For the best experience, open
https://m.hosakannada.com
on your mobile browser.
Advertisement

Birth Certificate: ಇನ್ನು ಜನನ-ಮರಣ ಪತ್ರ ಗ್ರಾಮ ಪಂಚಾಯತಿಯಲ್ಲಿ ಲಭ್ಯ

Birth Certificate: ಇನ್ನು ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡಲಾಗುತ್ತದೆ.
08:51 AM May 06, 2024 IST | ಸುದರ್ಶನ್
UpdateAt: 08:51 AM May 06, 2024 IST
birth certificate  ಇನ್ನು ಜನನ ಮರಣ ಪತ್ರ ಗ್ರಾಮ ಪಂಚಾಯತಿಯಲ್ಲಿ ಲಭ್ಯ

Birth Certificate: ಇನ್ನು ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡಲಾಗುತ್ತದೆ.

Advertisement

ಇದನ್ನೂ ಓದಿ: Australia: ಸಂಸದೆಗೆ ಡ್ರಗ್ಸ್ ನೀಡಿ ಲೈಂಗಿಕವಾಗಿ ಹಿಂಸೆ - ವಿಡಿಯೋ ವೈರಲ್ !!

ಜನನ, ಮರಣ ಸಂಭವಿಸಿದ 30 ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು. ಇದರಿಂದ ಅಧಿಕಾರಿಗಳು ಕಾರ್ಯದ ಒತ್ತಡದಲ್ಲಿದ್ದಾರೆ, ಇನ್ನೂ ಸಹಿ ಹಾಕಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಜನರು ಪದೇಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಾಗಿಲ್ಲ. ನೋಂದಣಿಯೂ ಬೇಗ ನಡೆಯಲಿದೆ. ನಂತರ ಪ್ರಮಾಣ ಪತ್ರವೂ ಸಿಗಲಿದೆ.

Advertisement

ಇದನ್ನೂ ಓದಿ: Madikeri: ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆ ರದ್ದು

ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೇ ಉಪ ನೋಂದಣಾಧಿಕಾರಿ ಆಗಿರುತ್ತಾರೆ. ಜನನ, ಮರಣ ಸಂಭವಿಸಿದ 30 ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಇವರೇ ವಿತರಿಸುವರು. 30 ದಿನಗಳ ನಂತರವಾದರೆ ಗ್ರಾಮ ಲೆಕ್ಕಾಧಿಕಾರಿಗಳು ನೋಂದಣಾಧಿಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಈ ಸಂಬಂಧ ಚುನಾವಣೆ ಬಳಿಕ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಪಂಚಾಯಿತಿಗಳಲ್ಲೂ ಈ ಸೇವೆ ಕಲ್ಪಿಸಲಾಗುವುದು. ಜತೆಗೆ, ವಿವಾಹ ನೋಂದಣಿಯೂ ಗ್ರಾಪಂಗಳಲ್ಲೇ ನಡೆಯಲಿದೆ. ಪಿಡಿಒಗಳನ್ನು ಜನನ- ಮರಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಪಂ ಕಾರ್ಯ ದರ್ಶಿಯವರನ್ನು ಉಪ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ

Advertisement
Advertisement