಬ್ಬಾರ್
UpdateAt: 12:50 PM Nov 18, 2023 IST
Advertisement

Post Office RD : ಗ್ರಾಹಕರಿಗಾಗಿ ಪೋಸ್ಟ್ ಆಫೀಸ್ ನಲ್ಲಿ(Post Office Scheme)ಅನೇಕ ಉಳಿತಾಯ ಯೋಜನೆಗಳಿದ್ದು, ನಿಶ್ಚಿತ ಲಾಭದ ಜೊತೆಗೆ ಭದ್ರತೆ ಪಡೆಯುವುದಲ್ಲದೇ ತೆರಿಗೆ ವಿನಾಯಿತಿ(Tax Exemption)ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಯೋಜನೆಗಳಿವೆ. ನೀವು RD ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ಸ್ ಪಡೆಯಬಹುದು.

Advertisement

ಪೋಸ್ಟ್ ಆಫೀಸಿನಲ್ಲಿ 10 ವರ್ಷ ಮೇಲ್ಪಟ್ಟವರು ಆರ್ಡಿ(Post Office RD) ಖಾತೆ ತೆರೆಯಬಹುದಾಗಿದ್ದು, ಅದರಲ್ಲಿ ಜಂಟಿ ಖಾತೆ ಅಥವಾ ವೈಯಕ್ತಿಕ ಖಾತೆ ತೆರೆಯಬಹುದು. ನೀವು ಖಾತೆ ಆರಂಭಿಸಿದಾಗಿನಿಂದ ಒಂದು ತಿಂಗಳು ಆರ್ಡಿ ಕಟ್ಟುವಲ್ಲಿ ವಿಫಲರಾದರೆ 100 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆರ್ಡಿ ಯೋಜನೆಯಲ್ಲಿ ಪ್ರಸ್ತುತ ಏಪ್ರಿಲ್ 1, 2023 ರಿಂದ ಜಾರಿಯಾಗಿರುವ ಪ್ರಕಾರ ಠೇವಣಿದಾರರಿಗೆ 6.2% ಬಡ್ಡಿ ದರವನ್ನು ನೀಡಲಾಗುತ್ತಿದೆ. ಠೇವಣಿದಾರರಿಗೆ ವಿಸ್ತರಣೆಯ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಈ ಖಾತೆಯನ್ನು ಮುಚ್ಚಲು ಅವಕಾಶವಿದ್ದು, ವಿಸ್ತೃತ ಖಾತೆಯ ಪ್ರತಿ ಪೂರ್ಣಗೊಂಡ ವರ್ಷಕ್ಕೆ, ಆರ್ಡಿ ಬಡ್ಡಿ ದರವು(RD intrest Rate)ಅನ್ವಯಿಸುತ್ತದೆ. ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿನ ಠೇವಣಿಗಳು ಖಾತೆಯನ್ನು ತೆರೆದ ದಿನದಿಂದ 5 ವರ್ಷಗಳಲ್ಲಿ ಮೆಚ್ಯುರ್ ಆಗುತ್ತದೆ.

* ಪ್ರತಿ ತಿಂಗಳು 1000 ಪಾವತಿಸಿದರೆ ಎಷ್ಟು ಮೊತ್ತ ಸಿಗಲಿದೆ?
ಪ್ರತಿ ತಿಂಗಳು ನೀವು 1000 ಹಣ ಕಟ್ಟಿದರೆ 5 ವರ್ಷಕ್ಕೆ 70,431 ರೂಪಾಯಿ ಸಿಗಲಿದ್ದು, ಒಂದು ವರ್ಷಕ್ಕೆ ಅಸಲಿ ಮೊತ್ತಕ್ಕಿಂತ 10,431 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ.

Advertisement

*ಪ್ರತಿ ತಿಂಗಳು 5000 ಪಾವತಿಸಿದರೆ ಎಷ್ಟು ಮೊತ್ತ ಸಿಗಲಿದೆ?
ಪೋಸ್ಟ್ ಆಫೀಸ್ ಆರ್ಡಿ ಸ್ಕೀಮ್ನಲ್ಲಿ ನೀವು ಪ್ರತಿ ತಿಂಗಳು 5 ಸಾವಿರ ಪಾವತಿ ಮಾಡಿದ್ದಲ್ಲಿ, 5 ವರ್ಷಗಳಿಗೆ 3.52 ಲಕ್ಷ ಸಿಗಲಿದೆ. ಅಸಲಿ ಮೊತ್ತಕ್ಕಿಂತ 52 ಸಾವಿರ ಹೆಚ್ಚು ಸಿಗಲಿದೆ. ಇದನ್ನು ಮುಂದಿನ 5 ವರ್ಷ ಅವಧಿಗೆ ವಿಸ್ತರಿಸಿದರೆ ಕೊನೆಯಲ್ಲಿ ನಿಮಗೆ 8.32 ಲಕ್ಷ ರೂಪಾಯಿ ಸಿಗಲಿದೆ.

* 10,000 ಪಾವತಿಸಿದರೆ ಎಷ್ಟು ಮೊತ್ತ ಸಿಗಲಿದೆ?
ಪ್ರತಿ ತಿಂಗಳು ನೀವು 10,000 ಆರ್ಡಿ ಕಟ್ಟಿದರೆ 10 ವರ್ಷ ಕಳೆಯುವಷ್ಟರಲ್ಲಿ 16.6 ಲಕ್ಷ ಸಿಗುತ್ತದೆ. ನಿಮ್ಮ ಅಸಲಿ ಮೊತ್ತಕ್ಕಿಂತ ಹೆಚ್ಚುವರಿಯಾಗಿ 4 ಲಕ್ಷ ಸಿಗಲಿದೆ.

ಇದನ್ನೂ ಓದಿ: ಕೊನೆಗೂ ಮದುವೆಗೆ ಮುನ್ನುಡಿ ಬರೆದ 'ಮಹಾಭಾರತದ' ಸುಶ್ಮಿತಾ- ಜಗ್ಗಪ್ಪ !! ಇಲ್ಲಿದೆ ನೋಡಿ ಮೆಹೆಂದಿ ಸಂಭ್ರಮದ ಕಲರ್ ಫುಲ್ ಫೋಟೋಸ್!!

Related News

Advertisement
Advertisement