RBI: ಸಿಟಿ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದವರಿಗೆ ಬಿಗ್ ಶಾಕ್ - ಭಾರೀ ಮೊತ್ತದ ದಂಡ ವಿಧಿಸಿದ RBI
RBI: ಭಾರತೀಯ ರಿಸರ್ವ್ ಬ್ಯಾಂಕ್ (RBI)ತನ್ನ ನಿಯಮಗಳನ್ನು ಉಲ್ಲಂಘಿಸಿದ ಮೂರು ಬ್ಯಾಂಕ್ಗಳಿಗೆ 10 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಭಾರೀ ದಂಡ ವಿಧಿಸಿದೆ. ಇದರ ಜೊತೆಗೆ, ಆರ್ಬಿಐ 5 ಸಹಕಾರಿ ಬ್ಯಾಂಕ್ಗಳ ವಿರುದ್ಧ ಕೂಡ ಕ್ರಮ ಕೈಗೊಂಡಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಹಿನ್ನೆಲೆ ಖಾಸಗಿ ವಲಯದ ಸಿಟಿ ಬ್ಯಾಂಕ್ಗೆ ಆರ್ಬಿಐ ಅತಿ ಹೆಚ್ಚು ದಂಡ ವಿಧಿಸಿದೆ. ಇದರ ಜೊತೆಗೆ, ಅಪಾಯ ನಿರ್ವಹಣೆ ಮತ್ತು ಹಣಕಾಸು ಸೇವೆಗಳ ಹೊರಗುತ್ತಿಗೆ ವಿಷಯದಲ್ಲಿ ಆರ್ಬಿಐ ಮಾರ್ಗಸೂಚಿಗಳನ್ನು ಹೆಚ್ಚಿನ ಬ್ಯಾಂಕ್ ಅನುಸರಿಸುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. RBI ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೆ ಇರುವ ಹಿನ್ನೆಲೆ ಮೂರು ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಜಾಗತಿಕ ದೈತ್ಯ ಬ್ಯಾಂಕ್ ಸಿಟಿ ಬ್ಯಾಂಕ್ಗೆ ಆರ್ಬಿಐ ಗರಿಷ್ಠ 5 ಕೋಟಿ ರೂ. ದಂಡ ವಿಧಿಸಲಾಗಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್ಗಳಾದ ಬ್ಯಾಂಕ್ ಆಫ್ ಬರೋಡಾಕ್ಕೆ 4.34 ಕೋಟಿ ರೂ. ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಸೆಂಟ್ರಲ್ ರೆಪೊಸಿಟರಿ ಆಫ್ ಲಾರ್ಜ್ ಕಾಮನ್ ಎಕ್ಸ್ಪೋಸರ್ಗಳ ಸ್ಥಾಪನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದೆ. ಚೆನ್ನೈ ಮೂಲದ ಸಾರ್ವಜನಿಕ ವಲಯದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಾಲ ಮತ್ತು ಮುಂಗಡ ವಿಚಾರದಲ್ಲಿ ಕೇಂದ್ರೀಯ ಬ್ಯಾಂಕ್ನ ನಿಯಮಗಳನ್ನು ಅನುಸರಿಸದೆ ಇರುವ ಹಿನ್ನೆಲೆ ದಂಡ ವಿಧಿಸಲಾಗಿದೆ. ಈ ಬ್ಯಾಂಕ್ಗಳಿಗೆ ಆರ್ಬಿಐ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿದೆ.ಇದರಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ಸ್ಪಷ್ಟನೆ ನೀಡುವಂತೆ ಆರ್ ಬಿಐ ಈ ಮೂರು ಬ್ಯಾಂಕಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: Madhu Bangarappa: ಉಪನ್ಯಾಸಕರಾಗೋ ಕನಸು ಕಂಡವರಿಗೆ ಬೊಂಬಾಟ್ ನ್ಯೂಸ್- ಶಿಕ್ಷಣ ಸಚಿವರಿಂದ ಹೊಸ ಘೋಷಣೆ!!