For the best experience, open
https://m.hosakannada.com
on your mobile browser.
Advertisement

Bramhanda Guruji: ಮೋದಿ ಎರಡು ವರ್ಷ ಮಾತ್ರ ದೇಶದ ಪ್ರಧಾನಿ, ಗೆದ್ದರೂ ಹುದ್ದೆಗೆ ರಾಜೀನಾಮೆ - ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ !!

Bramhanada Guruji: ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament Election ) ಪ್ರಧಾನಿ ನರೇಂದ್ರ ಮೋದಿಯವರು(PM Modi) ಕೇವಲ 2 ವರ್ಷಗಳ ಕಾಲ ಮಾತ್ರ ಪ್ರಧಾನಿ ಆಗಿರುತ್ತಾರೆ
11:10 PM Apr 10, 2024 IST | ಸುದರ್ಶನ್
UpdateAt: 11:11 PM Apr 10, 2024 IST
bramhanda guruji  ಮೋದಿ ಎರಡು ವರ್ಷ ಮಾತ್ರ ದೇಶದ ಪ್ರಧಾನಿ  ಗೆದ್ದರೂ ಹುದ್ದೆಗೆ ರಾಜೀನಾಮೆ   ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ
Advertisement

Bramhanada Guruji: ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament Election ) ಪ್ರಧಾನಿ ನರೇಂದ್ರ ಮೋದಿಯವರು(PM Modi) ಕೇವಲ 2 ವರ್ಷಗಳ ಕಾಲ ಮಾತ್ರ ಪ್ರಧಾನಿ ಆಗಿರುತ್ತಾರೆ. ಅವರ ಜಾತಕದಲ್ಲಿ 12 ವರ್ಷ ಪ್ರಧಾನಿ(Prime Minister) ಆಗುವ ಯೋಗ ಇರುವುದರಿಂದ ಇದು ಸಂಭವಿಸಲಿದೆ ಎಂದು ಬ್ರಹಾಂಡ ಗುರೂಜಿ(Bramhanda Guruji) ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

Advertisement

ನರೇಂದ್ರ ಮೋದಿಯವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಮಂತ್ರಿಯಾಗಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇದೀಗ 2024ರ ತನಕ ಅಂದರೆ ಸುದೀರ್ಘ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದ ಸ್ಥಾನನಮಾನವನ್ನು ವಿಶ್ವಮಟ್ಟದಲ್ಲಿ ಎತ್ತರಕ್ಕೆ ಏರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ. ಒಟ್ಟಿನಲ್ಲಿ ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಯಾವುದೇ ವ್ಯಕ್ತಿ ಇಲ್ಲ ಎಂದೆನಿಸುತ್ತದೆ. ಈ ಸಲದ ಲೋಕಸಭಾ ಚುನಾವಣೆಯಲ್ಲೂ NDA ಮೈತ್ರಿ ಕೂಟ ಭರ್ಜರಿ ಗೆಲವು ಸಾಧಿಸಿ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ ಹ್ಯಾಟ್ರಿಕ್ ಭಾರಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಅಂತೆಯೇ ಬಿಜೆಪಿ ಕೂಡ ಮೋದಿಯೇ ಮುಂದೆ 10 ವರ್ಷಗಳ ಕಾಲ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದೆ. ಈ ನಡುವೆ ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದು ಮೋದಿ ಮುಂದೆ ಬರೀ 2 ವರ್ಷ ಮಾತ್ರ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

Advertisement

ಹೌದು, ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಗುರೂಜಿ ಮೋದಿ ಅವರ ಜಾತಕದಲ್ಲಿ 12 ವರ್ಷಗಳ ಕಾಲ ಪ್ರಧಾನಿ ಆಗುವ ಯೋಗ ಇದೆ. ಈಗಾಗಲೇ 10 ವರ್ಷ ಮುಗಿದಿದೆ. ಇನ್ನು ಎರಡು ವರ್ಷ ಮಾತ್ರ ಬಾಕಿ. ಹೀಗಾಗಿ ಮುಂದೆಯೂ ಅವರು ಪ್ರಧಾನಿ ಆಗಿ ಆಯ್ಕೆಯಾಗುತ್ತಾರೆ. ಆದರೆ ಎರಡು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

ಇದು ಸಂಭವಿಸುವುದು ಹೇಗೆ ಎಂದು ತಿಳಿಸಿದ ಅವರು ಅಷ್ಟು ಹೊತ್ತಿಗಾಗಲೇ ಮೋದಿ ಅವರಿಗೆ ವೈರಾಗ್ಯ ಬರಬಹುದು. ಅಧಿಕಾರ, ಆಡಳಿತ ಸಾಕೆನಿಸಬಹುದು. ಸಂತೋಷದಿಂದಲೇ ಅವರು ಪದತ್ಯಾಗ ಮಾಡಬಹುದು. ಬೇರೆ ಯಾರೋ ಉತ್ತರಾಧಿಕಾರಿಯನ್ನು ಕೂರಿಸಿ ಹಿಂದಿನಿಂದ ಆಡಳಿತ ಮಾಡಬಹುದು. ಇಲ್ಲವಾದರೆ ಸ್ವಾಭಿಮಾನಕ್ಕೆ ಧಕ್ಕೆ ಆಗಿಯೂ ಅಧಿಕಾರ ತ್ಯಜಿಸಬಹುದು. ಒಟ್ಟಿನಲ್ಲಿ ಏನಾದರೂ ಒಂದು ಕಾರಣದಿಂದ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಿ ಕುತೂಹಲ ಕೆರಳಿಸಿದ್ದಾರೆ.

ಇನ್ನು ಮೋದಿ ಒಳ್ಳೆಯ ಆಡಳಿತಗಾರ. ಆದರೆ ಅದರ ಹಿಂದಿರುವ ಶಕ್ತಿ ಎಂದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajith Dhoval) ಹಾಗೂ ವಿದೇಶಾಂಗ ಸಚಿವ ಜೈ ಶಂಕರ್(Jai Shankar) ಅವರು. ಅವರ ತಲೆ ಎಲ್ಲಾ ಅಧಿಕಾರಿಗಳಿಗಿಂತ ದೊಡ್ಡದು. ಮೋದಿಗೆ ಇವರಿಬ್ಬರು ಶಕ್ತಿ ಇದ್ದಂತೆ. ಮೋದಿ, ಯೋಗಿ ಆದಿತ್ಯನಾಥ್ , ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಇವರು ಉತ್ತಮ ನಾಯಕರು, ಭ್ರಷ್ಟಾಚಾರ ಮಾಡುವವರಲ್ಲ. ಮೋದಿ ಬಳಿಕ ಯೋಗಿ ಪ್ರಧಾನಿ ಆಗಬಹುದು. ಅಮಿತ್ ಶಾ ಏನೂ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

Advertisement
Advertisement
Advertisement