For the best experience, open
https://m.hosakannada.com
on your mobile browser.
Advertisement

ನಿಮ್ಮಲ್ಲಿ 2 ಇಪಿಎಫ್, ಯುಎಎನ್ ಖಾತೆ ಇದೆಯಾ! ಅದಷ್ಟು ಬೇಗ ವಿಲೀನಗೊಳಿಸಿ!!

04:53 PM Feb 19, 2024 IST | ಹೊಸ ಕನ್ನಡ
UpdateAt: 04:53 PM Feb 19, 2024 IST
ನಿಮ್ಮಲ್ಲಿ 2 ಇಪಿಎಫ್  ಯುಎಎನ್ ಖಾತೆ ಇದೆಯಾ  ಅದಷ್ಟು ಬೇಗ ವಿಲೀನಗೊಳಿಸಿ

epf :ಇಪಿಎಫ್ (epf)ಒ ನಿಯಮದ ಅಡಿಯಲ್ಲಿ ಒಬ್ಬ ಉದ್ಯೋಗಿ ಕೇವಲ ಒಂದೇ ಯುಎಎನ್ ಹೊಂದಿರಬೇಕು.ನೀವು ಎರಡು ಯುಎಎನ್ ಬಳಸುತ್ತಿದ್ದರೆ ಈ ವಿಧಾನ ಬಳಸಿ ವಿಲೀನಗೊಳಿಸಿ. 

Advertisement

Business Desk: ಪ್ರತಿ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ ಖಾತೆ ಹೊಂದಿರುತ್ತಾರೆ. ಹೊಸ ನಿಯಮದ ಪ್ರಕಾರ ವೇತನ ಪಡೆಯುವ ಉದ್ಯೋಗಿ ಒಂದು ಯುನಿವರ್ಸಲ್ ಖಾತೆ ಸಂಖ್ಯೆ ಹೊಂದಿರಬೇಕು. ಆದರೆ, ಉದ್ಯೋಗಿ ಬೇರೆ ಕಂಪನಿಗೆ ಹೋದಾಗ ಹೊಸ ಇಪಿಎಫ್ಒ ಖಾತೆಯನ್ನು ಹೊಸ ಕಂಪನಿ ತೆರೆಯುತ್ತದೆ. ನಿಮ್ಮ ಇಪಿಎಫ್ ಖಾತೆ ಯುಎಎನ್ ಜೊತೆಗೆ ಲಿಂಕ್ ಆಗಿರುತ್ತದೆ. ಆದರೆ, ಇಪಿಎಫ್ ಒ ನಿಯಮದ ಪ್ರಕಾರ ಒಬ್ಬ ಉದ್ಯೋಗಿ ಒಂದೇ ಸಮಯದಲ್ಲಿ ಎರಡು ಇಪಿಎಫ್ ಖಾತೆ ಇರುವಂತಿಲ್ಲ. ಒಂದು ವೇಳೆ ಒಬ್ಬ ಉದ್ಯೋಗಿ ಎರಡು ಯುಎಎನ್ ಹೊಂದಿದ್ದರೆ, ಈ ಕುರಿತು ತನ್ನ ಈಗಿನ ಉದ್ಯೋಗದಾತ ಸಂಸ್ಥೆಗೆ ಮಾಹಿತಿ ನೀಡಬೇಕು ಹಾಗೂ ಹಳೆಯ ಯುಎಎನ್ ಅನ್ನು ನಿಷ್ಕ್ರಿಯಗೊಳಿಸಬೇಕು.

Advertisement

ಹಳೆಯ ಹಾಗೂ ಹೊಸ ಯುಎಎನ್ ಸೇರಿಸೋದು ಹೇಗೆ?

ಈ ಕೆಳಗಿನ ಎರಡು ವಿಧಾನಗಳ ಮೂಲಕ ಎರಡು ಯುಎಎನ್ ಗಳನ್ನು ರದ್ದು ಮಾಡ್ಬುದು ಅಥವಾ ವಿಲೀನಗೊಳಿಸಬಹುದು.

ಮೊದಲನೇ ವಿಧಾನ:

ಎರಡು ಯುಎಎನ್ ಹೊಂದಿರುವ ಉದ್ಯೋಗಿಗಳು ಈ ಬಗ್ಗೆ ಹೊಸ ಉದ್ಯೋಗದಾತ ಕಂಪನಿಗೆ ಮಾಹಿತಿ ನೀಡಬೇಕು.

ಉದ್ಯೋಗಿ uanepf@epfindia.gov.in ಇಲ್ಲಿಗೆ ಇ-ಮೇಲ್ ಕಳುಹಿಸಿದ ಕೊಡಬಹುದು. ಇದರಲ್ಲಿ ಹೊಸ ಯುಎಎನ್ ನಮೂದಿಸಬೇಕು.

ಈ ಸಮಸ್ಯೆ ಬಗೆಹರಿಸಲು ಇಪಿಎಫ್ ಒ ಪರಿಶೀಲನೆ ನಡೆಸಲಾಗುತ್ತದೆ.

