For the best experience, open
https://m.hosakannada.com
on your mobile browser.
Advertisement

EPFO Update: ಜಾಬ್ ಚೇಂಜ್ ಮಾಡಿದ್ದೀರಾ?! ಹಾಗಿದ್ರೆ ತಕ್ಷಣ EPFಗೆ ಸಂಬಂಧಿಸಿದ ಈ ಕೆಲಸ ಮಾಡಲೇ ಬೇಕು !

10:52 AM Dec 12, 2023 IST | ಅಶ್ವಿನಿ ಹೆಬ್ಬಾರ್
UpdateAt: 10:53 AM Dec 12, 2023 IST
epfo update  ಜಾಬ್ ಚೇಂಜ್ ಮಾಡಿದ್ದೀರಾ    ಹಾಗಿದ್ರೆ ತಕ್ಷಣ epfಗೆ ಸಂಬಂಧಿಸಿದ ಈ ಕೆಲಸ ಮಾಡಲೇ ಬೇಕು
Advertisement

PF account merge : ಖಾಸಗಿ ಉದ್ಯೋಗಿಗಳು ಆಗಾಗ ತಮ್ಮ ಉದ್ಯೋಗಗಳನ್ನು ಬದಲಾಯಿಸುವುದು ಸಹಜ. ಒಬ್ಬ ವ್ಯಕ್ತಿಯು ತನ್ನ ಕಂಪನಿ ಬದಲಾಯಿಸುವ ಸಂದರ್ಭ ಹಳೆಯ UAN ಸಂಖ್ಯೆಯ ಮುಖಾಂತರ ಅವರ ಹೊಸ PF ಖಾತೆಯು ಸ್ವಯಂಚಾಲಿತವಾಗಿ ಲಿಂಕ್ ಆಗುತ್ತದೆ ಎಂದುಕೊಳ್ಳುತ್ತಾರೆ. ಆದರೆ, ಕೆಲಸ ಬದಲಾಯಿಸಿದ ಕೂಡಲೇ ಉದ್ಯೋಗಿ ಸ್ವತಃ ಇಪಿಎಫ್‌ಒ ವೆಬ್‌ಸೈಟ್‌ಗೆ (Epfo Website)ಹೋಗಿ ತನ್ನ ಹೊಸ ಪಿಎಫ್ ಖಾತೆಯನ್ನು ಯುಎಎನ್‌ಗೆ ಲಿಂಕ್ ಮಾಡಬೇಕಾಗುತ್ತದೆ.

Advertisement

ಹಣಕಾಸು ತಜ್ಞರ ಪ್ರಕಾರ, ಹೊಸ ಇಪಿಎಫ್ ಖಾತೆಯನ್ನು ಹಳೆಯ ಖಾತೆಯೊಂದಿಗೆ ವಿಲೀನಗೊಳಿಸದೆ (PF account merge) ಇದ್ದಲ್ಲಿ ಹಳೆ ಖಾತೆಯಲ್ಲಿರುವ ಹಣವು ನಿಮಗೆ ಒಂದೇ ಬಾರಿಗೆ ಕಾಣುವುದಿಲ್ಲ. ಇದರ ಜೊತೆಗೆ ತೆರಿಗೆ ಉಳಿತಾಯದ ದೃಷ್ಟಿಯಿಂದ ಎರಡು ಖಾತೆಗಳನ್ನು ಲಿಂಕ್ ಮಾಡುವುದು(How to link all provident fund accounts) ಅತ್ಯಗತ್ಯ. ನಿಮ್ಮ ಎಲ್ಲಾ EPF ಖಾತೆಗಳನ್ನು ವಿಲೀನಗೊಳಿಸದಿದ್ದರೆ, ನೀವು ಪ್ರತಿ ಕಂಪನಿಗೆ ಪ್ರತ್ಯೇಕವಾಗಿ TDS ಅನ್ನು ಪಾವತಿ ಮಾಡಬೇಕಾಗುತ್ತದೆ. ಉದಾ, ನೀವು ತಲಾ 3 ವರ್ಷಗಳ ಕಾಲ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ಎರಡೂ ಕಂಪನಿಗಳ ಖಾತೆಗಳನ್ನು ವಿಲೀನಗೊಳಿಸಿದ ಬಳಿಕ ಅದನ್ನು 6 ವರ್ಷಗಳೆಂದು ಲೆಕ್ಕ ಹಾಕಲಾಗುತ್ತದೆ. ಇಲ್ಲವಾದರೆ 3-3 ವರ್ಷಗಳವರೆಗೆ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ.

