For the best experience, open
https://m.hosakannada.com
on your mobile browser.
Advertisement

BMTC Bus: ಬಿಎಂಟಿಸಿ ಬಸ್‌ಗೆ ಹತ್ತಿಕೊಂಡ ಬೆಂಕಿ, ಕ್ಷಣಮಾತ್ರದಲ್ಲಿ ಬಸ್‌ ಸುಟ್ಟು ಕರಕಲು! ಘಟನೆಗೆ ಕಾರಣವೇನು? ಇಲ್ಲಿದೆ ವಿವರ

BMTC Bus: ಬೆಂಗಳೂರು ಮಹಾನಗರ ಸಾರಿಗೆ (BMTC bus )  ಬಸ್ ರಸ್ತೆಗೆ ಇಳಿದಿದ್ದು, ನಗರದ ಎಂಜಿ ರಸ್ತೆ ತಲುಪುವಷ್ಟರಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
11:01 AM Jul 09, 2024 IST | ಕಾವ್ಯ ವಾಣಿ
UpdateAt: 11:01 AM Jul 09, 2024 IST
bmtc bus  ಬಿಎಂಟಿಸಿ ಬಸ್‌ಗೆ ಹತ್ತಿಕೊಂಡ ಬೆಂಕಿ  ಕ್ಷಣಮಾತ್ರದಲ್ಲಿ ಬಸ್‌ ಸುಟ್ಟು ಕರಕಲು  ಘಟನೆಗೆ ಕಾರಣವೇನು  ಇಲ್ಲಿದೆ ವಿವರ
Advertisement

BMTC Bus: ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್​ನಲ್ಲಿ ಬಿಎಂಟಿಸಿ ಬಸ್​ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಬಸ್​ನಲ್ಲಿ 30 ಜನರು ಪ್ರಯಾಣಿಸುತ್ತಿದ್ದು, ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ಅನಾಹುತವಾಗಿಲ್ಲ.

Advertisement

Darshan: ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿ ಭಾರೀ ಇಳಿಕೆ – ಕಡಿಮೆ ಆದದ್ದೆಷ್ಟು ?

ಹೌದು, ಎಂದಿನಂತೆ ಬೆಂಗಳೂರು ಮಹಾನಗರ ಸಾರಿಗೆ (BMTC bus )  ಬಸ್ ರಸ್ತೆಗೆ ಇಳಿದಿದ್ದು, ನಗರದ ಎಂಜಿ ರಸ್ತೆ ತಲುಪುವಷ್ಟರಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬಸ್​ನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Advertisement

ಮಾಹಿತಿ ಪ್ರಕಾರ, ಬಿಎಂಟಿಸಿ ಬಸ್​ ರೋಸ್​ ಗಾರ್ಡನ್​ನಿಂದ ಶಿವಾಜಿನಗರಕ್ಕೆ (Shivajinagar) ಬರುತ್ತಿದ್ದಾಗ ಮಾರ್ಗ ಮಧ್ಯೆ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್​ನಲ್ಲಿ ಚಾಲಕ ಬಸ್ ಬಂದ್​ ಮಾಡಿದ್ದರು. ಮತ್ತೆ ಸ್ಟಾರ್ಟ್ ಆಗಿಲ್ಲ. ಆದರೂ 2-3 ಸಲ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ. ಆದರೆ, ಸ್ಟಾರ್ಟ್​ ಆಗಲಿಲ್ಲ. ಈ ವೇಳೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಬಸ್ ಸುಟ್ಟು ಭಸ್ಮವಾಗಿದೆ. ಸದ್ಯ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Railway: ರೈಲ್ವೇ ಪ್ರಯಾಣಿಕರ ಗಮನಕ್ಕೆ: ರಾಜ್ಯದ ಈ ಮಾರ್ಗಗಳಲ್ಲಿ ರೈಲುಗಳ ಸಮಯ ಬದಲಾವಣೆ ಪ್ರಕಟಣೆ!

Advertisement
Advertisement
Advertisement