Gold price: ಇನ್ಮುಂದೆ ಚಿನ್ನ ಕೊಳ್ಳೋದು ಭಾರೀ ಕಷ್ಟ - ಊಹಿಸಲೂ ಸಾಧ್ಯವಾಗದಷ್ಟು ಒಮ್ಮೆಲೆ ಏರಿಕೆ ಕಂಡ ಬಂಗಾರದ ಬೆಲೆ !!
Gold price: ಭಾರತೀಯ ನಾರಿಯರಿಗೆ ಬಂಗಾರ ಎಂದರೆ ಬಲು ಪ್ರೀತಿ. ಪ್ರಪಂಚದ ಯಾವ ಮಹಿಳೆಯರೂ ಕೂಡ ಭಾರತೀಯ ಮಹಿಳೆಯರಂತೆ ಚಿನ್ನ ಧರಿಸುವುದಿಲ್ಲ. ಭಾರತದಲ್ಲಿ ಪ್ರತೀ ದಿನವೂ ಚಿನ್ನದಂಗಡಿಗಳು ಫುಲ್ ಆಗಿರುತ್ತವೆ. ಬೆಲೆ ಎಷ್ಟೇ ಜಾಸ್ತಿ ಆದ್ರೂ ನಾವು ಚಿನ್ನಕೊಳ್ಳುತ್ತೇವೆ ಅನ್ನುತ್ತಾರೆ. ಇಂದೂ ಪುರುಷರೂ ಕೂಡ ಹೆಚ್ಚು ಚಿನ್ನ ಧರಿಸುವುದುಂಟು. ಆದರೇ ಇನ್ಮುಂದೆ ಈ ಹೊಳೆಯುವ ಹಳದಿ ಲೋಹವನ್ನು ಕೊಳ್ಳುವುದು ಭಾರೀ ಕಷ್ಟ ಬಿಡಿ. ಯಾಕೆಂದರೆ ಊಹಿಸಲೂ ಸಾಧ್ಯವಾಗದ ಮಟ್ಟಕ್ಕೆ ಬಂಗಾರದ ಬೆಲೆ(Gold Price) ಏರಿದೆ.
ಹೌದು, ಚಿನ್ನದ ಬೆಲೆಯು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಇನ್ನು ಖರೀದಿ ಬಹಳ ಕಷ್ಟವಾಗಲಿದೆ. ಯಾಕೆಂದರೆ MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 63,880 ರೂ.ಗೆ ತಲುಪಿದೆ. ಇಂಟ್ರಾಡೇನಲ್ಲಿ ಚಿನ್ನದ ದರ 600 ರೂ. ಏರಿಕೆಯಾಗಿದೆ. ಅದೇ ರೀತಿ, COMEXನಲ್ಲಿ ಕೂಡ ಚಿನ್ನದ ದರವು ಪ್ರತಿ ಔನ್ಸ್ ಗೆ 2104 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದ್ದು ಮುಂದೆಯೂ ಬೆಲೆಗಳ ಏರಿಕೆ ಮುಂದುವರಿಯಲಿದೆ ಎನ್ನುತ್ತಾರೆ ವಿಶ್ಲೇಷಕರು. ಇದು ದೇಶೀಯ ಮಾರುಕಟ್ಟೆಗಳಲ್ಲೂ ಪ್ರಭಾವ ಬೀರಲಿದ್ದು ಬೆಲೆಯಲ್ಲಿ ಭಾರೀ ಏರಿಕೆ ಕಂಡುಬರಲಿದೆ.
ಬೇರೆ ಬೇರೆ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ :
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 58,850 ರೂಪಾಯಿಗಳಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 59,000 ರೂ ಗಡಿ ತಲುಪಿದೆ. ಅಂತೆಯೇ ಚೆನ್ನೈನಲ್ಲಿ 59,750 ರೂ, ಕೇರಳದಲ್ಲಿ 58,850 ರೂ, ಹೈದರಾಬಾದ್ ನಲ್ಲಿ 58,850 ರೂ. ಮುಂಬಯಿಯಲ್ಲಿ 58,850 ರೂಗಳಷ್ಟಿದೆ.
ಇದನ್ನೂ ಓದಿ: Belagavi: BJP ಪ್ರಬಲ ನಾಯಕನಿಗೆ ಚಾಕು ಇರಿತ - ಕಾಂಗ್ರೆಸ್ ನಾಯಕನ ಕೈವಾಡ ?!