For the best experience, open
https://m.hosakannada.com
on your mobile browser.
Advertisement

Blast in Bengaluru: ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಸಂಬಂಧವಿಲ್ಲ-ಸಿಎಂ ಸಿದ್ದರಾಮಯ್ಯ

11:37 AM Mar 02, 2024 IST | ಹೊಸ ಕನ್ನಡ
UpdateAt: 11:41 AM Mar 02, 2024 IST
blast in bengaluru  ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಸಂಬಂಧವಿಲ್ಲ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೂ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬ್ಲಾಸ್ಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗೂ ಈ ಸಂದರ್ಭದಲ್ಲಿ ಬಿಜೆಪಿಯವರ ಅವಧಿಯಲ್ಲಾದ ಬಾಂಬ್‌ ಬ್ಲಾಸ್ಟ್‌ಗಳು ಅಲ್ಪಸಂಖ್ಯಾತರ ಒಲೈಕೆಗೆ ನಡೆದಿದ್ದೇ ಎಂಬ ಪ್ರಶ್ನೆಯನ್ನು ಕೂಡಾ ಸಿಎಂ ಮಾಡಿದ್ದಾರೆ.

Advertisement

ಇದನ್ನೂ ಓದಿ: Soujanya Protest: ಬೀದಿ ಹೋರಾಟದಿಂದ ದೆಹಲಿಯವರೆಗೆ- ಪ್ರಸನ್ನ ರವಿ ಮಾತು

ಟೋಪಿ, ಮಾಸ್ಕ್‌ ಹಾಕಿಕೊಂಡು ಬಂದ ವ್ಯಕ್ತಿ ಬಸ್‌ನಲ್ಲಿ ಬಂದಿದ್ದು, ಟೈಮರ್‌ ಫಿಕ್ಸ್‌ ಮಾಡಿ ಬ್ಲಾಸ್ಟ್‌ ಮಾಡಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಬಾಂಬ್‌ ಬ್ಲಾಸ್ಟ್‌ಗೂ ಮಂಗಳೂರು ಬಾಂಬ್‌ ಬ್ಲಾಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ಬಾಂಬ್‌ ಬ್ಲಾಸ್ಟ್‌ ಸಂಬಂಧ ತನಿಖೆ ಇನ್ನೂ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಹೇಳಿದರು.

Advertisement

ಇಲ್ಲಿಯವರೆಗೆ ಒಟ್ಟು ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಶಂಕಿತ ವ್ಯಕ್ತಿ ಘಟನೆಯುದ್ದಕ್ಕೂ ಹ್ಯಾಂಡ್‌ ಗ್ಲೌಸ್‌ ಹಾಕಿಕೊಂಡಿದ್ದು, ಫಿಂಗರ್‌ ಪ್ರಿಂಟ್‌ ಎಲ್ಲಿಯೂ ಇರಬಾರದು ಎಂಬ ಕಾರಣ ಹಾಗೆ ಮಾಡಿರುವ ಶಂಕೆ ಇದೆ.

Advertisement
Advertisement