ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Car Insurance: ಓನ್ ಡ್ಯಾಮೇಜ್ ಇನ್ಸೂರೆನ್ಸ್ ಅಂದ್ರೆ ಏನು, ಅದನ್ನು ಕೊಂಡರೆ ಏನು ಲಾಭ ?, ಇಲ್ಲಿದೆ ಸಮಗ್ರ ಮಾಹಿತಿ !

08:42 PM Mar 08, 2024 IST | ಕೆ. ಎಸ್. ರೂಪಾ
UpdateAt: 11:56 AM Mar 25, 2024 IST
Advertisement

Car Insurance: ಇನ್ಸೂರೆನ್ಸ್ ಬಗ್ಗೆ ನಿಮ್ಮಲ್ಲಿ ಎಷ್ಟೇ ಮಾಹಿತಿ ಇರಲಿ, ಒಂದಲ್ಲ ಒಂದು ಕಡೆ ನಮಗೆ ಕನ್ಫ್ಯೂಸ್ ಆಗೋದು ಪಕ್ಕಾ. ಎಷ್ಟೋ ಇನ್ಶೂರೆನ್ಸ್ ಗೆ (Insurance) ಸಂಬಂಧಿಸಿದ ವಿಷಯಗಳು ನಮಗೆ ಅರ್ಥವೇ ಆಗುವುದಿಲ್ಲ. ಪ್ರತಿ ಸಲ ಅದರ ಬಗ್ಗೆ ತಿಳಿದುಕೊಳ್ಳಲು ಪರದಾಡುತ್ತೇವೆ. ಇವತ್ತು ನಾವಿಲ್ಲ ಸ್ವಂತ ಹಾನಿ (Own damage) ಮತ್ತು ಮೂರನೇ ವ್ಯಕ್ತಿಯ ವಿಮೆಯ (Third party insurance) ನಡುವಿನ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲಿದ್ದೇವೆ. ನಾವು ಈ ವಿಮಾ ಪ್ರಕಾರಗಳನ್ನು ಸರಳ ಪದಗಳಲ್ಲಿ ನೀವು ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಹಾಗೆ ಹೇಳುತ್ತೇವೆ.

Advertisement

ನೀವು ನಿಮ್ಮ ಪಾಲಿಸಿಯನ್ನು ನೀವು ನವೀಕರಿಸುವ, ಅಥವಾ ನಿಮ್ಮ ಡ್ರೀಮ್ ಕಾರು (Dream car) ವಿಮೆಗಾಗಿ ವಿವಿಧ ಕವರೇಜ್ ಆಯ್ಕೆಗಳನ್ನು ಅನ್ವೇಷಿಸುತ್ತಿರಲಿ, ನೀವು ಇನ್ಶೂರೆನ್ಸ್ ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಅಗತ್ಯ. ಅದಕ್ಕಿಂತ ಮೊದಲು ನೀವು ಇನ್ಸ್ಯೂರೆನ್ಸ್ ಸಂಬಂಧಿಸಿದ ಪ್ರಾಥಮಿಕ ಪಾಠಗಳನ್ನು ತಿಳಿದುಕೊಳ್ಳಲೇ ಬೇಕು.

Yaduveer Wadiyar: ಟಿಕೆಟ್ ಸಿಕ್ಕ ಬೆನ್ನಲ್ಲೇ ಯದುವೀರ್ ಒಡೆಯರ್ ಫಸ್ಟ್ ರಿಯಾಕ್ಷನ್ ಹೀಗಿತ್ತು !!

