ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

BJP: ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಿಜೆಪಿಯ 10 ಪ್ರಮುಖ ಸಂಸದರು !!

11:08 PM Dec 06, 2023 IST | ಹೊಸ ಕನ್ನಡ
UpdateAt: 11:08 PM Dec 06, 2023 IST
Advertisement

BJP: ದೆಹಲಿಯಲ್ಲಿ ಚಳಿಗಾಲದ ಲೋಕಸಭಾ ಅಧಿವೇಶನ ನಡೆಯುತ್ತಿದ್ದು ಈ ವೇಳೆ ಬಿಜೆಪಿ 10 ಪ್ರಮುಖ ಸಂಸದರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅರೆ ಇದೇನು ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕಿಂಗ್ ನ್ಯೂಸ್ ಅಂದ್ಕೊಳ್ತಿದ್ದೀರಾ? ಹಾಗೇನೂ ಇಲ್ಲ. ಯಾಕೆಂದರೆ ಇದು ಸಂಭ್ರಮದಿಂದಲೇ ರಾಜೀನಾಮೆ ನೀಡಿರುವುದು.

Advertisement

ಹೌದು, ಕೆಲವು ದಿನಗಳ ಹಿಂದಷ್ಟೇ ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆ ನಡೆದ ರಾಜ್ಯಗಳಲ್ಲಿ ಇದೀಗ ರಾಜೀನಾಮೆ ನೀಡಿದ 10 ಮಂದಿ ಸಂಸದರು ಸ್ಪರ್ಧಿಸಿದ್ದರು. ಅವರೆಲ್ಲರೂ ಗೆಲುವನ್ನು ಸಾಧಿಸಿದ್ದಾರೆ. ಹೀಗಾಗಿ ಅವರೆಲ್ಲರೂ ಇನ್ನುಮುಂದೆ ತಮ್ಮ ತಮ್ಮ ರಾಜ್ಯಗಳಲ್ಲಿ ಶಾಸಕರಾಗಿ ಮುಂದುವರೆಯಲಿದ್ದು ನಿನ್ನೆ ದಿನ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನೇತೃತ್ವದಲ್ಲಿ ಸ್ಪೀಕರ್ ಅವರಿಗೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನು ಓದಿ: Elephant death: ಅರ್ಜುನನ ಬೆನ್ನಲ್ಲೇ ಮತ್ತೊಂದು ಆನೆ ಸಾವು !!

Advertisement

ರಾಜೀನಾಮೆ ನೀಡಿದ ಸಂಸದರು:
• ಮಧ್ಯಪ್ರದೇಶದಿಂದ (Madhya Pradesh) - ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ರಿತಿ ಪಾಠಕ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ.
• ರಾಜಸ್ಥಾನದಿಂದ (Rajasthan) ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾ ಮತ್ತು ದಿಯಾ ಕುಮಾರಿ ರಾಜೀನಾಮೆ ನೀಡಿದ್ದಾರೆ.
• ಛತ್ತೀಸ್‌ಗಢದಿಂದ (Chattisgarh) ಅರುಣ್ ಸಾವೊ ಮತ್ತು ಗೋಮತಿ ಸಾಯಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

Advertisement
Advertisement