ಹಳೆಯ ಯುಎಎನ್ ಅನ್ನು ರದ್ದು ಮಾಡಲಾಗುತ್ತದೆ. ಉದ್ಯೋಗಿಯ ಈಗಿನ ಯುಎಎನ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ನಿಷ್ಕ್ರಿಯವಾಗಿರುವ ಯುಎಎನ್ ಗೆ ಲಿಂಕ್ ಆಗಿರುವ ಇಪಿಎಫ್ ಖಾತೆಯನ್ನು ಹೊಸ ಸಕ್ರಿಯ ಖಾತೆಗೆ ವರ್ಗಾಯಿಸಲು ಕ್ಲೇಮ್ ಸಲ್ಲಿಕೆ ಮಾಡಬೇಕು.

ಈ ಮೇಲಿನ ಪ್ರಕ್ರಿಯೆ ತುಸು ಕಷ್ಟಕರವಾಗಿದೆ.

ಇದರ ಮೂಲಕ ಸದಸ್ಯರು ತಮ್ಮ ಎರಡು ಯುಎಎನ್ ಗಳನ್ನು ಸುಲಭವಾಗಿ ವಿಲೀನಗೊಳಿಸಬಹುದಾಗಿದೆ . ಇಪಿಎಫ್ ಅನ್ನು ಕೂಡ ಯಾವುದೇ ಸಮಸ್ಯೆಯಿಲ್ಲದೆ ವರ್ಗಾವಣೆ ಮಾಡಬಹುದಾಗಿದೆ.

ಎರಡನೇ ಹಂತ

ಇಪಿಎಫ್ಒ ಸದಸ್ಯರು ಇಪಿಎಫ್ ಮೊತ್ತವನ್ನು ಹಳೆಯ ಯುಎಎನ್ ನಿಂದ ಹೊಸ ರೀತಿಯಲ್ಲಿ ವರ್ಗ ಮಾಡಲು ಮನವಿ ಸಲ್ಲಿಸಬೇಕು

ಒಮ್ಮೆ ಒಬ್ಬ ಉದ್ಯೋಗಿ ಇಪಿಎಫ್ ವರ್ಗಾವಣೆಗೆ ಮನವಿ ಮಾಡಿದ ನಂತರ ಕಂಪ್ಯೂಟರ್ ಸ್ವಯಂ ಆಗಿ ಡೂಪ್ಲಿಕೇಟ್ ಯುಎಎನ್ ಅನ್ನು ಪತ್ತೆ ಹಚ್ಚುತ್ತದೆ.

ಇನ್ನು ಒಮ್ಮೆ ಗುರುತಿಸಿದ ಬಳಿಕ ಹಳೆಯ ಯುಎಎನ್ ರದ್ದು ಮಾಡುತ್ತದೆ. ಉದ್ಯೋಗಿಯ ಹಳೆಯ ಸದಸ್ಯತ್ವ ಐಡಿ ಹೊಸ ಯುಎಎನ್ ಗೆ ಲಿಂಕ್ ಮಾಡುತ್ತದೆ.

ಉದ್ಯೋಗಿಗಳು ಹಳೆಯ ಯುಎಎನ್ ರದ್ದುಗೊಂಡಿರುವ ಸ್ಟೇಟಸ್ ಅನ್ನು ಎಸ್ ಎಂಎಸ್ ಮೂಲಕ ಪಡೆಯಬಹುದು.

ಒಂದು ವೇಳೆ ಸದಸ್ಯರು ತಮ್ಮ ಹೊಸ ಯುಎಎನ್ ಸಕ್ರಿಯ ಮಾಡದೆ ಇದ್ದರೆ, ಹೊಸ ಯುಎಎನ್ ಸಕ್ರಿಯಗೊಳಿಸುವಂತೆ ಮನವಿಯನ್ನು ಸ್ವೀಕರಿಸುತ್ತಾರೆ.

ಬಡ್ಡಿದರ ಹೆಚ್ಚಳ

2023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಗೆ ಮಾಡಲಾಗಿದೆ. ಈ ಬಡ್ಡಿ ದರವು 3 ವರ್ಷದಲ್ಲಿ ಹೆಚ್ಚಾಗಿದೆ. 2023-24ರ ಬಡ್ಡಿ ದರ ಒಟ್ಟು 6 ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಆಗಲಿದೆ.

ಇದನ್ನೂ ಓದಿ : ನಟ ವಿಜಯ್ ದೇವರಕೊಂಡಗೆ ವಿಚಿತ್ರ ಬೇಡಿಕೆ ಇಟ್ಟು ಲೆಟರ್ ಬರೆದ ಹುಡುಗಿಯರು, ನಟ ಕೊಟ್ಟ ರಿಪ್ಲೇ ಹೀಗಿತ್ತು !!

Advertisement
Advertisement