DA Arrears Update: ಸರ್ಕಾರಿ ನೌಕರರಿಗೆ ಹೊಡೀತು 2 ಲಕ್ಷಕ್ಕೂ ಅಧಿಕ ಬಂಪರ್ ಲಾಟ್ರಿ- ಈ ದಿನ ಖಾತೆ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ !!
DA Arrears Update: ಚುನಾವಣೆಯ ಮೊದಲ ಹೆಜ್ಜೆಯಾಗಿ ಕೇಂದ್ರ ಸರ್ಕಾರಿ ನೌಕರರ ಮನ ಗೆಲ್ಲುವ ಕೆಲಸಕ್ಕೆ ಮೋದಿ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆ ಮೋದಿ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು, ನೌಕರರು ಮತ್ತು ಪಿಂಚಣಿದಾರ ಖಾತೆ ಸೇರದೇ ಬಾಕಿ ಉಳಿದಿದ್ದ 18ತಿಂಗಳ ಡಿಎ ಬಾಕಿ ಹಣ ಶೀಘ್ರದಲ್ಲೇ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (DA Arrears Update) 4 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ವೇತನದಲ್ಲಿ ಏರಿಕೆ ಕಂಡುಬಂದಿದೆ. ಆದರೆ ಡಿಎ ಬಾಕಿ ಮತ್ತು ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಈ ಬಗ್ಗೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿವೆ ಎಂದು ಮೂಲಗಳು ಹೇಳುತ್ತಿವೆ.
ಮುಖ್ಯವಾಗಿ ಕರೋನಾ ವೈರಸ್ ಸೋಂಕಿನ ಅವಧಿಯಲ್ಲಿ, ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ಡಿಎ ಹಣವನ್ನು ನೌಕರರಿಗೆ ನೀಡಿರಲಿಲ್ಲ. ಈ ಹಣಕ್ಕಾಗಿ ಸರ್ಕಾರಿ ನೌಕರರು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ನೌಕರರ ಬೇಡಿಕೆ ಈಡೇರಲಿದೆ ಎಂದೇ ಹೇಳಲಾಗುತ್ತಿದೆ.
ನೌಕರರು ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶದ ಹೆಚ್ಚಳದ ಪ್ರಯೋಜನವನ್ನು ಪಡೆಯುತ್ತಾರೆ. ಈ ಹೆಚ್ಚಳದ ನಂತರ ನಂತರ ಕನಿಷ್ಠ ಮೂಲ ವೇತನದಲ್ಲಿಯೂ ಹೆಚ್ಚಳವಾಗುವುದು. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅರಬ್ಬೀ ಸಮುದ್ರಕ್ಕಿಳಿದಿದ್ದ ಮೀನುಗಾರರ ಬೋಟ್ ನಾಪತ್ತೆ- 27 ಮೀನುಗಾರರು ಕಣ್ಮರೆ