For the best experience, open
https://m.hosakannada.com
on your mobile browser.
Advertisement

BJP Scamm List: ಕಾಂಗ್ರೆಸ್ ಟೈಮಲ್ಲಿ 2-3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ, ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್!!

09:12 AM Jul 20, 2024 IST | ಸುದರ್ಶನ್
UpdateAt: 09:12 AM Jul 20, 2024 IST
bjp scamm list  ಕಾಂಗ್ರೆಸ್ ಟೈಮಲ್ಲಿ 2 3 ಆದ್ರೆ ಬಿಜೆಪಿ ಅವಧಿಯಲ್ಲಾಗಿದೆ ಬರೋಬ್ಬರಿ 21 ಹಗರಣ  ಇಲ್ಲಿದೆ ನೋಡಿ ಸಿದ್ದರಾಮಯ್ಯ ರಿಲೀಸ್ ಮಾಡಿದ ಲಿಸ್ಟ್
Advertisement

BJP Scam List: ರಾಜ್ಯದಲ್ಲಿ ಮುಡಾ ಹಗರಣ(Muda Scam) ಹಾಗೂ ವಾಲ್ಮಿಕಿ ನಿಗಮದಲ್ಲಾದ ಹಗರಣಗಳು ಭಾರೀ ಸದ್ದು ಮಾಡುತ್ತಿವೆ. ವಿಧಾನಸಭಾ ಅಧಿವೇಶನದಲ್ಲಂತೂ(Assembly Session) ಈ ಹಗರಣಗಳದ್ದೇ ಕಾರುಬಾರು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಈ ವಿಚಾರಗಳನ್ನು ಇಟ್ಟುಕೊಂಡೇ ಹರಿಹಾಯುತ್ತಿವೆ. ಇದಕ್ಕೆ ಎದಿರೇಟು ನೀಡಿರುವ ಸಿದ್ದರಾಮಯ್ಯ ಅವರು ಬಿಜೆಪಿ ಅವಧಿಯಲ್ಲಾಗಿದ್ದ ಬರೋಬ್ಬರಿ 21 ಹಗರಣಗಳ ಪಟ್ಟಿಯನ್ನು ಬಯಲುಮಾಡಿದ್ದಾರೆ.

Advertisement

ಹೌದು, ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಸದನದಲ್ಲಿ ಹೇಳಿದಂತೆ ಇಂದು (ಜು.19) ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಪಟ್ಟಿಯನ್ನು ಮುಂದಿಟ್ಟು ವಿಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು, ಈ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Corporation Scam) ಬಗ್ಗೆ ಬಿಜೆಪಿ (BJP) ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.

ಸಿಎಂ ಬಿಡುಗಡೆ ಮಾಡಿದ ಹಗರಣಗಳ ಪಟ್ಟಿ:
* ಎಪಿಎಂಸಿ ಹಗರಣ – 2020-21 – 47.16 ಕೋಟಿ ರೂ.
* ಭೋವಿ ಅಭಿವೃದ್ಧಿ ನಿಗಮ – 2021-22 – 87.00 ಕೋಟಿ ರೂ.ಗಿಂತಲೂ ಹೆಚ್ಚು
* ದೇವರಾಜ ಅರಸು ಟ್ರಕ್ ಟರ್ಮಿನಲ್ – 2022-23 – ಶ್ರೀರಾಮುಲು 50.00 ಕೋಟಿ ರೂ.ಗಿಂತ ಅಧಿಕ
* ಗಂಗಾ ಕಲ್ಯಾಣ ಯೋಜನೆ – (ಅಂಬೇಡ್ಕರ್, ಭೋವಿ, ಆದಿಜಾಂಬವ, ಮುಂತಾದ ನಿಗಮಗಳು) 2021-22 – 430.00 ಕೋಟಿ ರೂ.ಗಿಂತ ಅಧಿಕ
* ಪ್ರವಾಸೋದ್ಯಮ ಇಲಾಖೆ 2021-22 – ಸಿ.ಪಿ ಯೋಗೇಶ್ವರ್ 2.47 ಕೋಟಿ ರೂ.
* ಕಿಯೋನಿಕ್ಸ್ ಹಗರಣ 2019 ರಿಂದ 2023 – ಅಶ್ವತ್ಥ್ನಾರಾಯಣ – 500 ಕೋಟಿ ರೂ. – ಸಿ.ಎ.ಜಿ. ವರದಿಯಲ್ಲಿ ಉಲ್ಲೇಖ
* ಕೋವಿಡ್ ಹಗರಣ – 2019-20 – ಕೆ.ಸುಧಾಕರ್ – 40,000 ಕೋಟಿಗೂ ಹೆಚ್ಚು ಹಗರಣ
* 40% ಹಗರಣ – 2019-20 – 2,000 ಕೋಟಿ ರೂ.ಗಿಂತ ಅಧಿಕ ಹಗರಣ

