For the best experience, open
https://m.hosakannada.com
on your mobile browser.
Advertisement

Nirmala Sitharaman: ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಪ್ರಭಾವಿ ಮಹಿಳೆಯರಿಗೆ ಸ್ಥಾನ, ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸ್ಥಾನ ಎಷ್ಟನೆಯದ್ದು ?!

11:51 AM Dec 08, 2023 IST | ಸುದರ್ಶನ್
UpdateAt: 05:22 PM Dec 09, 2023 IST
nirmala sitharaman  ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಪ್ರಭಾವಿ ಮಹಿಳೆಯರಿಗೆ ಸ್ಥಾನ  ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸ್ಥಾನ ಎಷ್ಟನೆಯದ್ದು
Image credit: Hindustan Times

Nirmala Sitharaman: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗೈಯುತ್ತಿದ್ದು, ಆಡಳಿತ ನಿರ್ವಹಣೆಯಂಥ ಪುರುಷ ಪ್ರಧಾನ ವ್ಯವಸ್ಥೆಗಳಲ್ಲಿ ಕೂಡ ಮಹಿಳೆಯರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಫೋರ್ಬ್ಸ್ 2023 ಬಿಡುಗಡೆ ಮಾಡಿದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ನಾಲ್ಕು ಮಹಿಳೆಯರು ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸೇರಿದಂತೆ ಮೂವರು ಭಾರತೀಯ ಉದ್ಯಮಿಗಳ ಮಾಹಿತಿ ಇಲ್ಲಿದೆ ನೋಡಿ.

Advertisement

2023 ರಲ್ಲಿ 32ನೇ ಸ್ಥಾನ ಗಿಟ್ಟಿಸಿಕೊಂಡಿರುವ ನಿರ್ಮಲಾ ಸೀತಾರಾಮನ್(2022- 36ನೆ ರಾಂಕ್) , ಪ್ರಸ್ತುತ ಭಾರತದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗೆಯೇ ನಿರ್ಮಲಾ ಸೀತಾರಾಮನ್ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಹುದ್ದೆಯನ್ನೂ ಹೊಂದಿದ್ದಾರೆ.

ಭಾರತೀಯ ಪ್ರಭಾವಿ ಮಹಿಳೆಯರಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿರುವ ರೋಶ್ನಿ ನಾಡರ್ ಮಲ್ಹೋತ್ರಾ , ಫೋರ್ಬ್ಸ್ ಪಟ್ಟಿಯಲ್ಲಿ 60ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಉದ್ಯಮಿ ಶಿವ ನಾಡಾರ್ ರ ಪುತ್ರಿಯಾಗಿದ್ದು, ಇವರು ಪ್ರಸ್ತುತವಾಗಿ HCL ಕಾರ್ಪೊರೇಷನ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಫೋರ್ಬ್ಸ್ ಪಟ್ಟಿಯಲ್ಲಿ 70ನೇ ಸ್ಥಾನ ಪಡೆದ ಸೋಮಾ ಮೊಂಡಲ್ , ಭಾರತದ ಮೂರನೇ ಪ್ರಭಾವಿ ಮಹಿಳೆ ಎನಿಸಿಕೊಂಡಿದ್ದಾರೆ. ಇವರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL)ದ ಅಧ್ಯಕ್ಷೆ.
ಫೋರ್ಬ್ಸ್ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ 76 ನೇ ಸ್ಥಾನ ಪಡೆದು ಭಾರತದ ನಾಲ್ಕನೇ ಪ್ರಭಾವಿ ಮಹಿಳೆ ಎನಿಸಿಕೊಂಡಿದ್ದಾರೆ.

ಇದನ್ನು ಓದಿ: Superstar Rajanikanth: ರಜನಿಕಾಂತ್ ಗೂ ಎಫೆಕ್ಟ್ ಕೊಟ್ಟ ‘ಮೈಚಾಂಗ್’ ಚಂಡಮಾರುತ – ಸೂಪರ್ ಸ್ಟಾರ್ ಗೂ ಎಂತಾ ಸ್ಥಿತಿ ಬಂತು ನೀವೇ ನೋಡಿ

ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೆಯೆನ್ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಪ್ರಪಂಚದ ಅತ್ಯಂತ ಪ್ರಭಾವಿ ಮಹಿಳೆ ಎನಿಸಿಕೊಂಡಿದ್ದಾರೆ.
ಎರಡನೇ ಸ್ಥಾನ ಪಡೆದಿರುವ ಕ್ರಿಸ್ಟಿನ್ ಲಗಾರ್ಡೆ ಇವರು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆಯಾಗಿದ್ದಾರೆ.
ಯುಎಸ್ ಉಪಾಧ್ಯಕ್ಷೆ, ಕಮಲಾ ಹ್ಯಾರಿಸ್ ಮೂರನೇ ಸ್ಥಾನ ಪಡೆದಿದ್ದು, ಭಾರತೀಯ ಮೂಲದ ಮತ್ತೋರ್ವಳು ಇಲ್ಲಿ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Shotgun: ಗೆಳೆಯನಿಗೆ ಶೂಟ್ ಮಾಡಿ ತಾನೂ ಪ್ರಾಣಬಿಟ್ಟ 14ರ ಸ್ಕೂಲ್ ಹುಡುಗಿ - ಕಾರಣ ಮಾತ್ರ ಭಯಾನಕ!!

Advertisement
Advertisement