ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Brahma Muhurta: ದೇವರ ಆಶೀರ್ವಾದ ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಕೆಲಸ ಮಾಡಿ ಸಾಕು!

Brahma Muhurta: ಬ್ರಹ್ಮ ಮುಹೂರ್ತವು ಅತ್ಯಂತ ಮಂಗಳಕರ ಸಮಯವಾಗಿದೆ. ಹೌದು, ವೇದಗಳು, ಪುರಾಣಗಳು ಮತ್ತು ಗ್ರಂಥಗಳು ಬ್ರಹ್ಮ ಮುಹೂರ್ತವನ್ನು ಅತ್ಯಂತ ಮಂಗಳಕರವೆಂದು ಉಲ್ಲೇಖಿಸುತ್ತದೆ.
02:14 PM Jun 13, 2024 IST | ಕಾವ್ಯ ವಾಣಿ
UpdateAt: 02:14 PM Jun 13, 2024 IST
Advertisement

Brahma Muhurta: ಬ್ರಹ್ಮ ಮುಹೂರ್ತವು ಅತ್ಯಂತ ಮಂಗಳಕರ ಸಮಯವಾಗಿದೆ. ಹೌದು, ವೇದಗಳು, ಪುರಾಣಗಳು ಮತ್ತು ಗ್ರಂಥಗಳು ಬ್ರಹ್ಮ ಮುಹೂರ್ತವನ್ನು ಅತ್ಯಂತ ಮಂಗಳಕರವೆಂದು ಉಲ್ಲೇಖಿಸುತ್ತದೆ. ಬ್ರಹ್ಮ ಮೂಹೂರ್ತದಲ್ಲಿ (Brahma Muhurta)  ಏಳುವುದರಿಂದ ದೇವರ ಅನುಗ್ರಹವೂ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.

Advertisement

ದರ್ಶನ್ ಗೆ ಪತ್ನಿ ವಿಜಯಲಕ್ಷ್ಮೀ ಡಿವೋರ್ಸ್ ?!

ಬ್ರಹ್ಮ ಮುಹೂರ್ತವನ್ನು ರಾತ್ರಿಯ ಕೊನೆಯ ಭಾಗ ಎಂದು ಕರೆಯಲಾಗುತ್ತದೆ. ಅಂದರೆ ಈ ಸಮಯವು ರಾತ್ರಿ ಮುಗಿಯುವ ಮತ್ತು ಹಗಲು ಪ್ರಾರಂಭವಾಗುವ ಸಮಯ. ಬ್ರಹ್ಮ ಎಂದರೆ ಪರಮಾತ್ಮ ಮತ್ತು ಮುಹೂರ್ತ ಎಂದರೆ ಸಮಯ ಅಂದರೆ ದೇವರ ಸಮಯ ಎಂದು ಹೇಳಬಹುದು.

Advertisement

ಬ್ರಹ್ಮ ಮುಹೂರ್ತವು ಮುಂಜಾನೆ 4:00 ರಿಂದ ಆರಂಭವಾಗಿ 5:30 ರವರೆಗೆ ಇರುತ್ತದೆ. ಈ ಅವಧಿಯ ನಡುವಿನ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಕರೆಯಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ನಿಮಗೆ ಪ್ರಿಯವಾದ ದೇವರನ್ನು ಸ್ಮರಿಸಿ. ಇದರಿಂದ ಆರೋಗ್ಯದ ಜೊತೆಗೆ ನೆಮ್ಮದಿ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಮುಖ್ಯವಾಗಿ ಬ್ರಹ್ಮ ಮುಹೂರ್ತದಲ್ಲಿ ಎದ್ದು ಈ ಕೆಳಗಿನ ಮಂತ್ರವನ್ನು ಪಠಿಸುವುದರಿಂದ ಸಾಕ್ಷಾತ್‌ ಲಕ್ಷ್ಮಿ ದೇವಿಯ ಆಶೀರ್ವಾದ ನೀವು ಪಡೆಯಬಹುದು.

ಬ್ರಹ್ಮ ಮುಹೂರ್ತದಲ್ಲಿ ಈ ಮಂತ್ರ ಪಠಿಸಿ:

''ಕರಾಗ್ರೇ ವಸತಿ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ|

ಕರಮೂಲೇ ತು ಬ್ರಹ್ಮ, ಪ್ರಭಾತೇ ಕರ ದರ್ಶನಂ||''

ಬೆಳಿಗ್ಗೆ ಎದ್ದ ನಂತರ, ಮೊದಲು ನಿಮ್ಮ ಅಂಗೈಗಳನ್ನು ಜೋಡಿಸಿ ಉಜ್ಜಿ ಅವುಗಳನ್ನು ನೋಡುತ್ತಾ ಈ ಮಂತ್ರವನ್ನು ಜಪಿಸಿ. ಜೊತೆಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿದ ನಂತರ ಮನೆಯ ಮೂಲೆ ಮೂಲೆಯಲ್ಲೂ ಗಂಗಾಜಲವನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ನಕಾರಾತ್ಮಕತೆಯೂ ದೂರವಾಗುತ್ತದೆ.

Duniya Vijay: ದುನಿಯಾ ವಿಜಯ್‌-ನಾಗರತ್ನ ಡಿವೋರ್ಸ್‌ ಪ್ರಕರಣ ; ಇಂದು ತೀರ್ಪು ಸಾಧ್ಯತೆ

Advertisement
Advertisement