Advertisement

* ಪಿಎಸ್‌ಐ ಮತ್ತು ಇತರೆ ನೇಮಕಾತಿ – 2019-20 ಹಾಗೂ 2022-23 – ನೂರಾರು ಕೋಟಿ ರೂ.
* ಪರಶುರಾಮ ಥೀಮ್ ಪಾರ್ಕ್ ಹಗರಣ – 2022-23 – ವಿ. ಸುನೀಲ್‌ಕುಮಾರ್ – 11.00 ಕೋಟಿಗೂ ಹೆಚ್ಚು
* ಬಿಟ್‌ಕಾಯಿನ್ ಹಗರಣ – 2021 ರಿಂದ 2023 – ಸಾವಿರಾರು ಕೋಟಿ ರೂ. ಹಗರಣ
* ಯಡಿಯೂರಪ್ಪ ನವರ ಅಕ್ರಮ ಆಸ್ತಿ – 2021 – 750 ಕೋಟಿ ರೂ.ಗಿಂತ ಹೆಚ್ಚು
* ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣ – ನೂರಾರು ಕೋಟಿ
* ಯಡಿಯೂರಪ್ಪ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು.
* ಬಿಜೆಪಿ ಸರ್ಕಾರದ ಅಬಕಾರಿ ಸಚಿವರ ಹಗರಣದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು – ನೂರಾರು ಕೋಟಿ ರೂ. ಅಬಕಾರಿ
* ಕೆಕೆಆರ್‌ಡಿಬಿ ಹಗರಣ – 2019-20 ರಿಂದ ಏಪ್ರಿಲ್-2023 – ಪಿ. ಮುನಿರತ್ನ 200 ಕೋಟಿಗೂ ಹೆಚ್ಚು (ದತ್ತಾತ್ರೇಯ ಪಾಟೀಲರೇವೂರ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ)

* ಕಂದಾಯ ಇಲಾಖೆಯ ಹಗರಣ 2019-20 ರಿಂದ ಏಪ್ರಿಲ್-2023 – ಅಶೋಕ್ ಮೇಲೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ
* ಕೃಷಿ ಇಲಾಖೆಯಲ್ಲಿ 2021 ರಿಂದ 2023 – ಬಿ.ಸಿ.ಪಾಟೀಲ್ – ಕೃಷಿ ಇಲಾಖೆಯ ನೌಕರರೇ ಲಂಚ ವಸೂಲಿ ಮಾಡುತ್ತಿದ್ದ ಕುರಿತು
ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
* ಮೊಟ್ಟೆ ಹಗರಣ – 2019 ರಿಂದ 2021 – ಶಶಿಕಲಾ ಜೊಲ್ಲೆ ಪರಣ್ಣ ಮುನವಳ್ಳಿ ಕೂಡ ಭಾಗಿಯಾಗಿದ್ದರು.
* ಕೆಐಎಡಿಬಿ 2008 ರಿಂದ 2013 – ಕಟ್ಟಾ ಸುಬ್ರಮಣ್ಯ ನಾಯ್ಡು, ಮುರುಗೇಶ ನಿರಾಣಿ, ಮುಂತಾದವರು ಭಾಗಿಯಾಗಿದ್ದ ಬೃಹತ್ ಹಗರಣ ಕಾಂಡದ ಬಿಸಿ ಇನ್ನೂ ಆರಿಲ್ಲ.
* ಗಣಿ ಹಗರಣ, ಬಿಡಿಎ ಮತ್ತು ಕೆಐಎಡಿಬಿ ಡಿನೋಟಿಫಿಕೇಶನ್ ಹಗರಣ – ಬಿಎಸ್‌ವೈ ಸೇರಿ ಹಲವು ಸಚಿವರಗಳು ಜೈಲಿಗೆ ಹೋಗಿದ್ದಾರೆ.
* ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಬೃಹತ್ ಹಗರಣ – ಸಾವಿರಾರು ಕೋಟಿ ಹಗರಣ – ಐಟಿ, ಇಡಿ, ಸಿಬಿಐ ತನಿಖೆ ಇದುವರೆಗೆ ಯಾರನ್ನೂ ಬಂಧಿಸುವ ಕೆಲಸ ಆಗಿಲ್ಲ.

ಪಟ್ಟಿ ಬಿಡುಗಡೆ ಮಾಡಿದ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು 'ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಈ ಹಗರಣಗಳ ಬಗ್ಗೆ ತನಿಖೆ ಏಕೆ ನಡೆದಿಲ್ಲ? ಸಿಬಿಐ, ಇಡಿ, ಐಟಿ ಏಕೆ ತನಿಖೆಗೆ ಮುಂದಾಗಿಲ್ಲ? ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕರು ಘೋಷಣೆ ಕೂಗಿದರು.

Suryakumar Yadav: ಕಾಪು ಮಾರಿಕಾಂಬೆ ದರ್ಶನದ ಬೆನ್ನಲ್ಲೇ ಸೂರ್ಯಕುಮಾರ್ ಗೆ ಒಲಿಯಿತು ಅದೃಷ್ಟ, ಅರ್ಚಕರು ಹೇಳಿದಂತೆ ದಕ್ಕಿತು ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ !!

Advertisement
Advertisement
Advertisement