Prajwal Revanna Case: ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್ - ವೈರಲ್ ವಿಡಿಯೋಗಳು ಅಸಲಿ ಎಂದ FSL ವರದಿ !!
Prajwal Revanna Case: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ(Prajwal Revanna Case) ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವೈರಲ್ ಆಗಿರುವ ಎಲ್ಲಾ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಅಸಲಿ ಎನ್ನುವುದು ಸಾಬೀತಾಗಿದೆ.
ಹೌದು, ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ಹಂತದಲ್ಲಿರುವಾಗಲೇ ಮಹತ್ವದ ತಿರುವು ಪಡೆದುಕೊಂಡಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ವಿಡಿಯೋ ಅಸಲಿ ಎಂದು ಸಾಬೀತಾಗಿದ್ದು, ಎಸ್‌ಐಟಿ ತನಿಖೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಪ್ರಜ್ವಲ್ ರೇವಣ್ಣ ಈಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಎಸ್‌ಐಟಿ(SIT) ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಈಗ ವರದಿ ಎಸ್‌ಐಟಿ ಅಧಿಕಾರಿಗಳ ಕೈಸೇರಿದ್ದು, ವಿಡಿಯೋಗಳನ್ನು ತಿರುಚಿಲ್ಲ, ಎಲ್ಲವೂ ಅಸಲಿ ಎಂದು ಗೊತ್ತಾಗಿದೆ.
ವಿಡಿಯೋದಲ್ಲಿ ಇರುವುದು ಯಾರು:
ಸದ್ಯ ವಿಡಿಯೋಗಳು ಅಸಲಿ ಎಂದು ಪತ್ತೆಯಾಗಿದೆ. ಇನ್ನು ವಿಡಿಯೋದಲ್ಲಿರುವವರು ಹಾಗೂ ಬಂಧಿತರ ಹೋಲಿಕೆಯಾಗಬೇಕಿದೆ. ಈ ಬಗ್ಗೆ ತನಿಖಾಧಿಕಾರಿಗಳು ಅಗತ್ಯ ಪರಿಶೀಲನೆಯನ್ನು ಮಾಡಲಿದ್ದಾರೆ. ವಿಡಿಯೋದಲ್ಲಿರುವ ಮಹಿಳೆರನ್ನು ವಿಚಾರಣೆಗೆ ಒಳಪಡಿಸಿ ಸಾಕ್ಷಿ ಸಂಗ್ರಹ ಮಾಡುವ ಸಾಧ್ಯತೆ ಇದೆ.
Jail: ಜೈಲಿನ 40 ಕೈದಿಗಳು ಡ್ರಗ್ಸ್ ಸೇವಿಸಿರುವುದು ಪಕ್ಕಾ..! ಹಾಗಾದರೆ ಯಾವ ಜೈಲಿನಲ್ಲಿ ನಡೆಯಿತು ಈ ಘಟನೆ. ?