ನೀವು 5 ವರ್ಷಗಳವರೆಗೆ ನಿರಂತರವಾಗಿ ಹಣವನ್ನು ಠೇವಣಿ ಮಾಡಿದ ಬಳಿಕ ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವ ಸಂದರ್ಭ ಅದರ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿ ಮಾಡಬೇಕಾದ ಅವಶ್ಯಕತೆ ಇಲ್ಲ. ಆದರೆ, ಅದಕ್ಕೂ ಮೊದಲು ಹಣವನ್ನು ಹಿಂಪಡೆದ ಸಂದರ್ಭ ತೆರಿಗೆ ನೀಡಬೇಕಾಗುತ್ತದೆ.

Advertisement

ಖಾತೆಗಳನ್ನು ವಿಲೀನಗೊಳಿಸುವ ವಿಧಾನ ಹೀಗಿದೆ:
* ನಿಮ್ಮ ಎಲ್ಲಾ EPFO ಖಾತೆಗಳನ್ನು ವಿಲೀನಗೊಳಿಸಲು ಬಯಸಿದರೆ, ಇದಕ್ಕಾಗಿ EPFO ಪೋರ್ಟಲ್ https://unifiedportal-mem.epfindia.gov.in ಅನ್ನು ಕ್ಲಿಕ್ ಮಾಡಬೇಕು.
* ಇದಾದ ಬಳಿಕ, ಆನ್‌ಲೈನ್ ಸೇವೆಗಳ ವಿಭಾಗದಲ್ಲಿ 'One Member - One EPF Account' ಆಯ್ಕೆಮಾಡಬೇಕು.
* ಇದಾದ ಬಳಿಕ, ನಿಮ್ಮ ವೈಯಕ್ತಿಕ ವಿವರಗಳನ್ನು ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗದಾತರ ವಿವರಗಳನ್ನು ಭರ್ತಿ ಮಾಡುವ ಮುಖಾಂತರ ನಿಮ್ಮ ಖಾತೆಯನ್ನು ಪರಿಶೀಲಿಸಬೇಕು.
* ಈ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿದ ಸಂದರ್ಭ ಹಳೆಯ ಉದ್ಯೋಗದಾತರ ಪಟ್ಟಿ ಕಾಣಬಹುದು. ಇದನ್ನು ವರ್ಗಾಯಿಸಲು ಬಯಸುವ ಖಾತೆಯ ಮೇಲೆ ಕ್ಲಿಕ್ ಮಾಡಬೇಕು.
* ಇದರ ಜೊತೆಗೆ'Get OTP' ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದ್ದು, ಇದನ್ನು ಬರೆದು ಸಬ್ಮಿಟ್ ಮಾಡಿಕೊಳ್ಳಿ.
ಈ ಪ್ರಕ್ರಿಯೆಯು ಪೂರ್ಣಗೊಂಡ ಕೂಡಲೇ ನಿಮ್ಮ ಉದ್ಯೋಗದಾತರು ಅದನ್ನು ಅನುಮೋದನೆ ನೀಡುತ್ತಾರೆ. ಇದಾದ ಬಳಿಕ EPFO ನಿಮ್ಮ ಹಳೆಯ ಖಾತೆಯನ್ನು ಹೊಸ ಖಾತೆಗೆ ವಿಲೀನ ಮಾಡಲಾಗುತ್ತದೆ.

ಇದನ್ನೂ ಓದಿ: New Criminal Laws: ಭಾರತೀಯ ನ್ಯಾಯ ಸಂಹಿತಾ ಬಿಲ್ ಜೊತೆಗೆ 3 ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆದ ಕೇಂದ್ರ !!

Advertisement
Advertisement
Advertisement