ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bihar Proud Daughters: ತನ್ನ 7 ಮಂದಿ ಹೆಣ್ಣು ಮಕ್ಕಳನ್ನು ಪೊಲೀಸ್ ಮಾಡಿದ ರೈತ - ಇಲ್ಲಿದೆ ನೋಡಿ ರೋಚಕ ಯಶೋಗಾಥೆ

05:30 PM Dec 05, 2023 IST | ಅಶ್ವಿನಿ ಹೆಬ್ಬಾರ್
UpdateAt: 05:32 PM Dec 05, 2023 IST
Advertisement

Bihar Proud Daughters : ಹೆಣ್ಣು (Girl)ಎಂದರೆ ಸಾಕು, ಕೆಲ ಪೋಷಕರು ತಾತ್ಸಾರ ಮನೋಭಾವನೆ ಬೆಳೆಸಿಕೊಂಡಿರುತ್ತಾರೆ. ಹೆಣ್ಣು ಎಂದರೆ ನಾಲ್ಕು ಗೋಡೆಗಷ್ಟೇ ಸೀಮಿತ ಎನ್ನುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಲ್ಲದು!! ಇದಕ್ಕೆ ನಿದರ್ಶನ ಎನ್ನುವ ಹಾಗೇ ಬಿಹಾರದ ಶರನ್ ಜಿಲ್ಲೆಯಲ್ಲಿ ರೈತರೊಬ್ಬರ 7 ಹೆಣ್ಣು ಮಕ್ಕಳು (Bihar Proud Daughters)ಉಳಿದವರಿಗೆ ಮಾದರಿಯಾಗಿದ್ದಾರೆ.

Advertisement

ಬಿಹಾರದ ಶರಣ್ ಜಿಲ್ಲೆಯ ಬಡ ರೈತ ರಾಜ್‌ಕುಮಾರ್ ಸಿಂಗ್ ಅವರು ತಮ್ಮ 7 ಜನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪೊಲೀಸ್ ಹಾಗೂ ರಕ್ಷಣಾ ಪಡೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆಗೆ ಬೆಂಬಲವಾಗಿ ನಿಂತಿದ್ದಾರೆ. ಬಿಹಾರದ ಶರಣ್ ಜಿಲ್ಲೆಯ ರೈತ ರಾಜ್‌ಕುಮಾರ್ ಸಿಂಗ್ (ಕಮಲ್ ಸಿಂಗ್‌) ಹಾಗೂ ಶಾರದಾ ದೇವಿ ಸಿಂಗ್ ಅವರ ಮಕ್ಕಳಲ್ಲಿ ಮೊದಲನೇ ಮಗಳು ರಾಣಿ ಸಿಂಗ್ ಅವರು ಬಿಹಾರ ಪೊಲೀಸ್ ಇಲಾಖೆಯಲ್ಲಿ (Bihar Police Department) ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡನೇ ಮಗಳು, ರೇಣು ಸಿಂಗ್ ಸಶಸ್ತ್ರ ಸೀಮಾ ಬಲದಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಮೂರನೇಯವಳು ಸೋನಿ ಸಿಂಗ್ (CRPF)ಸಿಆರ್‌ಪಿಎಫ್‌( ಕೇಂದ್ರ ಮೀಸಲು ಪೊಲೀಸ್ ಪಡೆ) ಯಲ್ಲಿ ಕೆಲಸ ಮಾಡುತ್ತಿದ್ದಾರಂತೆ.

ಇದನ್ನು ಓದಿ: Virat Kohli: ಪಂಚೆ ಉಟ್ಟವರಿಗೆ ಕೊಹ್ಲಿ 'ರೆಸ್ಟೋರೆಂಟ್'ಗೆ ಇಲ್ಲ ಪ್ರವೇಶ- ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ರಾ ಟೀಂ ಇಂಡಿಯಾ ಆಟಗಾರ ?!

Advertisement

4ನೇ ಮಗಳು ಪ್ರೀತಿ ಸಿಂಗ್ ಅಪರಾಧ ದಳದಲ್ಲಿ ಕೆಲಸ ಮಾಡುತ್ತಿದ್ದರೆ, 5ನೇ ಪುತ್ರಿ ಪಿಂಕಿ ಸಿಂಗ್ ಅಬಕಾರಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. 6ನೇಯ ಮಗಳು ರಿಂಕಿ ಸಿಂಗ್ ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ, ಪುತ್ರಿ ನಾನಿ ಸಿಂಗ್ ಸರ್ಕಾರಿ ರೈಲ್ವೆ ಪೊಲೀಸ್(GRP) ಆಗಿ ಕೆಲಸ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ರಾಜ್‌ಕುಮಾರ್ ಸಿಂಗ್ ಅವರ ಏಳು ಹೆಣ್ಣು ಮಕ್ಕಳು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉಳಿದವರಿಗೆ ಮಾದರಿಯಾಗಿದ್ದಾರೆ.

ಅಷ್ಟೆ ಅಲ್ಲದೇ, ಈ 7 ಜನ ಹೆಣ್ಣು ಮಕ್ಕಳು ಪೋಷಕರಿಗಾಗಿ ಪಟ್ಟಣದಲ್ಲಿ ಜಾಗ ತೆಗೆದು 4 ಅಂತಸ್ಥಿನ ಮನೆಯೊಂದನ್ನು ಕಟ್ಟಿಸಿದ್ದಾರಂತೆ. ಇದರಲ್ಲಿ ಬರುವ ಬಾಡಿಗೆ ಹಣವನ್ನು ಡಿಪಾಸಿಟ್ ಮಾಡಿ ಇಳಿವಯಸ್ಸಿನಲ್ಲಿ ತಮ್ಮ ಪೋಷಕರಿಗೆ ಪೆನ್ಷನ್ ಸಿಗುವ ವ್ಯವಸ್ಥೆ ಕೂಡ ಮಾಡಿದ್ದಾರಂತೆ. ಈ ಮನೆಗೆ ಸೆವೆನ್ ಸಿಸ್ಟರ್ ಪ್ಯಾಲೇಸ್ ಎಂದು ನಾಮಕರಣ ಮಾಡಲಾಗಿದೆ ಎನ್ನಲಾಗಿದೆ. ತಂದೆ ರಾಜ್‌ಕುಮಾರ್ ಸಿಂಗ್ ತಮ್ಮ 7 ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಬರೀ ಈ ಜನ್ಮದಲ್ಲಿ ಮಾತ್ರವಲ್ಲದೇ, ಪ್ರತಿ ಜನ್ಮದಲ್ಲೂ ಈ 7 ಮಕ್ಕಳು ನನ್ನ ಮಕ್ಕಳಾಗಿಯೇ ಹುಟ್ಟಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Related News

Advertisement
Advertisement