ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

R Ashok ಅವರ ಹೇಳಿಕೆಗೆ ಬಜರಂಗದಳ ಕಾರ್ಯಕರ್ತರಲ್ಲಿ ಭುಗಿಲೆದ್ದ ಆಕ್ರೋಶ; ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಅಶೋಕ್‌

09:53 PM Feb 22, 2024 IST | ಹೊಸ ಕನ್ನಡ
UpdateAt: 09:53 PM Feb 22, 2024 IST

BJP Leader R.Ashok: ನಾನು ಗೃಹಸಚಿನಾಗಿದ್ದಾಗ ಭಾರೀ ಒತ್ತಡವಿತ್ತು. ನನಗೂ ಫೋನ್‌ ಕರೆಗಳು ಬಂದಿತ್ತು. ಆದರೆ ನಾನು ಯಾವುದೇ ಒತ್ತಡಕ್ಕೆ ಜಗ್ಗದೆ, ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಕೇಸ್‌ ಹಾಕಿಸಿದ್ದೆ ಎಂದು ಹೇಳಿದ್ದ ಆರ್ ಅಶೋಕ್‌ ಅವರಿಗೆ ಅವರು ಹೇಳಿದ ಮಾತೇ ಇದೀಗ ತಿರುಗುಬಾಣವಾಗಿ ಮಾರ್ಪಾಡಿದೆ. ಹೌದು, ಈ ಹೇಳಿಕೆ ವೈರಲ್‌ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗದಳ ಕೆಂಗಣ್ಣಿಗೆ ಗುರಿಯಾಗಿದ್ದ ಅಶೋಕ್‌ ಅವರು ಈ ಘಟನೆ ತೀವ್ರ ಸ್ವರೂಪ ಪಡೆದಿರುವುದನ್ನು ಕಂಡು ಹಿಂದೂ ಸಂಘಟನೆಗಳಿಗೆ ತಮ್ಮ ಕ್ಷಮೆಯನ್ನು ಕೋರಿದ್ದಾರೆ.

Advertisement

ಅಶೋಕ್‌ ಅವರ ಈ ಹೇಳಿಕೆಯಿಂದ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಕೆಂಡಾಮಂಡಲವಾಗಿದ್ದು, ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್‌ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರ ಬರೆದು ತೀವ್ರ ಒತ್ತಾಯ ಮಾಡಿತ್ತು. ಈ ಹಿನ್ನಲೆಯಲ್ಲಿ, ಘಟನೆ ತೀವ್ರ ಸ್ವರೂಪ ಪಡೆದಿರುವುದನ್ನು ಕಂಡು ಆರ್.ಅಶೋಕ್‌ ಅವರು ಬಜರಂಗದಳ ಕಾರ್ಯಕರ್ತರಿಲ್ಲಿ ಕ್ಷಮೆಯನ್ನು ಕೋರಿದ್ದಾರೆ.

"ರಾಮನಗರದ ವಕೀಲರು ಜ್ಞಾನವಾಪಿ ದೇಗುಲ ಬಗ್ಗೆ ಪೋಸ್ಟ್ ಮಾಡಿದ್ರು. ಆ ವಿಚಾರವಾಗಿ ಪ್ರಸ್ತಾಪಿಸಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಕೂಡ 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಆಶೋಕ್ ಹೇಳಿದ್ದಾರೆ.

Advertisement

ಗೃಹ ಸಚಿವರಾಗಿದ್ದಾಗ ತಾನು ಹೇಗೆ ಇದ್ದೆ ಎನ್ನುವುದನ್ನು ತೋರಿಸುವ ಭರದಲ್ಲಿ ಬಜರಂಗದಳ ವಿರುದ್ಧ ಗೂಂಡಾ ಕೇಸ್‌ ಹಾಕಿದ್ದೆ ಎಂದು ಅಶೋಕ್‌ ಅವರು ಹೇಳಿದ್ದರು. ಇದೇ ಹೇಳಿಕೆ ಅನಂತರ ತೀವ್ರ ಸ್ವರೂಪ ಪಡೆದಿದ್ದು, ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರಿಗೆ ಅವರ ಮಾತು ತಿರುಗುಬಾಣವಾಗಿ ಪರಿಣಮಿಸಿದೆ.

Advertisement
Advertisement
Next Article