*ಸ್ವಂತ ಡ್ಯಾಮೇಜ್ ಇನ್ಶೂರೆನ್ಸ್ ಅಂದ್ರೆ ಏನು ?*
ಸ್ವಂತ ಡ್ಯಾಮೇಜ್ ಇನ್ಶೂರೆನ್ಸ್ ನಿಮ್ಮ ವಿಮೆ ಮಾಡಿದ ವಾಹನಗಳಿಗೆ ಆಗುವ ಹಾನಿಗಳಿಗೆ ಕವರೇಜ್ ಒದಗಿಸುತ್ತದೆ. ವಾಹನಕ್ಕೆ ಆಗುವ ಅಪಘಾತಗಳು, ವಾಹನದ ಅಥವಾ ಬಿಡಿಭಾಗಗಳ ಕಳ್ಳತನಗಳು, ನೈಸರ್ಗಿಕ ವಿಕೋಪಗಳು ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದ ನಿಮ್ಮ ವಾಹನಗಳಿಗೆ ಆಗುವ ಹಾನಿಯನ್ನು ಕಟ್ಟಿಕೊಡುತ್ತದೆ ಓನ್ ಡ್ಯಾಮೇಜ್ ಇನ್ಶುರೆನ್ಸ್ (own damage insurance) ಆದರೆ ನೆನಪಿಡಿ, ಓನ್ ಡ್ಯಾಮೇಜ್ ಇನ್ಶುರೆನ್ಸ್ ಕಡ್ಡಾಯವಲ್ಲ.

Advertisement

ಹೌದು, ಭಾರತೀಯ ಮೋಟಾರು ವಾಹನ ಕಾನೂನುಗಳ ( Indian motor act) ಅಡಿಯಲ್ಲಿ ಸ್ವಂತ ಹಾನಿ ವಿಮೆ ಕಡ್ಡಾಯವಲ್ಲ. ಆದಾಗ್ಯೂ, ನಿಮ್ಮ ವಾಹನದ ರಕ್ಷಣೆಗಾಗಿ ಸ್ವಂತ ಹಾನಿ ವಿಮೆ ಕೊಳ್ಳುವುದು ಒಳ್ಳೆಯದು. ಸ್ವಂತ ಹಾನಿ ವಿಮೆಯು ಪ್ರಾಥಮಿಕವಾಗಿ ನಿಮ್ಮ ವಾಹನವನ್ನು ರಕ್ಷಿಸುತ್ತದೆ. ನೀವು ಕಷ್ಟ ಪಟ್ಟು ಖರೀದಿಸಿದ ವಾಹನಕ್ಕೆ ಹಾನಿಯಾದಲ್ಲಿ ಅಥವಾ ಲಕ್ಶಾಂತರ ದುಡ್ಡಿನ ನಿಮ್ಮ ವಾಹನಕ್ಕೇ ಅಪಘಾತವಾಗಿ ರಿಪೇರಿಗೆ ಬಂದಲ್ಲಿ ನಿಮ್ಮ ದುಡ್ಡು ಕರಗಿ ಹೋಗೋದು ಗ್ಯಾರಂಟಿ. ಅಂತಹಾ ಸಂದರ್ಭಗಳಲ್ಲಿ ಓನ್ ಡ್ಯಾಮೇಜ್ ಇನ್ಸೂರೆನ್ಸ್ ನಿಮ್ಮ ಕೈ ಹಿಡಿಯುತ್ತದೆ.

Elon Musk:ಎಲಾನ್ ಮಸ್ಕ್ಗೆ 40 ಬಿಲಿಯನ್ ಡಾಲರ್ ನಷ್ಟ

ನೀವು ಸ್ವತಂತ್ರ ಹಾನಿ ವಿಮೆಯನ್ನು ಸ್ವತಂತ್ರ ಪಾಲಿಸಿಯಾಗಿ ಖರೀದಿಸಲು ಸಾಧ್ಯವಿಲ್ಲ. ಅಂದರೆ ನನಗೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಬೇಡ ಕೇವಲ ಓನ್ ಡ್ಯಾಮೇಜ್ ಇನ್ಸೂರೆನ್ಸ್ ಪಡೆಯುತ್ತೇನೆ ಎಂದು ನೀವು ಆಯ್ಕೆ ಮಾಡಿಕೊಳ್ಳುವಂತಿಲ್ಲ. ಇದನ್ನು ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಅಥವಾ ಸಮಗ್ರ ಕಾರು ವಿಮಾ ಯೋಜನೆಯ ಭಾಗವಾಗಿ ಮಾತ್ರ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಅನ್ನು ಪಡೆಯಬಹುದು.

