ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

BMTC ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್; ವಿಶೇಷ ರಜೆ ಭತ್ಯೆ ಘೋಷಣೆ!!

12:47 PM Jan 11, 2024 IST | ಅಶ್ವಿನಿ ಹೆಬ್ಬಾರ್
UpdateAt: 12:47 PM Jan 11, 2024 IST
Advertisement

BMTC: ಬಿಎಂಟಿಸಿ ಬಸ್ (BMTC Bus)ಚಾಲಕರು (BMTC Drivers)ವಾರದ ರಜೆಯನ್ನು ಹೊರತುಪಡಿಸಿ ಬೇರೆ ಯಾವುದೇ ರಜೆ (Holiday)ಪಡೆಯದೇ ಕೆಲಸ ಮಾಡಿದ್ದಲ್ಲಿ, ಆ ರಜಾದಿನಗಳಲ್ಲಿ ಕೆಲಸ ಮಾಡಿದರೆ ವಿಶೇಷ ಭತ್ಯೆ (Special Allowance)ಎಂದು 500 ರೂಪಾಯಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತೀರ್ಮಾನ ಕೈಗೊಂಡಿದೆ.

Advertisement

ಬಿಎಂಟಿಸಿಯ ಅಂಕಿ ಅಂಶ ಅನುಸಾರ, 2023ರ ಏಪ್ರಿಲ್‌ನಿಂದ ಅಕ್ಟೋಬರ್ ತನಕ ಚಾಲನಾ ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ 44.27 ಲಕ್ಷ ಷೆಡ್ಯೂಲ್ ರದ್ದಾಗಿವೆ. ಬಿಎಂಟಿಸಿ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಚಾಲಕರನ್ನು ಉತ್ತೇಜಿಸುವ ಸಲುವಾಗಿ 500 ರೂಪಾಯಿ ವಿಶೇಷ ಭತ್ಯೆಯನ್ನು ನೀಡುವ ಉಪಕ್ರಮವನ್ನು ಪ್ರಕಟಿಸಿದೆ ಎಂದು ಬಿಎಂಟಿಸಿ ಮೂಲಗಳು ಮಾಹಿತಿ ನೀಡಿವೆ.

ಬಿಎಂಟಿಸಿಯ ಒಟ್ಟು ಚಾಲನಾ ಸಿಬ್ಬಂದಿಗಳಲ್ಲಿ ಶೇಕಡ 6.8 ಸಿಬ್ಬಂದಿ ದೈನಂದಿನ ಇಲ್ಲವೇ ದೀರ್ಘಾವಧಿ ರಜೆಯಲ್ಲಿರುತ್ತಾರೆ. ಚಾಲನಾ ಸಿಬ್ಬಂದಿ ಈ ರೀತಿ ಗೈರಾಗುವ ಹಿನ್ನೆಲೆ .ಬಸ್ ಸೇವೆ ಒದಗಿಸಲು ಸಮಸ್ಯೆ ಎದುರಾಗಿದ ಹಿನ್ನೆಲೆ ಬಿಎಂಟಿಸಿ ಈ ಉಪಕ್ರಮವನ್ನು ಘೋ‍ಷಿಸಿದೆ. ಈ ಹೊಸ ಉಪಕ್ರಮದ ಪ್ರಯೋಜನ ಪಡೆಯಲು ಬಿಎಂಟಿಸಿ ಚಾಲಕರು, ತಿಂಗಳಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ 26 ದಿನ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಶಿಸ್ತು ಕ್ರಮಕ್ಕೆ ಒಳಗಾಗಿರಬಾರದು. ಇದರ ಜೊತೆಗೆ ಚಾಲನಾ ಸಿಬ್ಬಂದಿಗೆ 500 ರೂಪಾಯಿ ವಿಶೇಷ ಭತ್ಯೆ ಸಿಗಲಿದೆ.ಈ ಉಪಕ್ರಮದ ಮೂಲಕ ಬೆಂಗಳೂರಿನಲ್ಲಿ ಬಸ್‌ಗಳ ಸೇವೆಯನ್ನು ಪ್ರಯಾಣಿಕರಿಗೆ ನಿಯತವಾಗಿ ಒದಗಿಸಲು ಬಿಎಂಟಿಸಿ ಮುಂದಾಗಿದೆ.

Advertisement

Related News

Advertisement
Advertisement