For the best experience, open
https://m.hosakannada.com
on your mobile browser.
Advertisement

Pension Scheme:ಈ ಯೋಜನೆಯಡಿ ಒಮ್ಮೆ ಹೂಡಿಕೆ ಮಾಡಿ ಸಾಕು, ಮತ್ತೆ ಪ್ರತೀ ತಿಂಗಳು ಕೈತುಂಬಾ ಸಿಗುತ್ತೆ ಪೆನ್ಶನ್ !! ಜೀವಮಾನವಿಡೀ ದುಡಿಯುವುದೇ ಬೇಡ

11:07 AM Dec 31, 2023 IST | ಅಶ್ವಿನಿ ಹೆಬ್ಬಾರ್
UpdateAt: 11:07 AM Dec 31, 2023 IST
pension scheme ಈ ಯೋಜನೆಯಡಿ ಒಮ್ಮೆ ಹೂಡಿಕೆ ಮಾಡಿ ಸಾಕು  ಮತ್ತೆ ಪ್ರತೀ ತಿಂಗಳು  ಕೈತುಂಬಾ ಸಿಗುತ್ತೆ ಪೆನ್ಶನ್    ಜೀವಮಾನವಿಡೀ ದುಡಿಯುವುದೇ ಬೇಡ
Image credit source: zeebiz.com
Advertisement

Pension Scheme: ಸರ್ಕಾರ ಹಿರಿಯ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು(Schemes for Senior Citizens) ಜಾರಿಗೆ ತಂದಿದ್ದು, ಈ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಪ್ರಧಾನ ಮಂತ್ರಿ ವಯ ವಂದ ಯೋಜನೆಯು(PM Vaya Vandana Yojana) ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ಪರಿಚಯಿಸಲಾಗಿರುವ ಯೋಜನೆಯಾಗಿದೆ.

Advertisement

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸುವ ಹಿರಿಯ ನಾಗರಿಕರಿಗೆ(PM Vaya Vandana Yojana) ಉತ್ತಮ ಆಯ್ಕೆಯಾಗಿದ್ದು, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ನಡೆಸುವ ಈ ಯೋಜನೆಯ ಲಾಭ ಪಡೆಯಲು 60 ವರ್ಷ ವಯಸ್ಸಿನವರು ಅರ್ಹರಾಗುತ್ತಾರೆ. ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿ ಮೊತ್ತದ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಗಳಿಸಬಹುದು.

ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷದ ನಂತರ ಮೊದಲ ಪಿಂಚಣಿ ಕಂತನ್ನು ಪಡೆಯಬಹುದು. 10 ವರ್ಷಗಳ ಪಾಲಿಸಿ ಅವಧಿ ಇರಲಿದ್ದು,ಪಾಲಿಸಿಯ ಸಮಯದಲ್ಲಿ ಪಿಂಚಣಿದಾರರು ಮರಣ ಹೊಂದಿದರೆ ಹೂಡಿಕೆ ಮಾಡಿದ ಮೊತ್ತವನ್ನು ಫಲಾನುಭವಿಯ ಕುಟುಂಬ ಸದಸ್ಯರಿಗೆ ಹಿಂತಿರುಗಿಸಲಾಗುತ್ತದೆ.

Advertisement

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆದಾರರು ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಲು ಅವಕಾಶವಿದೆ. ತ್ರೈಮಾಸಿಕ ಪಿಂಚಣಿಗೆ ಗರಿಷ್ಠ ಹೂಡಿಕೆ ಮೊತ್ತ 14,89,933 ರೂಪಾಯಿ, ಅರೆ ವಾರ್ಷಿಕ ಪಿಂಚಣಿಗೆ 14,76,064 ರೂಪಾಯಿ ಮತ್ತು ವಾರ್ಷಿಕ ಪಿಂಚಣಿಗೆ 14,49,086 ರೂಪಾಯಿ ಹೂಡಿಕೆ ಮಾಡಬಹುದು. ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ 15 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಯೋಜನೆ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಲು ಅವಕಾಶವಿದೆ.

ಪಿಂಚಣಿದಾರರು ಪಾಲಿಸಿ ಅವಧಿಯ ಅಂತ್ಯದವರೆಗೆ ಜೀವಿಸಿದ್ದರೆ ಹೂಡಿಕೆ ಮೊತ್ತ ಮತ್ತು ಅಂತಿಮ ಪಿಂಚಣಿ ಎರಡನ್ನೂ ಹೂಡಿಕೆದಾರರಿಗೆ ನೀಡಲಾಗುತ್ತದೆ. ಮಾಸಿಕ ಪಿಂಚಣಿ ಪಾವತಿಗಳೊಂದಿಗೆ ವಾರ್ಷಿಕ ಬಡ್ಡಿ ದರವು 7.4 ಪ್ರತಿಶತ ಸಿಗಲಿದೆ.ಈ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿ ರೂ.1,000 ಮತ್ತು ಗರಿಷ್ಠ ಪಿಂಚಣಿ ರೂ.9,250 ಆಗಿದೆ. ಮಾಸಿಕ ರೂ.1,62,162, ತ್ರೈಮಾಸಿಕ ರೂ.1,61,074, ಅರ್ಧವಾರ್ಷಿಕ ರೂ.1,59,574 ಮತ್ತು ವಾರ್ಷಿಕ ರೂ.1,56,658. ಪಿಂಚಣಿ ದೊರೆಯಲಿದೆ. ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ ಈ ಕಂತನ್ನು ಒದಗಿಸಲಾಗುತ್ತದೆ.

Advertisement
Advertisement
Advertisement