ಸ್ವಂತ ಹಾನಿ ವಿಮೆಯು ಹೆಚ್ಚುವರಿ ಇನ್ಶೂರೆನ್ಸ್ ಕವರ್‌ಗಳನ್ನು ಖರೀದಿಸುವ ಮೂಲಕ ಗ್ರಾಹಕರ ವೈಯಕ್ತಿಕ ಆಯ್ಕೆಗಳನ್ನು ಪುರಸ್ಕರಿಸುತ್ತದೆ. ಅಂದರೆ ಸಾಮಾನ್ಯ ಪರಿಭಾಷೆಯಲ್ಲಿ ಬಂಪರ್ ಟು ಬಂಪರ್ ಇನ್ಸೂರೆನ್ಸ್ ಇಂತಹದೇ ಒಂದು ವೈಯಕ್ತಿಕ ಆಯ್ಕೆಯ ಅವಕಾಶ. ಇದನ್ನು ಸಾಮಾನ್ಯವಾಗಿ ಆಡ್-ಆನ್‌ಗಳು ಎಂದು ಕರೆಯಲಾಗುತ್ತದೆ. ಈ ಆಡ್-ಆನ್‌ಗಳು ನಿಲ್ ಡಿಪ್ರಿಸಿಯೇಶನ್ ಕವರ್, ಎನ್‌ಸಿಬಿ ಪ್ರೊಟೆಕ್ಟ್ ಕವರ್ ಮುಂತಾದ ಹಲವು ವಿಧಗಳಲ್ಲಿ ಇರುತ್ತದೆ.

Bengaluru: ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯಿಂದ ಅಶ್ಲೀಲ ವಿಡಿಯೋ ನೆಟ್ಟಿಗೆ ಅಪ್ಲೋಡ್, ಪತಿಯಿಂದ ದೂರು ದಾಖಲು !

*ಓನ್ ಡ್ಯಾಮೇಜ್ ಇನ್ಶುರೆನ್ಸ್ ಒಂದು ವರ್ಷಕ್ಕೆ ಸೀಮಿತ !*
ಸ್ವಂತ ಹಾನಿ ವಿಮೆಯು ಸಾಮಾನ್ಯವಾಗಿ ಒಂದು ವರ್ಷದ ಮಾನ್ಯತೆಯನ್ನು ಹೊಂದಿರುತ್ತದೆ ಮತ್ತು ಮರು ವರ್ಷ ಪ್ರೀಮಿಯಂ ತುಂಬಿ ಅದನ್ನು ನವೀಕರಣ ಮಾಡುವ ಅಗತ್ಯವಿರುತ್ತದೆ. ಪಾಲಿಸಿ ಅವಧಿಯುದ್ದಕ್ಕೂ ನಿಮ್ಮ ವಾಹನವು ಯಾವುದೇ ಅನಿರೀಕ್ಷಿತ ಹಾನಿಗಳಿಂದ ಹಾನಿಯಾದರೆ ಅದರ ನಿರ್ಧಾರಿತ ಮೌಲ್ಯವನ್ನು ಈ ಇನ್ಶೂರೆನ್ಸ್ ರಕ್ಷಿಸಿ ಕೊಡುತ್ತದೆ. ನಾಳೆ, ಥರ್ಡ್ ಪಾರ್ಟಿ ಇನ್ಸೂರೆನ್ಸ್ ಅಂದರೆ ಏನು ಮತ್ತು ಓನ್ ಡ್ಯಾಮೇಜ್ ಇನ್ಸೂರೆನ್ಸ್ ಮತ್ತು ಥರ್ಡ್ ಪಾರ್ಟಿ ಇನ್ಶುರೆನ್ಸ್ ನಡುವಿನ ವ್ಯತ್ಯಾಸಗಳೇನು ಎನ್ನುವ ಬಗ್ಗೆ ತಿಳಿಯೋಣ.

Advertisement
Advertisement