For the best experience, open
https://m.hosakannada.com
on your mobile browser.
Advertisement

Brothel House: ಅಪ್ರಾಪ್ತ ಬಾಲಕಿಯರೊಂದಿಗೆ ಬಲವಂತದ ವೇಶ್ಯಾವಾಟಿಕೆ : ಡಿಎಸ್ಪಿ ಸೇರಿ 8 ಮಂದಿ ಸರ್ಕಾರಿ ನೌಕರರ ಬಂಧನ

Brothel House: ಈ ಪ್ರಕರಣದಲ್ಲಿ ಡಿಎಸ್ಪಿ(DSP) ಮತ್ತು ಸರ್ಕಾರಿ ಅಧಿಕಾರಿಗಳು(Government officer) ಸೇರಿದಂತೆ 21 ಜನರನ್ನು ಪೊಲೀಸರು ಬಂಧಿಸಿದ್ದಾರೆ
01:57 PM May 16, 2024 IST | ಸುದರ್ಶನ್
UpdateAt: 02:00 PM May 16, 2024 IST
brothel house  ಅಪ್ರಾಪ್ತ ಬಾಲಕಿಯರೊಂದಿಗೆ ಬಲವಂತದ ವೇಶ್ಯಾವಾಟಿಕೆ   ಡಿಎಸ್ಪಿ ಸೇರಿ 8 ಮಂದಿ ಸರ್ಕಾರಿ ನೌಕರರ ಬಂಧನ
Advertisement

Brothel House: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವೇಶ್ಯಾವಾಟಿಕೆ ಅಡ್ಡೆಗಳು(Brothel House) ಹೆಚ್ಚಾಗುತ್ತಿವೆ. ಇದೀಗ ಅರುಣಾಚಲ ಪ್ರದೇಶ ಪೊಲೀಸರು ಅಂತರರಾಜ್ಯ ವೇಶ್ಯಾವಾಟಿಕೆ (prostitution) ಗ್ಯಾಂಗ್ ಒಂದನ್ನು ಬೇಧಿಸಿದ್ದಾರೆ. ಆದರೆ, ಈ ದಂಧೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿ ಹಾಗೂ ಕೆಲವು ಸರ್ಕಾರಿ ನೌಕರರು ಶಾಮೀಲಾಗಿರುವುದು ಗಮನಾರ್ಹ. ಈ ಪ್ರಕರಣದಲ್ಲಿ ಡಿಎಸ್ಪಿ(DSP) ಮತ್ತು ಸರ್ಕಾರಿ ಅಧಿಕಾರಿಗಳು(Government officer) ಸೇರಿದಂತೆ 21 ಜನರನ್ನು ಪೊಲೀಸರು ಬಂಧಿಸಿದ್ದಾರೆ. 10-15 ವರ್ಷದೊಳಗಿನ ಐವರು ಅಪ್ರಾಪ್ತ ಬಾಲಕಿಯರನ್ನು ತಂಡದ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬಂಧಿತರಲ್ಲಿ ಡಿಎಸ್ಪಿ ಬುಲಂದ್ ಮಾರಿಕ್, ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ.ಸೆನ್ಸಾಯ್ ರೋನಿಯಾ ಮತ್ತಿತರರು ಸೇರಿದ್ದಾರೆ. ಹತ್ತು ದಿನಗಳ ಕಾಲ ಸರಣಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಇದನ್ನೂ ಓದಿ: T20 World Cup: ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು! : ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್? : ಇಲ್ಲಿ ನೋಡಿ

ವರದಿಯ ಪ್ರಕಾರ, ರಾಜಧಾನಿ ಇಟಾನಗರದಲ್ಲಿ ಬ್ಯೂಟಿ ಪಾರ್ಲರ್(Beauty parler)ನಡೆಸುತ್ತಿರುವ ಅನಿಯಾ ಮತ್ತು ಜಮ್ಮೋ ತಗಾಂಗ್ ಎಂಬ ಇಬ್ಬರು ಮಹಿಳೆಯರು ಅಸ್ಸಾಂನ ಧೇಮಾಜಿ ಮತ್ತು ಉದಲ್ಲುರಿಯಿಂದ ಅರುಣಾಚಲ ಪ್ರದೇಶಕ್ಕೆ ಅಪ್ರಾಪ್ತ ಬಾಲಕಿಯರನ್ನು ಕರೆತಂದಿದ್ದಾರೆ ಎಂದು ಎಸ್ಸಿ -ರೋಹಿತ್ ರಾಜೀರ್ ಸಿಂಗ್ ಹೇಳಿದ್ದಾರೆ. ಮೇ 4 ರಂದು ಚಿಂಪೂ ಅಪ್ರಾಪ್ತ ಬಾಲಕಿಯರೊಂದಿಗೆ ವೇಶ್ಯಾವಾಟಿಕೆ(Prostitution) ನಡೆಸುತ್ತಿದ್ದ ಎಂಬ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಹುಡುಕಾಟಗಳನ್ನು ನಡೆಸಿ, ಹಲವಾರು ಜನರನ್ನು ಬಂಧಿಸಲಾಯಿತು ಮತ್ತು ಮೂವರು ಅಪ್ರಾಪ್ತರನ್ನು ಅವರ ಸೆರೆಯಿಂದ ರಕ್ಷಿಸಲಾಯಿತು. ದೇಮಾಜಿಯಿಂದ ಕೆಲಸಕ್ಕೆಂದು ಕರೆತಂದು ನಮ್ಮನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಹೂಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

Advertisement

ಇದನ್ನೂ ಓದಿ: Virat Kohli : ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ !!

ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮಕ್ಕಳ ಕಲ್ಯಾಣ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಇನ್ನೂ ಇಬ್ಬರು ಅಪ್ರಾಪ್ತರು ಬ್ಯೂಟಿ ಪಾರ್ಲರ್(Beauty parler)ನಡೆಸುತ್ತಿರುವ ಮಹಿಳೆಯರ ಅಧೀನದಲ್ಲಿದ್ದರು ಎಂದು ತಿಳಿದುಬಂದಿದೆ. ಮತ್ತೊಬ್ಬ ಬಾಲಕಿಯನ್ನು ಬೇರೆ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಎಲ್ಲರನ್ನೂ ರಕ್ಷಿಸಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.

ವೇಶ್ಯಾಗೃಹ(Brothel House) ನಡೆಸುತ್ತಿದ್ದ ಒಟ್ಟು 10 ಮಂದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಐವರು ಸರ್ಕಾರಿ "ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಸಂತ್ರಸ್ತರನ್ನು 2020 ರಿಂದ 2023 -ರ ನಡುವೆ ಉದ್ಯೋಗದ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಅವರಲ್ಲಿ, 2020 ರಲ್ಲಿ 8 ವರ್ಷದವಳಿದ್ದಾಗ ಹುಡುಗಿಯನ್ನು ಕರೆತರಲಾಯಿತು. ಬಾಲಕಿ ಅವರಿಂದ ತಪ್ಪಿಸಿಕೊಂಡಿದ್ದಳು 2022ರಲ್ಲಿ ಮತ್ತೆ ಸಿಕ್ಕಿಬಿದ್ದಿದ್ದಾಳೆ ಎಂದು ಎಸ್ಪಿ ಹೇಳಿದ್ದಾರೆ. ಸಂತ್ರಸ್ತರ ವೈದ್ಯಕೀಯ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

Advertisement
Advertisement
Advertisement