For the best experience, open
https://m.hosakannada.com
on your mobile browser.
Advertisement

Bank loan: ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ಮಹತ್ವದ ಮಾಹಿತಿ!!

03:30 PM Mar 10, 2024 IST | ಹೊಸ ಕನ್ನಡ
UpdateAt: 03:30 PM Mar 10, 2024 IST
bank loan  ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ಮಹತ್ವದ ಮಾಹಿತಿ

Bank loan: ಜನರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಸಲುವಾಗಿ ಬ್ಯಾಂಕ್ ಗಳಲ್ಲಿ ಸಣ್ಣ ಪುಟ್ಟ ಸಾಲ(Bank loan) ಮಾಡಿರುತ್ತಾರೆ. ಅನಿವಾರ್ಯ ಕಾರಣಗಳಿಂದ ಇದನ್ನು ತೀರಿಸಲು ಆಗದೆ ಬಡ್ಡಿ ಪಾವತಿಯೊಂದಿಗೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಆದರೀಗ ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ಬಿಗ್ ಶಾಕ್ ಎದುರಾಗಿದೆ.

Advertisement

ಹೌದು, ಬ್ಯಾಂಕಿಂಗ್ ವಿಚಾರವಾಗಿ ಆಗಾಗ ಹೊಸ ಬದಲಾವಣೆಯನ್ನು ತರುವ ಹಣಕಾಸು ಇಲಾಖೆಯು(Economic department)ಇದೀಗ ಬ್ಯಾಂಕಿಂಗ್ ವ್ಯವಹಾರವನ್ನು ಸರಳೀಕರಣಗೊಳಿಸಲು ಮುಂದಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಸರಳವಾಗಿದ್ದರೆ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಸಾಧ್ಯ ಎಂದು ಸಚಿವರು ಹೇಳಿದ್ದು ಈ ಬಗ್ಗೆ ಬ್ಯಾಂಕ್ ಗಳಿಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕ್ ಗಳ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ!

Advertisement

ಯು ಸಿ ಓ ಬ್ಯಾಂಕ್ (UCO Bank) ಬಡ್ಡಿ ದರ ಪರಿಷ್ಕರಿಸಿ ಹೊಸ ಬಡ್ಡಿದರ ಘೋಷಿಸಿದೆ. ಅದರ ಪ್ರಕಾರ ಸರ್ಕಾರಿ ಬ್ಯಾಂಕ್ ಗಳಲ್ಲಿ ಮಾರ್ಚ್ 10, 2024ರಿಂದ ಹೊಸ ಬಡ್ಡಿ ದರಗಳು ಅನ್ವಯವಾಗಲಿವೆ. ಈ ಬಡ್ಡಿ ದರಗಳು ಮನೆ ವಾಹನ ಅಥವಾ ವೈಯಕ್ತಿಕ ಸಾಲ ತೆಗೆದುಕೊಂಡವರಿಗೆ ಹೊರೆ ಆಗುವ ಸಾಧ್ಯತೆ ಇದೆ. ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಶೇಕಡ 0.05% ನಿಂದ ಶೇಕಡ 0.10% ವರೆಗೆ ಬ್ಯಾಂಕಿಂಗ್ ಬಡ್ಡಿ ದರ ಹೆಚ್ಚಿಸಲಾಗಿದೆ. ಬ್ಯಾಂಕಿನ MSLR ಬಡ್ಡಿದರ 8.10% ನಷ್ಟು ಆಗಿದೆ ಅಂದ್ರೆ ಪ್ರತಿ ತಿಂಗಳು 8.30% ನಷ್ಟು, ಮೂರು ತಿಂಗಳಿಗೆ ಶೇಕಡ 8.45% ನಷ್ಟು, ಆರು ತಿಂಗಳಿಗೆ ಶೇಕಡ 8.70% ಹಾಗೂ ಒಂದು ವರ್ಷಕ್ಕೆ ಶೇಕಡ 8.85% ನಷ್ಟು ಬಡ್ಡಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ :ಆಸ್ಪತ್ರೆ ಆವರಣದಲ್ಲಿ ನಗ್ನವಾಗಿಯೇ ಓಡಾಡಿದ ವೈದ್ಯ, ವೀಡಿಯೋ ವೈರಲ್‌

Advertisement
Advertisement