For the best experience, open
https://m.hosakannada.com
on your mobile browser.
Advertisement

Mangaluru: ರಾಜರು ಕಟ್ಟಿದ ಕೋಟೆ ಉಳಿದಿಲ್ಲ, ಸಾವರ್ಕರ್‌ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ; ಇನ್ನು ದಕ್ಷಿಣ ಕನ್ನಡ ಯಾವ ಲೆಕ್ಕ- ಬಿಕೆ ಹರಿಪ್ರಸಾದ್‌

Mangaluru: ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ. ಸಾವರ್ಕರ್‌ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ. ಇದೆಲ್ಲ ಯಾವ ಲೆಕ್ಕ? ದಕ್ಷಿಣ ಕನ್ನಡ ಹಿಂದುತ್ವದ ಕೋಟೆ ಎಂಬ ಪ್ರಶ್ನೆಗೆ ಉತ್ತರ
06:25 PM Apr 03, 2024 IST | ಸುದರ್ಶನ್
UpdateAt: 06:35 PM Apr 03, 2024 IST
mangaluru  ರಾಜರು ಕಟ್ಟಿದ ಕೋಟೆ ಉಳಿದಿಲ್ಲ  ಸಾವರ್ಕರ್‌ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ  ಇನ್ನು ದಕ್ಷಿಣ ಕನ್ನಡ ಯಾವ ಲೆಕ್ಕ  ಬಿಕೆ ಹರಿಪ್ರಸಾದ್‌
Image Credit: Star of Mysore

Mangaluru: ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರು ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರವಾಗಿ, " ಹಿಂದೆ ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ. ಪುಡಿಯಾಗಿ ಹೋಗಿದೆ. ಮಹಾರಾಷ್ಟ್ರದಲ್ಲಿ ಸಾವರ್ಕರ್‌ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ. ಇದೆಲ್ಲ ಯಾವ ಲೆಕ್ಕ?" ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Government New Scheme: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಖಾತೆಗೆ ಬರಲಿದೆ 2500 ರೂ!

ಮಾಧ್ಯಮದ ಪ್ರಶ್ನೆಗೆ ಉತ್ತರ ಮುಂದುವರಿಸುತ್ತಾ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರಣಾಂತರಗಳಿಂದ ಬಿಜೆಪಿ ಗೆದ್ದಿದೆ. ಅದಕ್ಕೆ ಹಿಂದುತ್ವದ ಕೋಟೆ ಕಾರಣವಲ್ಲ, ಇದ್ಯಾವುದೇ ಕೋಟೆಗಳು ಉಳಿಯೋದಿಲ್ಲ ಎಂದು ಹೇಳಿದರು.

Advertisement

ದೇಶ ವಿಭಜನೆ ಮಾಡಿದವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದ್ದಾರೆಂಬ ಅಮಿತ್‌ ಷಾ ಟೀಕೆಗೆ ಪ್ರಶ್ನೆಗೆ ಕೇಳಿದಾಗ, ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ವಿಭಜನೆಯಾಗಿತ್ತು. ಅದು ಬಿಟ್ಟರೆ ಯಾರೋ ಹೇಳಿಕೆ ನೀಡಿದರೆ ದೇಶ ವಿಭಜನೆ ಆಗುತ್ತಾ? ಎಂದು ಹೇಳಿದರು.

ಇದನ್ನೂ ಓದಿ: ವಾರಕ್ಕೆ ಎಷ್ಟು ಸಲ ತಲೆಗೆ ಸ್ನಾನ ಮಾಡಿದ್ರೆ ಒಳ್ಳೆದು? ತಿಳಿದುಕೊಳ್ಳಲೇ ಬೇಕಾದ ವಿಚಾರವಿದು

Advertisement
Advertisement