Salary Increase: ಬ್ಯಾಂಕ್ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ - ವೇತನದಲ್ಲಿ 17% ಏರಿಕೆ !! ಈ ತಿಂಗಳಿಂದಲೇ ಜಾರಿ
Salary Increase: ಸರಕಾರಿ ಸ್ವಾಮ್ಯದ ಬ್ಯಾಂಕ್ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಬ್ಯಾಂಕ್ ನೌಕರರ ವೇತನ ಶೇ. 17ರಷ್ಟು ಹೆಚ್ಚಾಗಲಿದೆ(Salary Increase). ಈಗಾಗಲೇ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಮತ್ತು ಬ್ಯಾಂಕ್ ನೌಕರರ ಒಕ್ಕೂಟಗಳ ನಡುವೆ ಒಪ್ಪಂದ ಅಂತಿಮಗೊಂಡಿದೆ. ಹೊಸ ಒಪ್ಪಂದದಿಂದ ಸುಮಾರು 9 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮತ್ತು 3.8 ಲಕ್ಷ ಬ್ಯಾಂಕ್ ಅಧಿಕಾರಿಗಳು ಪ್ರಯೋಜನ ಪಡೆಯಲಿದ್ದಾರೆ.
ಡಿಸೆಂಬರ್ 7ರಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ನೌಕರರ ಸಂಘಗಳ ನಡುವೆ ಮಾತುಕತೆ ನಡೆದಿದ್ದು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರಕ್ಕೂ ಸಹಿ ಹಾಕಲಾಗಿದೆ. ಈ ಹೊಸ ವೇತನ ಹೆಚ್ಚಳ ಪ್ರಕ್ರಿಯೆಯು 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ದೀಪಾವಳಿಗೂ ಮುನ್ನ ಕೇಂದ್ರ ಸರಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಿತ್ತು. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ವರ್ಷದಿಂದ ಅನ್ವಯವಾಗುವಂತೆ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದರು. ಈಗ ಅವರ ಒತ್ತಡಕ್ಕೆ ಒಪ್ಪಿದ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವೇತನ ಹೆಚ್ಚಳ ಒಪ್ಪಂದಕ್ಕೆ ಸಹಿ ಹಾಕಿದೆ.
ಒಪ್ಪಂದದ ಮುಖ್ಯ ಅಂಶಗಳು ಇಂತಿವೆ :
ಹೊಸ ವೇತನ ಹೆಚ್ಚಳವು 2022ರ ನವೆಂಬರ್ 1ರಿಂದಲೇ ಪೂರ್ವಾನ್ವಯ ಆಗಲಿದೆ. ಅಲ್ಲದೇ ಹೊಸ ವೇತನ ಶ್ರೇಣಿಗೆ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುತ್ತದೆ. ಆದರೆ ಪಿಂಚಣಿ ಹೆಚ್ಚಿಸುವ ಪ್ರಸ್ತಾವನೆ ಇನ್ನೂ ನಿರ್ಧಾರವಾಗಿಲ್ಲ. ಆದರೆ ಒಂದೇ ಬಾರಿ ಪಾವತಿ ಮಾಡಲು ಒಪ್ಪಿಗೆ ನೀಡಲಾಗಿದೆ.
ಇದನ್ನೂ ಓದಿ: ಅಜ್ಜಿ ಲೀಲಾವತಿ ಕುರಿತು ಮತ್ತೊಂದು ಸತ್ಯ ಬಿಚ್ಚಿಟ್ಟ ಮೊಮ್ಮಗ - ಇಷ್ಟು ವರ್ಷ ಲೀಲಾವತಿ ಇದನ್ನು ಗೌಪ್ಯವಾಗಿ ಇಟ್ಟದ್ದೇಕೆ?