ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

RBI ಬಡ್ಡಿದರಲ್ಲಿ ಬದಲಾವಣೆಯೋ ಇಲ್ಲಾ ಯಥಾಸ್ಥಿಯೋ?! ಇಲ್ಲಿದೆ ನೋಡಿ ಬಿಗ್ ಅಪ್ಡೇಟ್

12:29 PM Dec 08, 2023 IST | ಕಾವ್ಯ ವಾಣಿ
UpdateAt: 12:30 PM Dec 08, 2023 IST
Image source: Hindustan Times
Advertisement

RBI Repo Rate: ಹಣದುಬ್ಬರವು ಆರ್​ಬಿಐಗೆ ಸವಾಲಾಗಿದ್ದು, 2023-24ರಲ್ಲಿ ಹಣದುಬ್ಬರ ಶೇ. 5.4ರಷ್ಟಿರಬಹುದು ಎಂದಿದೆ. ಈ ಹಿನ್ನೆಲೆ ರೆಪೋ ದರವನ್ನು (RBI Repo Rate) ಶೇ. 6.5ರಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಇದರೊಂದಿಗೆ ಸತತ 5ನೇ ಬಾರಿ ರೆಪೋ ದರ ಯಥಾಸ್ಥಿತಿಯಲ್ಲಿದೆ. ಎಸ್​ಡಿಎಫ್ ಮತ್ತು ಎಂಎಸ್​ಎಫ್ ದರಗಳ ಯಥಾಸ್ಥಿತಿ ಕಾಯ್ದುಕೊಳ್ಳಲೂ ಆರ್​ಬಿಐ ನಿರ್ಧರಿಸಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್​​ಬಿಐ ಹೆಚ್ಚಿಸಿದ್ದು, ಮುಂದಿನ ನಾಲ್ಕು ತ್ರೈಮಾಸಿಕ ಅವಧಿಯ ಜಿಡಿಪಿ ಬೆಳವಣಿಗೆ ಅಂದಾಜು ಮಾಡಿದೆ.

Advertisement

ಮೂರು ದಿನಗಳ ಎಂಪಿಸಿ ಸಭೆ ಬಳಿಕ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಸತತ ಐದನೇ ಬಾರಿ ರೆಪೋ ದರ ಶೇ. 6.5ರ ದರದ ಮಟ್ಟದಲ್ಲೇ ಇದೆ.

ಪ್ರತೀ ಎರಡು ತಿಂಗಳು ನಡೆಯುವ ಎಂಪಿಸಿ ಸಭೆಯಲ್ಲಿ ರೆಪೋ ದರ ಮಾತ್ರವಲ್ಲ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರವನ್ನು ಕ್ರಮವಾಗಿ ಶೇ. 6.25 ಮತ್ತು ಶೇ. 6.75ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಇನ್ನು, ಹಣದುಬ್ಬರಕ್ಕೆ ಕಡಿವಾಣ ಹಾಕಲು ಒಂದು ಪ್ರಮುಖ ಅಸ್ತ್ರವೆನ್ನಲಾದ ವಿತ್​ಡ್ರಾಯಲ್ ಆಫ್ ಅಕಾಮಡೇಶನ್​ನ ಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಯಿತು. ಆರ್​ಬಿಐನ ಆರು ಮಂದಿ ಎಂಪಿಸಿ ಸದಸ್ಯರ ಪೈಕಿ ಐವರು ಇದಕ್ಕೆ ಬೆಂಬಲ ಸೂಚಿಸಿದ್ದು ತಿಳಿದುಬಂದಿದೆ.

Advertisement

ಈಗಾಗಲೇ 2023-24ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟಿರಬಹುದು ಎಂದು ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್​ಬಿಐ ಅಂದಾಜು ಮಾಡಿತ್ತು. ಈ ಬಾರಿ ತನ್ನ ಅಭಿಪ್ರಾಯವನ್ನು ಬದಲಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ- ಯುವತಿಯ ಮೈ ಸವರಿದ ಕಾಮುಕ !!

Related News

Advertisement
Advertisement