For the best experience, open
https://m.hosakannada.com
on your mobile browser.
Advertisement

Black Bear Meat: ಕರಡಿ ಮಾಂಸ ತಿಂದ ಕುಟುಂಬದ ಸದಸ್ಯರ ಮೆದುಳಿನಲ್ಲಿ ಹುಳ

Black Bear Meat: ಕರಡಿ ಮಾಂಸದ ಊಟವನ್ನು ಸಂಬಂಧಿಕರ ಸಂತೋಷ ಕೂಟದಲ್ಲಿ ಮಾಡಿದ್ದು, ಅದನ್ನು ತಿಂದ ಅಮೆರಿಕನ್‌ ಕುಟುಂಬವೊಂದು ಇದೀಗ ಮೆದುಳಿನ ಹುಳಗಳ ಸೋಂಕಿಗೆ ಒಳಗಾಗಿದೆ ಎಂದು ವರದಿಯೊಂದು ಪ್ರಕಟಿಸಿದೆ.
11:50 AM May 26, 2024 IST | ಸುದರ್ಶನ್
UpdateAt: 11:50 AM May 26, 2024 IST
black bear meat  ಕರಡಿ ಮಾಂಸ ತಿಂದ ಕುಟುಂಬದ ಸದಸ್ಯರ ಮೆದುಳಿನಲ್ಲಿ ಹುಳ
Advertisement

Black Bear Meat: ಕರಡಿ ಮಾಂಸದ ಊಟವನ್ನು ಸಂಬಂಧಿಕರ ಸಂತೋಷ ಕೂಟದಲ್ಲಿ ಮಾಡಿದ್ದು, ಅದನ್ನು ತಿಂದ ಅಮೆರಿಕನ್‌ ಕುಟುಂಬವೊಂದು ಇದೀಗ ಮೆದುಳಿನ ಹುಳಗಳ ಸೋಂಕಿಗೆ ಒಳಗಾಗಿದೆ ಎಂದು ವರದಿಯೊಂದು ಪ್ರಕಟಿಸಿದೆ.

Advertisement

ಜ್ವರ, ತೀವ್ರವಾದ ಸ್ನಾಯು ನೋವು, ಕಣ್ಣುಗಳ ಸುತ್ತ ಊತ, ಮತ್ತು ಇತರ ತೊಂದರೆದಾಯಕ ಆರೋಗ್ಯ ಸಮಸ್ಯೆಗಳಂತಹ ರೋಗಲಕ್ಷಣಗಳನ್ನು ಮಿನ್ನೇಸೋಟ ಆರೋಗ್ಯ ಇಲಖೆ ಪ್ರಕಟ ಮಾಡಿದೆ.

29 ವರ್ಷದ ವ್ಯಕ್ತಿಯೊಬ್ಬ ದಕ್ಷಿಣ ಡಕೋಟಾದಲ್ಲಿ ಕುಟುಂಬದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದು, ಅದರಲ್ಲಿ ಉತ್ತರ ಸಾಸ್ಕಾಚೆವಾನ್‌ ಪಡೆದ ಕಪ್ಪು ಕರಡಿ ಮಾಂಸದಿಂದ ತಯಾರಿಸಿದ ಕಬಾಬ್‌ಗಳನ್ನು ತಿಂದಿದ್ದರು. ಈ ಸಂತೋಷ ಕೂಟ 2022 ರಲ್ಲಿ ನಡೆದಿತ್ತು. ಅಲ್ಲಿ ಸರಿಯಾಗಿ ಬೇಯಿಸದ ಕರಡಿ ಮಾಂಸವನ್ನು ಕುಟುಂಬದ 9 ಮಂದಿ ಸದಸ್ಯರು ಸೇವಿಸಿದ್ದರು. ಇದನ್ನು ವೈದ್ಯರು ಅಪರೂಪದ ಟ್ರಿಕಿನೆಲೋಸಿಸ್‌ ಎಂದು ಕಂಡು ಹಿಡಿದಿದ್ದಾರೆ.

Advertisement

ಇದನ್ನೂ ಓದಿ: ಸರ್ಕಾರದ ಸೌಲಭ್ಯವನ್ನು ಉಪಯೋಗಿಸಿಕೊಂಡು ಈ ರೈತ ಮಾಡಿದ್ದೇನು ಗೊತ್ತಾ? ಅನೇಕರಿಗೆ ಇವರು ಸ್ಪೂರ್ತಿ!

ಇಂತಹ ರೋಗ ಕಾಡು ಪ್ರಾಣಿಗಳನ್ನು ತಿನ್ನುವುದರಿಂದ ಬರುತ್ತದೆ. ಪರೀಕ್ಷೆ ಮಾಡಿದ ಒಟ್ಟು 6 ಮಂದಿ ಸದಸ್ಯರು ಮೆದುಳು ಹುಳು ಬಾಧೆ ಅನುಭವಿಸುತ್ತಿರುವುದು ಕಂಡು ಬಂದಿದೆ.

ಈ ಪರಾವಲಂಬಿ ಜೀವಿ ದೇಹದ ಎಲ್ಲೆಡೆ ಓಡಾಡುತ್ತಾ, ಮೆದುಳು, ಹೃದಯಕ್ಕೆ ಕೂಡಾ ಸಾಗಬಲ್ಲದು. ಇದರ ಸೋಂಕಿಗೆ ಒಳಗಾದವರು ಜ್ವರ, ಸೀಜರ್ಸ್‌, ವಾಂತಿ, ಅತಿಸಾರ, ಹೊಟ್ಟೆನೋವು, ತೀವ್ರವಾದ ಸ್ನಾಯು ನೋವು ಮತ್ತು ನೋವು, ಕಣ್ಣುಗಳ ಸುತ್ತಲೂ ಊತ ಮುಂತಾದ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಇವರೆಲ್ಲರಿಗೂ ಅಲ್ಬೆಂಡಜೋಲ್ನೊಂದಿಗೆ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.

ಕರಡಿ ಮಾಂಸ ಬೇಯಿಸುವ ಮೊದಲು ಒಂದೂವರೆ ತಿಂಗಳ ಕಾಲ ಫ್ರೀಜರ್‌ನಲ್ಲಿ ಇಡಲಾಗಿತ್ತು. ಕರಡಿ ಮಾಂಸದಲ್ಲಿ ಪರಾವಲಂಬಿಗಳನ್ನು ಕೊಲ್ಲಲು 165 ಡಿಗ್ರಿಗಳಷ್ಟು ಆಂತರಿಕ ತಾಪಮಾನದಲ್ಲಿ ಬೇಯಿಸಬೇಕು. ಹಸಿ ಮಾಂಸವನ್ನು ಪ್ರತ್ಯೇಕ ಇಡಬೇಕು ಮತ್ತು ತಯಾರಿಸಬೇಕು ಎನ್ನುವುದು ಸಂಸ್ಥೆಯ ಹೇಳಿಕೆ.

ಇದನ್ನೂ ಓದಿ: Pawan Kalyan: ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ?! ಖ್ಯಾತ ನಟ ಬಿಚ್ಚಿಟ್ಟ ರಹಸ್ಯ!

Advertisement
Advertisement
Advertisement