Pension scheme Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ನವೆಂಬರ್ 30 ರೊಳಗೆ ಈ ಕೆಲಸ ಮಾಡಿಲ್ಲ ಅಂದ್ರೆ ನಿಂತೋಗುತ್ತೆ ಪೆನ್ಶನ್
Life Certificate : ಲೈಫ್ ಸರ್ಟಿಫಿಕೇಟ್(Life Certificate)ವಾಸ್ತವವಾಗಿ ಬಯೋಮೆಟ್ರಿಕ್ ಡಿಜಿಟಲ್ ಸೇವೆಯಾಗಿದ್ದು, ಇದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಿಂಚಣಿ ಪಡೆಯಲು ಸಹಕರಿಸುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರವನ್ನು (Life Certificate)ಸಲ್ಲಿಸಲು ಅಕ್ಟೋಬರ್ 1, 2023 ರಿಂದ ನವೆಂಬರ್ 30, 2023 ರವರೆಗೆ ಗಡುವು ನೀಡಲಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ (Pension)ಬಂದ್ ಆಗಲಿದೆ. ಈಗ ನೀವು ಲೈಫ್ ಸರ್ಟಿಫಿಕೇಟ್ ಅನ್ನು ಡಿಜಿಟಲ್ ಮೂಲಕ ಕೂಡ ಸಲ್ಲಿಸಬಹುದು. ಈಗ ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದಾಗಿದ್ದು, ಮನೆ ಬಾಗಿಲಿಗೆ ಬ್ಯಾಂಕಿಂಗ್ ಪರಿಹಾರಗಳ ಲಾಭವನ್ನು ಪಡೆಯಬಹುದಾಗಿದೆ
ಪ್ರತಿ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಎಲ್ಲಾ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರಗಳನ್ನು ಒದಗಿಸಬೇಕಾಗುತ್ತದೆ. ನವೆಂಬರ್ 30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ತಾತ್ಕಾಲಿಕವಾಗಿ ಮಾತ್ರವೇ ಸ್ಥಗಿತವಾಗಲಿದ್ದು, ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್ ನೀಡಿದರು ಕೂಡ ಪಿಂಚಣಿ ಮತ್ತೆ ಸಕ್ರಿಯವಾಗುತ್ತದೆ. ಅದರ ಮುಂದಿನ ತಿಂಗಳಲ್ಲಿ ಬಾಕಿ ಸೇರಿಸಿ ಪಿಂಚಣಿ ಬರಲಿದೆ.
ಜೀವನ ಪ್ರಮಾಣಪತ್ರವನ್ನು ಹೀಗೆ ಸಲ್ಲಿಸಬಹುದು:
* ಬ್ಯಾಂಕ್ / ಅಂಚೆ ಕಚೇರಿಗೆ ಹೋಗಿ ಮತ್ತು ಜೀವನ ಪ್ರಮಾಣಪತ್ರವನ್ನು ನೀವೇ ಸಲ್ಲಿಸಲು ಅವಕಾಶವಿದೆ.
* ಜೀವನ್ ಪ್ರಮಾನ್ ಪೋರ್ಟಲ್ ಮೂಲಕ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.
* ಉಮಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.
* ಪೋಸ್ಟ್ ಮ್ಯಾನ್ ಸೇವೆಯ ಮೂಲಕ ನೀವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.
* ಆಧಾರ್ ಆಧಾರಿತ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.
* ಮುಖದ ದೃಢೀಕರಣ ಮಾಡುವ ಮೂಲಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.
* ಮನೆ ಬಾಗಿಲಿಗೆ ಬ್ಯಾಂಕಿಂಗ್ ಮೂಲಕ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.
ಇದನ್ನೂ ಓದಿ: Bank Strike: ಡಿಸೆಂಬರ್ 4 ಕ್ಕಿಲ್ಲಿಲ್ಲ ಬ್ಯಾಂಕ್ ಮುಷ್ಕರ- ಹಾಗಿದ್ರೆ ಯಾವಾಗ ?!